ಧಾರವಾಡ : ಇಲ್ಲಿನ ಹೋಯ್ಸಳ ನಗರದ ಬಳಿಯ ನಟರಾಜ ವೈನ್ಸ್‌ನಲ್ಲಿ ಕಳ್ಳನೋರ್ವ ಬರೋಬ್ಬರಿ 3 ಲಕ್ಷ ರೂಪಾಯಿ ಕದ್ದು ಪರಾರಿಯಾಗಿದ್ದಾನೆ. ಸೆ.9ರಂದು ಈ ಘಟನೆ ನಡೆದಿದೆ. ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಧಾರವಾಡ ಹೊಯ್ಸಳ ನಗರ ಹತ್ತಿರದ ಆರ್ ಎಸ್ ಪ್ರಭಾಕರ್ ಎಂಬುವರಿಗೆ ಸೇರಿದ ನಟರಾಜ ವೈನ್ಸ್‌ನಲ್ಲಿ ಕಳ್ಳತನವಾಗಿದೆ. ಮೊದಲು ಹಣ ಹೊತ್ತೊಯ್ದು ಬಳಿಕ ಮದ್ಯದ ಬಾಟಲ್ಗಳನ್ನ ಚೀಲದಲ್ಲಿ ತುಂಬಿಕೊಂಡು ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಉಪನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕಾಂಗ್ರೆಸ್ ಮುಖಂಡನ ಹತ್ಯೆ, ಮೂವರು ಆರೋಪಿಗಳ ಬಂಧನ: ವಿವಾಹೇತರ ಸಂಬಂಧ ಕಾರಣ?