ETV Bharat / state

ಧಾರವಾಡ ಜಿಲ್ಲೆಯಲ್ಲಿ ಶೇ.11.09 ರಷ್ಟು ಕೋವಿಡ್ ಪಾಸಿಟಿವಿಟಿ ದರ - Etv Bharat Kannada

ಜಿಲ್ಲೆಯಲ್ಲಿ ಕೋವಿಡ್​ ಪ್ರಕರಣದ ದರ ಹೆಚ್ಚಾಗಿದ್ದು ಸಾರ್ವಜನಿಕರು ಮುನ್ನೆಚ್ಚರಿಕೆ ಲಸಿಕೆ ಪಡೆದು ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕೆಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

KN_DWD_1_covid_dc_manavi_av_KA10001
ಕೋವಿಡ್ ಪ್ರಕರಣ
author img

By

Published : Aug 8, 2022, 10:18 PM IST

ಧಾರವಾಡ: ಜಿಲ್ಲೆಯಾದ್ಯಂತ ಅಗಸ್ಟ್ ತಿಂಗಳಾರಂಭದಿಂದ ಈವರೆಗೆ 482 ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಆಗಸ್ಟ್ 7 ರಂದು ಜಿಲ್ಲೆಯಲ್ಲಿ ಒಟ್ಟು 338 ಸಕ್ರಿಯ ಪ್ರಕರಣಗಳು ಪತ್ತೆಯಾಗಿವೆ. 33 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಿದ್ದಾರೆ. ಓರ್ವ ವ್ಯಕ್ತಿ ಮೃತಪಟ್ಟಿದ್ದಾರೆ. 305 ರೋಗಿಗಳು ಮನೆಯಲ್ಲಿಯೇ ಇದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಕಳೆದ ಏಳು ದಿನಗಳಿಂದ ಶೇ. 11.09 ಪಾಸಿಟಿವಿಟಿ ದರವಿದೆ. ಲಸಿಕೆ ಮೂಲಕ ಸೋಂಕು ತಡೆಯಬಹುದು. ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ತಕ್ಷಣ ಸಮೀಪದ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ಒಟ್ಟು ಕೋವಿಡ್ ಚಿಕಿತ್ಸೆಗೆ ಖಾಸಗಿ ಮತ್ತು ಸರಕಾರಿ ಆಸ್ಪತ್ರೆಗಳಲ್ಲಿ 3,425 ಹಾಸಿಗೆಗಳು ಲಭ್ಯವಿದ್ದು, ಅದರಲ್ಲಿ 1,902 ಆಮ್ಲಜನಕ ಪೂರೈಕೆ ಸೌಲಭ್ಯವುಳ್ಳ ಹಾಸಿಗೆಗಳು, 356 ಐಸಿಯು ಹಾಸಿಗೆಗಳು ಹಾಗೂ 195 ವೆಂಟಿಲೇಟರ್ ಸೌಲಭ್ಯವಿರುವ ಹಾಸಿಗೆಗಳು ಲಭ್ಯವಿರುತ್ತವೆ.

ಕೋವಿಡ್ ಲಸಿಕಾ ಕಾರ್ಯಕ್ರಮವೂ ಪ್ರಗತಿಯಲ್ಲಿದೆ. 18 ವರ್ಷದ ಮೇಲ್ಪಟ್ಟವರಿಗೆ 1ನೇ ಡೋಸಿನ 14,44,000 ಗುರಿ ನಿಗದಿಪಡಿಸಲಾಗಿತ್ತು. ಅದರಲ್ಲಿ 15,08,467 ಲಸಿಕೆ ನೀಡಿ, ಪ್ರತಿಶತ 104.46 ಪ್ರಗತಿ ಸಾಧಿಸಲಾಗಿದೆ. 15,18,666 ಎರಡನೇ ಡೋಸಿನ ಲಸಿಕೆಯನ್ನು ನೀಡಿ ಪ್ರತಿಶತ 105.17 ಸಾಧನೆ ಮಾಡಲಾಗಿದೆ. ಶಾಲೆಗಳಲ್ಲಿ ಲಸಿಕಾ ಕಾರ್ಯಕ್ರಮ ಪ್ರಗತಿಯಲ್ಲಿದೆ.

15 ರಿಂದ 17 ವರ್ಷದ 95,744 ಮಕ್ಕಳಿಗೆ ಲಸಿಕೆ ನೀಡುವ ಗುರಿ ಇದೆ. ಪ್ರಥಮ ಡೋಸ್ 83,806 ಆಗಿದ್ದು ಪ್ರತಿಶತ 87.50 ರಷ್ಟು ಸಾಧಿಸಲಾಗಿದೆ. ಇಲ್ಲಿಯವರೆಗೆ 77,205 ಎರಡನೇ ಡೋಸ್ ನೀಡಲಾಗಿದ್ದು, ಪ್ರತಿಶತ 80.61 ರಷ್ಟು ಸಾಧಿಸಲಾಗಿದೆ. 12 ವರ್ಷದಿಂದ 14 ವರ್ಷದ 60,020 ಮಕ್ಕಳಿಗೆ ಕೋವಿಡ್ ಲಸಿಕೆ ಗುರಿ ಇದೆ. ಇಲ್ಲಿಯವರೆಗೆ ಪ್ರಥಮ ಡೋಸಿನಲ್ಲಿ 72,524 ಮಕ್ಕಳಿಗೆ ಲಸಿಕೆಯನ್ನು ನೀಡಿದ್ದು, ಪ್ರಗತಿಯು ಶೇ.120.83 ರಷ್ಟಾಗಿದೆ. 2ನೇ ಡೋಸ್ ಪ್ರಗತಿಯು 53,688 ಆಗಿದ್ದು, ಪ್ರತಿಶತ 89.45 ರಷ್ಟಾಗಿದೆ.

ಮುನ್ನೆಚ್ಚರಿಕೆ ಡೋಸ್ 13,23,626 ಗುರಿ ಇದ್ದು, ಇಲ್ಲಿಯವರೆಗೆ 1,89,551 ಲಸಿಕೆ ನೀಡಿ ಪ್ರತಿಶತ 14.32 ರಷ್ಟು ಗುರಿ ಸಾಧಿಸಲಾಗಿದೆ. ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿದೆ. ಕೊವ್ಯಾಕ್ಸಿನ್ 26,350 ಡೋಸ್, ಕೋವಿಶೀಲ್ಡ್ 33,020 ಡೋಸ್ ಮತ್ತು ಮಕ್ಕಳಿಗೆ ನೀಡುವ ಕಾರ್ಬಿವ್ಯಾಕ್ಸ್ 3,880 ಡೋಸ್‍ಗಳು ಲಭ್ಯ ಇರುತ್ತವೆ. ಕಳೆದ ಜನವರಿ 1 ರಿಂದ ಆಗಸ್ಟ್ 7ರ ವರೆಗೆ 3,57,732 ಕೋವಿಡ್ ಮಾದರಿ (ಸ್ಯಾಂಪಲ್)ಗಳನ್ನು ಪರೀಕ್ಷೆ ಮಾಡಲಾಗಿದೆ. ಅದರಲ್ಲಿ 23,793 ಪಾಸಿಟಿವ್ ವರದಿಯಾಗಿದೆ. ಅದರಂತೆ, 23,430 ಜನರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಗರ್ಭಕೋಶಕ್ಕೆ ಕತ್ತರಿ ಪ್ರಕರಣ.. ಮತ್ತೆ ಸಿಎಂ ನಿವಾಸಕ್ಕೆ ಪಾದಯಾತ್ರೆಗೆ ಮುಂದಾದ ಸಂತ್ರಸ್ತರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.