ETV Bharat / state

ಧಾರವಾಡದಲ್ಲಿ15 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆ: 198ಕ್ಕೆ ಏರಿದ ಸೋಂಕಿತರ ಸಂಖ್ಯೆ

author img

By

Published : Jun 21, 2020, 8:49 PM IST

ಧಾರವಾಡದಲ್ಲಿ ಇಂದು 15 ಕೊರೊನಾ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 198ಕ್ಕೆ ಏರಿಕೆಯಾಗಿದೆ.

ಧಾರವಾಡದಲ್ಲಿ15 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆ

ಧಾರವಾಡ: ಜಿಲ್ಲೆಯಲ್ಲಿ ಇಂದು ಒಂದೇ ದಿನ 15 ಜನರಲ್ಲಿ ಸೋಂಕು ಪತ್ತೆಯಾಗಿದೆ. ಇದರಿಂದ ಒಟ್ಟು ಸೋಂಕಿತರ ಸಂಖ್ಯೆ 198ಕ್ಕೆ ಏರಿಕೆಯಾಗಿದೆ.

ನಗರದ ಕೆಂಪಗೇರಿ ನಿವಾಸಿ ಕಿಮ್ಸ್ ವೈದ್ಯನಿಗೆ ಸೋಂಕು ತಗುಲಿದೆ. ವೈದ್ಯನಿಂದ ರೋಗಿ-8751 ಮತ್ತು ರೋಗಿ-8752 ಇಬ್ಬರಿಗೂ ತಗುಲಿದೆ. ಹುಬ್ಬಳ್ಳಿ ಉಣಕಲ್ಲನ ರೋಗಿ-7384ರ ಸಂಪರ್ಕದಿಂದ ನಾಲ್ವರಿಗೆ ಸೋಂಕು ತಗುಲಿದೆ. ಹುಬ್ಬಳ್ಳಿ ನೂರಾನಿ ಪ್ಲಾಟ್‌ನ ರೋಗಿ-7036ರಿಂದ ಇಬ್ಬರಿಗೆ ಸೋಂಕು ಹರಡಿದ್ದು, ಅಣ್ಣಿಗೇರಿ ತಾಲೂಕಿನ ಕೊಂಡಿಕೊಪ್ಪ ಗ್ರಾಮದ ರೋಗಿ-6839ರಿಂದ ಒಬ್ಬರಿಗೆ, ಹುಬ್ಬಳ್ಳಿ ಕೃಷಿ ಕಾರ್ಮಿಕ ನಗರದ ರೋಗಿ-6254ರ ಸಂಪರ್ಕದಿಂದ ಯುವತಿಗೆ, ಮೊರಬದ ರೋಗಿ-7948ರಿಂದ ಒಬ್ಬನಿಗೆ ಸೋಂಕು ಕಾಣಿಸಿಕೊಂಡಿದೆ.

ಮಹಾರಾಷ್ಟ್ರದಿಂದ ಬಂದಿದ್ದ ಇಬ್ಬರಿಗೆ, ಬಹರೇನ್‌ದಿಂದ ಬಂದಿರೋ ಓರ್ವನಿಗೆ ಕಂಟೇನ್​ಮೆಂಟ್​​ ಝೋನ್‌ಗೆ ಭೇಟಿ ನೀಡಿದ ಯುವಕನಿಗೂ ಸೋಂಕು ಕಾಣಿಸಿಕೊಂಡಿದೆ. ಸೋಂಕಿತರಿಗೆ ಹುಬ್ಬಳ್ಳಿ ಕಿಮ್ಸ್​​ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.