ದಾವಣಗೆರೆ: ಕೊರೊನಾ ನಿರ್ಮೂಲನೆಗಾಗಿ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ದೇವರ ಮೊರೆ ಹೋಗಿದ್ದಾರೆ. ಹೊನ್ನಾಳಿ-ನ್ಯಾಮತಿ ತಾಲೂಕುಗಳಲ್ಲಿ ಸೋಂಕು ಹೋಗಲಾಡಿಸಲು ಶಾಸಕರು ಹೋಮ ಮಾಡಿಸಿದ್ದು, ಗುಣಮುಖರಾದವರಿಗೆ ಹೋಳಿಗೆ ಊಟ ಉಣಬಡಿಸಿದ್ದಾರೆ.
ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಿರುವ ಕಾರಣ ಇನ್ನೊಂದು ವಾರ ಲಾಕ್ಡೌನ್ ಮುಂದುವರೆಸಲಾಗಿದೆ. ಆದ್ರೆ, ಶಾಸಕ ಎಂ.ಪಿ.ರೇಣುಕಚಾರ್ಯ, ದೇವರ ಮೊರೆ ಹೋಗಿದ್ದು, ಧನ್ವಂತರಿ ಹಾಗೂ ಮೃತ್ಯುಂಜಯ ಹೋಮಗಳನ್ನು ಮಾಡಿಸಿದ್ದಾರೆ. ಈ ಪೂಜಾ ಕೈಂಕರ್ಯದಲ್ಲಿ ಕೋವಿಡ್ನಿಂದ ಗುಣಮುಖರಾಗಿರುವ 50ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು.
ತಾಲೂಕಿನ ಅರಬಗಟ್ಟೆ ಗ್ರಾಮದಲ್ಲಿರುವ ಕೋವಿಡ್ ಕೇರ್ ಸೆಂಟರ್ನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಿರೇಕಲ್ಮಠದ ಶ್ರೀ ಒಡೆಯರ್ ಚೆನ್ನಮಲ್ಲಿಕಾರ್ಜುನ ಸ್ವಾಮೀಜಿ ಭಾಗಿಯಾಗಿದ್ದರು. ಕೊರೊನಾ ಸೋಂಕಿತರ ಸೇವೆಯಲ್ಲಿ ತೊಡಗಿರುವ ರೇಣುಕಾಚಾರ್ಯರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.
ಇದನ್ನೂ ಓದಿ:ರೇಣುಕಾಚಾರ್ಯರಂಥ ಗಂಡ ಸಿಕ್ಕಿರುವುದು ಏಳೇಳು ಜನ್ಮದ ಪುಣ್ಯ: ಸುಮಿತ್ರಾ ರೇಣುಕಾಚಾರ್ಯ
ಕೋವಿಡ್ ಕೇರ್ ಸೆಂಟರ್ನಲ್ಲಿ ಹೋಮ ಮಾಡಿಸಿದ್ದಕ್ಕಾಗಿ ಶಾಸಕ ರೇಣುಕಾಚಾರ್ಯರ ವಿರುದ್ಧ ತಹಶೀಲ್ದಾರ್ ಗರಂ ಆದ್ರು.