ಹುಬ್ಬಳ್ಳಿ: 21 ಹೊಸ ಕೋವಿಡ್ ಕೇಸ್ ಪತ್ತೆಯಾದ ಹಿನ್ನೆಲೆ ಹುಬ್ಬಳ್ಳಿಯ ನಾಲ್ಕು ಶಾಲೆಗಳನ್ನು ಬಂದ್ ಮಾಡಲಾಗಿದೆ. ಒಂದು ಶಾಲೆಯಲ್ಲಿ ಈವರೆಗೆ 10 ಪ್ರಕರಣಗಳು, ಇನ್ನೊಂದರಲ್ಲಿ 8, ಮತ್ತೊಂದರಲ್ಲಿ 2 ಹಾಗೂ ಮಗದೊಂದರಲ್ಲಿ 1 ಪ್ರಕರಣ ಪತ್ತೆಯಾಗಿದೆ.
ಪಾಸಿಟಿವ್ ಬಂದ 21 ಜನರಲ್ಲಿ ನಾಲ್ವರು ಶಿಕ್ಷಕರು ಎನ್ನಲಾಗಿದೆ. ಸೋಂಕಿತರೆಲ್ಲರೂ ಹೋಂ ಕ್ವಾರಂಟೈನ್ನಲ್ಲಿದ್ದಾರೆ. ಯಾರಲ್ಲಿಯೂ ತೀವ್ರ ತರವಾದ ಲಕ್ಷಣ ಕಂಡು ಬಂದಿಲ್ಲ. ಮುಂದಿನ ಆದೇಶದವರೆಗೂ ನಾಲ್ಕು ಶಾಲೆಗಳನ್ನು ಬಂದ್ ಮಾಡಲು ಸೂಚಿಸಲಾಗಿದೆ.
ಕೊರೊನಾ ದೃಢಪಟ್ಟವರ ಸಂಪರ್ಕಕ್ಕೆ ಬಂದಿರುವವರನ್ನು ಗುರುತಿಸಿ ಟೆಸ್ಟ್ ಮಾಡಲಾಗುತ್ತಿದೆ. ಜತೆಗೆ ಆಯಾ ಶಾಲೆಗಳಲ್ಲಿ ಸ್ಯಾನಿಟೈಸ್ ಸೇರಿದಂತೆ ಅಗತ್ಯ ಕ್ರಮಗಳನ್ನು ಜಿಲ್ಲಾಡಳಿತ ಸೂಚನೆಯಂತೆ ಕೈಗೊಳ್ಳಲಾಗಿದೆ.
ಇದನ್ನೂ ಓದಿ: ರಾಜ್ಯಾದ್ಯಂತ ಬೂಸ್ಟರ್ ಡೋಸ್ ಲಸಿಕಾಭಿಯಾನಕ್ಕೆ ಸಿಎಂ ಚಾಲನೆ: ಸ್ಪುಟ್ನಿಕ್ ಲಸಿಕೆ ಪಡೆದವರಿಗಿಲ್ಲ ಬೂಸ್ಟರ್ ಡೋಸ್