ETV Bharat / state

ದಾವಣಗೆರೆ: ಸೇತುವೆಗೆ ಡಿಕ್ಕಿ ಹೊಡೆದು ಹಳ್ಳಕ್ಕೆ ಬಿದ್ದ ಕಾರು; ಎಎಸ್‌ಐ ಪುತ್ರ ಸಾವು

ದಾವಣಗೆರೆ ಜಿಲ್ಲೆಯ ಮಾಸಡಿ ಗ್ರಾಮದ ಬಳಿಯಿರುವ ಸೇತುವೆಗೆ ಕಾರು ಡಿಕ್ಕಿ ಹೊಡೆದು ಮಹೇಶ್ವರ ಹಳ್ಳಕ್ಕೆ ಬಿದ್ದಿದ್ದು ಯುವಕ ಸಾವನ್ನಪ್ಪಿದ್ದಾನೆ.

youth dies in a road accident at davanagere
ಸೇತುವೆಗೆ ಡಿಕ್ಕಿ ಹೊಡೆದು ಹಳ್ಳಕ್ಕೆ ಬಿದ್ದ ಕಾರು
author img

By

Published : Nov 27, 2022, 10:01 AM IST

ದಾವಣಗೆರೆ: ಜಿಲ್ಲೆಯ ಹೊನ್ನಾಳಿ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಸೇತುವೆಗೆ ಡಿಕ್ಕಿ ಹೊಡೆದ ಕಾರು ಹಳ್ಳಕ್ಕೆ ಬಿದ್ದು ಯುವಕ ಸಾವನ್ನಪ್ಪಿದ್ದಾನೆ.

ಪ್ರಕಾಶ್ ಚೆಂಬಪ್ಪ (28) ಮೃತ ಯುವಕ. ಈತ ಬೆಳಗಾವಿ ಜಿಲ್ಲೆಯ ಬಸವನಕುಡಚಿ ಗ್ರಾಮದ ಸಹಾಯಕ ಪೊಲೀಸ್ ಸಬ್​ ಇನ್ಸ್​ಪೆಕ್ಟರ್ ಚೆಂಬಪ್ಪ ಎಂಬುವರ ಪುತ್ರ. ಬೆಳಗಾವಿಯಿಂದ ಶಿವಮೊಗ್ಗಕ್ಕೆ ತನ್ನ ಸ್ನೇಹಿತರನ್ನು ಬಿಟ್ಟು ಹರಿಹರ ಮಾರ್ಗವಾಗಿ ಒಬ್ಬನೇ ಹಿಂದಿರುಗುವಾಗ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ದುರ್ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.

ಸೇತುವೆಗೆ ಡಿಕ್ಕಿ ಹೊಡೆದು ಹಳ್ಳಕ್ಕೆ ಬಿದ್ದ ಕಾರು

ಇದನ್ನೂ ಓದಿ: ತುಂಗಾ ಕಾಲುವೆಗೆ ಬಿದ್ದ ಕಾರಿನಲ್ಲಿ ಅಣ್ಣನ ಮಗನ ಶವ ಪತ್ತೆ.. ಮುಗಿಲು ಮುಟ್ಟಿದ ರೇಣುಕಾಚಾರ್ಯ ಆಕ್ರಂದನ

ಕಾರಿನಲ್ಲಿ ಎರಡು ಏರ್ ಬ್ಯಾಗ್ ಓಪನ್ ಆಗಿದ್ದು, ಮೃತದೇಹ ಕಾರಿನ ಹಿಂಭಾಗದ ಸೀಟಿನಲ್ಲಿ ಪತ್ತೆಯಾಗಿದೆ. ಪ್ರಕಾಶ್ ಸಾವು ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.