ETV Bharat / state

ಧಾರವಾಡದಲ್ಲಿ ಮೂವರು ಸರಗಳ್ಳರ ಬಂಧನ - ಸರಗಳ್ಳರ ಬಂಧನ

ಧಾರವಾಡ ಸೇರಿದಂತೆ ಅನೇಕ ಕಡೆಗಳಲ್ಲಿ ಸರಗಳ್ಳತನ ಮಾಡಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ವಿದ್ಯಾಗಿರಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಲಕ್ಷಾಂತರ ರೂ. ಮೌಲ್ಯ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

3 chain snatchers arrested
ಧಾರವಾಡದಲ್ಲಿ ಮೂವರು ಸರಗಳ್ಳರ ಬಂಧನ
author img

By

Published : Oct 29, 2020, 8:35 AM IST

ಧಾರವಾಡ: ನಗರ ಸೇರಿದಂತೆ ವಿವಿಧೆಡೆ ಕಡೆಗಳಲ್ಲಿ ಸರಗಳ್ಳತನ ಮಾಡುತ್ತಿದ್ದ ಮೂವರು ಆರೋಪಿಗಳನ್ನು ವಿದ್ಯಾಗಿರಿ ಪೊಲೀಸರು ಬಂಧಿಸಿದ್ದಾರೆ.

ಮಹಾರಾಷ್ಟ್ರ ಮೂಲದ ಅಲಿರಾಜಾ ಇರಾಣಿ, ಬೀದರ್​​ನ ಬಿಲಾಲ್ ಇರಾಣಿ ಹಾಗೂ ಮಧ್ಯಪ್ರದೇಶ ಮೂಲದ ಗುಲಾಮ ಅಲಿ ಇರಾಣಿ ಬಂಧಿತ ಆರೋಪಿಗಳು. ಧಾರವಾಡ ಸೇರಿದಂತೆ ಅನೇಕ ಕಡೆಗಳಲ್ಲಿ ಇವರು ಸರಗಳ್ಳತನ ಮಾಡಿ ಪರಾರಿಯಾಗಿದ್ದರು. ಹುಬ್ಬಳ್ಳಿ, ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ಲಾಬುರಾಮ್ ಮಾರ್ಗದರ್ಶನದ ಮೇರೆಗೆ ಎಸಿಪಿ ಅನುಷಾ ಹಾಗೂ ವಿದ್ಯಾಗಿರಿ ಠಾಣೆ ಇನ್ಸ್​​ಪೆಕ್ಟರ್ ಬಸಾಪುರ ಅವರನ್ನೊಳಗೊಂಡ ತಂಡ ಈ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಬಂಧಿತರಿಂದ 1 ಬೈಕ್, 3 ಮೊಬೈಲ್, 13,190 ಗ್ರಾಂ ತೂಕದ ಚಿನ್ನಾಭರಣ ಸೇರಿದಂತೆ ಒಟ್ಟು 1,44,440 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.