ETV Bharat / state

ಕೊಚ್ಚಿಹೋದ ರೈಲ್ವೆ ಹಳಿ: ಐದು ರೈಲುಗಳ ಸಂಚಾರ ರದ್ದು - ಹುಬ್ಬಳ್ಳಿ ಇಂದ ಬೆಳಗಾವಿ ಹೋಗುವ ರೈಲು

ಲೋಂಡಾ ಹಾಗೂ ತಿನೆಘಾಟ್ ನಡುವೆ ರೈಲು ಹಳಿ ಕೊಚ್ಚಿ ಹೋದ ಪರಿಣಾಮ ಹುಬ್ಬಳ್ಳಿ ಹಾಗೂ ಬೆಳಗಾವಿಯಿಂದ ಸಂಚರಿಸಬೇಕಿದ್ದ ಐದು ರೈಲುಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ರೈಲು ಹಳಿ ಕೊಚ್ಚಿ ಹೋಗಿದೆ.
author img

By

Published : Aug 6, 2019, 5:20 PM IST

ಹುಬ್ಬಳ್ಳಿ: ಎಡೆಬಿಡದೇ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ 5 ರೈಲುಗಳ ಸಂಚಾರ ರದ್ದು ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ವಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಲೋಂಡಾ ಹಾಗೂ ತಿನೆಘಾಟ್ ನಡುವೆ ರೈಲು ಹಳಿ ಕೊಚ್ಚಿ ಹೋದ ಪರಿಣಾಮ ಹುಬ್ಬಳ್ಳಿ ಹಾಗೂ ಬೆಳಗಾವಿಯಿಂದ ಸಂಚರಿಸಬೇಕಿದ್ದ ಐದು ರೈಲುಗಳನ್ನು ಸ್ಥಗಿತಗೊಳಿಸಲಾಗಿದೆ.

ಪಾಟ್ನಾ-ವಾಸ್ಕೋಡಿಗಾಮ (12742) ರೈಲು ಬೆಳಗಾವಿ ರೈಲು ನಿಲ್ದಾಣದಲ್ಲಿ ನಿಲುಗಡೆ ಮಾಡಲಾಗಿದೆ. ಹುಬ್ಬಳ್ಳಿ- ವಾಸ್ಕೋಡಿಗಾಮ ಸ್ಲೀಪರ್ ಕೋಚ್‌ (06948) ಲೋಂಡಾ ರೈಲು ನಿಲ್ದಾಣದಲ್ಲಿ ನಿಲ್ಲಿಸಲಾಗಿದೆ.

ರೈಲು ಹಳಿ ಕೊಚ್ಚಿ ಹೋಗಿದೆ.

ವಾಸ್ಕೋಡಿಗಾಮ- ಹೌರಾ ಎಕ್ಸ್‌ಪ್ರೆಸ್‌ ರೈಲು (18048), ಹಜ್ರತ್ ನಿಜಾಮುದ್ದಿನ್ ಎಕ್ಸ್‌ಪ್ರೆಸ್‌ (12780)ಅನ್ನು ಹುಬ್ಬಳ್ಳಿಯ ರೈಲು ನಿಲ್ದಾಣದಲ್ಲಿ ತಡೆದು ನಿಲ್ಲಿಸಲಾಗಿದೆ. ವಾಸ್ಕೋಡಿಗಾಮ-ಬೆಂಗಳೂರು ಎಕ್ಸ್‌ಪ್ರೆಸ್‌ ರೈಲ (02779)ಅನ್ನು ಲೋಂಡಾದಲ್ಲಿ ನಿಲ್ಲಿಸಲಾಗಿದೆ.

ರೈಲು ಹಳಿ ದುರಸ್ತಿ ಕಾರ್ಯ ಭರದಿಂದ ಸಾಗಿದ್ದು, ರೈಲು ಹಳಿ ದುರಸ್ತಿಯಾಗುವವರೆಗೂ ಸಂಪೂರ್ಣವಾಗಿ ಈ‌ ಭಾಗದ ರೈಲು ಸಂಚಾರ ಸ್ಥಗಿತಗೊಳಿಸಿದ್ದಾಗಿ ನೈರುತ್ಯ ರೈಲ್ವೆ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Intro:ಹುಬ್ಬಳ್ಳಿ-04
ನಿರಂತರ ಸುರಿಯುತ್ತಿರುವ ಮಳೆ ಹಿನ್ನೆಲೆಯಲ್ಲಿ ಐದು ರೈಲುಗಳ ಸಂಚಾರ ರದ್ದು ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ವಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಲೋಂಡಾ ಹಾಗೂ ತಿನೆಘಾಟ್ ನಡುವೆ ರೈಲು ಹಳಿ ಕೊಚ್ಚಿ ಹೋದ ಪರಿಣಾಮ ಹುಬ್ಬಳ್ಳಿ ಹಾಗೂ ಬೆಳಗಾವಿಯಿಂದ ಸಂಚರಿಸಬೇಕಿದ್ದ ಐದು ರೈಲುಗಳ ಸಂಚಾರ ಸ್ಥಗಿತ ಮಾಡಲಾಗಿದೆ.
ಪಾಟ್ನಾ -ವಾಸ್ಕೋಡಿಗಾಮ್ (12742)ರೈಲು ಬೆಳಗಾವಿ ರೈಲು ನಿಲ್ದಾಣದಲ್ಲಿ ನಿಲುಗಡೆ ಮಾಡಲಾಗಿದೆ. ಹುಬ್ಬಳ್ಳಿ- ವಾಸ್ಕೋಡಿಗಾಮಾ ಸ್ಲೀಪರ್ ಕೋಚ್‌ (06948)
ಲೋಂಡಾ ರೈಲು ನಿಲ್ದಾಣದಲ್ಲಿ ತಡೆ ನೀಡಲಾಗಿದೆ.
ವಾಸ್ಕೋಡಿಗಾಮಾ- ಹೌರಾ ಎಕ್ಸ್‌ಪ್ರೆಸ್‌ ರೈಲು (18048),
ಹಜ್ರತ್ ನಿಜಾಮುದ್ದಿನ್ ಎಕ್ಸ್‌ಪ್ರೆಸ್‌ (12780)
ಹುಬ್ಬಳ್ಳಿಯ ರೈಲು ನಿಲ್ದಾಣದಲ್ಲಿ ತಡೆದು ನಿಲ್ಲಿಸಲಾಗಿದೆ.
ವಾಸ್ಕೋಡಿಗಾಮಾ ಬೆಂಗಳೂರು ಎಕ್ಸ್‌ಪ್ರೆಸ್‌ ರೈಲು (02779)ಲೋಂಡಾದಲ್ಲಿ ತಡೆ ನೀಡಲಾಗಿದೆ. ರೈಲು ಹಳಿ ದುರಸ್ತಿ ಕಾರ್ಯ ಭರದಿಂದ ಸಾಗಿದ್ದು, ರೈಲು ಹಳಿ ದುರಸ್ತಿಯಾಗುವವರೆಗೂ ಸಂಪೂರ್ಣವಾಗಿ ಈ‌ಭಾಗದ ರೈಲು ಸಂಚಾರ ಸ್ಥಗಿತಗೊಳಿಸಿದ್ದಾಗಿ ನೈರುತ್ಯ ರೈಲ್ವೆ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.Body:H B GaddadConclusion:Etv hubli
ETV Bharat Logo

Copyright © 2025 Ushodaya Enterprises Pvt. Ltd., All Rights Reserved.