ಧಾರವಾಡ : ಜಿಲ್ಲೆಯಲ್ಲಿ ನಿಜಾಮುದ್ದೀನ್ ಸಭೆಯಲ್ಲಿ ಪಾಲ್ಗೊಂಡಿದ್ದ 34 ಮಂದಿ ಆರೋಗ್ಯ ತಪಾಸಣೆಗೊಳಗಾಗಿದ್ದರು. ಅದರಲ್ಲೀಗ 17 ಮಂದಿಯ ಪರೀಕ್ಷಾ ವರದಿ ಕೊರೊನಾ ನೆಗೆಟಿವ್ ಎಂದು ಬಂದಿದೆ. ಆದರೆ, ಇನ್ನೂ 17 ಮಂದಿಯ ವರದಿ ಬರಬೇಕಿದೆ.
ದೆಹಲಿಯಲ್ಲಿ ನಡೆದ ನಿಜಾಮುದ್ದೀನ್ ಧರ್ಮ ಸಭೆಯಲ್ಲಿ ಧಾರವಾಡದ 34 ಮಂದಿ ಭಾಗವಹಿಸಿದ್ದರು ಎಂದು ಜಿಲ್ಲಾಡಳಿತ ಗುರುತಿಸಿ ಅವರೆಲ್ಲರ ಆರೋಗ್ಯ ತಪಾಸಣೆ ನಡೆಸಿತ್ತು. ಸದ್ಯ ಅದರಲ್ಲಿ ನಿನ್ನೆ 17 ಜನರ ವರದಿ ನೆಗೆಟಿವ್ ಎಂದು ಬಂದಿದೆ. ಇನ್ನುಳಿದ 17 ಜನರ ವರದಿ ಬರುವುದು ಬಾಕಿಯಿದೆ.