ETV Bharat / state

Free Bus: ಉಚಿತ ಬಸ್​ ಪ್ರಯಾಣ ಶುರು - ಸಂತಸ ವ್ಯಕ್ತಪಡಿಸಿದ ಮಹಿಳೆಯರು - etv bharat kannada

ಇಂದಿನಿಂದ ಜಾರಿಯಾಗಿರುವ 'ಶಕ್ತಿ ಯೋಜನೆ' ಕುರಿತು ಮಹಿಳೆಯರು ಸಂತಸ ವ್ಯಕ್ತಪಡಿಸಿದ್ದಾರೆ.

Etv Bharatwomens-reaction-on-free-bus-scheme-of-karnataka-government
free bus: ಉಚಿತ ಬಸ್​ ಪ್ರಯಾಣ ಶುರು - ಸಂತಸ ವ್ಯಕ್ತಪಡಿಸಿದ ಮಹಿಳೆಯರು
author img

By

Published : Jun 11, 2023, 3:51 PM IST

Updated : Jun 11, 2023, 5:01 PM IST

ಶಕ್ತಿ ಯೋಜನೆ ಕುರಿತು ಮಹಿಳೆಯರ ಸಂತಸ

ದಾವಣಗೆರೆ: ಕಾಂಗ್ರೆಸ್ ಪಕ್ಷದ ಮಹಾತ್ವಕಾಂಕ್ಷೆ ಯೋಜನೆಯಾದ ಶಕ್ತಿ ಯೋಜನೆಗೆ ಚಾಲನೆ ದೊರೆತಿದೆ. ರಾಜ್ಯಾದಂತ್ಯ ಮಹಿಳೆಯರು ಸಂತಸ ವ್ಯಕ್ತಪಡಿಸಿದ್ರೇ, ಈ ಯೋಜನೆಯು ಹಣ ವಿಲ್ಲದವರಿಗೆ ಆಸರೆಯಾಗಿದೆ ಎಂದು ಕೆಲ ಮಹಿಳೆಯರು ಸರ್ಕಾರಕ್ಕೆ ಧನ್ಯವಾದ ತಿಳಿಸಿದರು. ಇನ್ನು ಮಹಿಳಾ ಬಸ್​ ನಿರ್ವಾಹಕಿಯರು ಸಹ ಶಕ್ತಿ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣವನ್ನು ನೀಡುತ್ತಿರುವುದಕ್ಕೆ ಶುಭಕೋರಿದ್ದಾರೆ.

ದಾವಣಗೆರೆ ನಗರದ ಕೆಎಸ್ಆರ್​ಟಿಸಿ ಬಸ್ ನಿಲ್ದಾಣದಲ್ಲಿ ಇಂದು ಸಾಕಷ್ಟು ಮಹಿಳಾ ಪ್ರಯಾಣಿಕರು ಗುರುತಿನ ಚೀಟಿ ಹಿಡಿದು ಉಚಿತ ಬಸ್​ ಪ್ರಯಾಣ ಮಾಡಲು ಉತ್ಸುಕರಾಗಿದ್ದರು. ಈ ವೇಳೆ ಮಹಿಳಾ ಪ್ರಯಾಣಿಕರಾದ ರೇಣುಕಾ ಮಾತನಾಡಿ, ಹಣವಿಲ್ಲದ ಬಡತನ ರೇಖೆಗಿಂತ ಕೆಳ ಮಟ್ಟದಲ್ಲಿರುವ ಮಹಿಳೆಯರಿಗೆ ಈ ಯೋಜನೆ ಅನುಕೂಲ ಆಗಲಿದ್ದು, ಸಾಕಷ್ಟು ಮಹಿಳೆಯರು ಇದರ ಉಪಯೋಗವನ್ನು ಪಡೆದುಕೊಳ್ಳಲಿದ್ದಾರೆ. ಇನ್ನು ಉಚಿತ ಪ್ರಯಾಣ ಮಾಡಲು ಗುರುತಿನ ಚೀಟಿಯಾದ ಆಧಾರ್​ ಕಾರ್ಡ್​ನ್ನು ಜೊತೆ ತಂದಿದ್ದೇನೆ. ನಾನು ದಾವಣಗೆರೆಯಿಂದ ಬೆಳಗಾವಿಗೆ ಪ್ರಯಾಣ ಬೆಳೆಸಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದರು. ಮಹಿಳಾ ಪ್ರಯಾಣಿಕರಾದ ಲಕ್ಷ್ಮಿ ಮಾತನಾಡಿ, ಉಚಿತ ಬಸ್​ ಪ್ರಯಾಣ ಯೋಜನೆ ಕಷ್ಟದಲ್ಲಿರುವವರಿಗೆ ಅನುಕೂಲ ಆಗಲಿದೆ‌ ಎಂದರು.

ಬಸ್​ ನಿರ್ವಾಹಕಿ ರಾಜೇಶ್ವರಿ ಮಾತನಾಡಿ, ಸರ್ಕಾರದ ಈ ಆದೇಶವನ್ನು ಗೌರವಿಸುತ್ತೀವಿ ಹಾಗೂ ಮಹಿಳೆಯರಿಗೆ ಉತ್ತಮವಾದ ಸೇವೆಯನ್ನು ನೀಡುತ್ತೇವೆ. ಮಹಿಳೆ ನಮ್ಮ ರಾಜ್ಯದವರೇ ಎಂಬುದಕ್ಕೆ ಆಧಾರ್​ ಕಾರ್ಡ್​, ರೇಷನ್​ ಕಾರ್ಡ್​ ಅಥವಾ ಸರ್ಕಾರದ ಯಾವುದಾದರೂ ಗುರುತಿನ ಚೀಟಿಯನ್ನು ತೋರಿಸಿ ಪ್ರಯಾಣ ಮಾಡಬಹುದು. ಮೂರು ತಿಂಗಳ ನಂತರ ಶಕ್ತಿ ಯೋಜನೆಯ ಸ್ಮಾರ್ಟ್​ ಕಾರ್ಡ್​ ತೋರಿಸಬೇಕು. ಮಹಿಳೆಯರಿಗೆ ಉಚಿತ ಬಸ್​ ಪ್ರಯಾಣ ಯೋಜನೆ ತಂದಿರುವುದಕ್ಕೆ ಖುಷಿಯಾಗುತ್ತದೆ. ಬಸ್​ ಸಿಬ್ಬಂದಿಗಳೊಂದಿಗೆ ಮಹಿಳೆಯರು ಸಹಕಾರದಿಂದ ನಡೆದುಕೊಳ್ಳಬೇಕೆಂದು ಮನವಿ ಮಾಡಿದರು.

ಬಸ್​ ನಿರ್ವಾಹಕಿ ಸುಮಾ ಮಾತನಾಡಿ, ಸರ್ಕಾರ ನೀಡಿರುವ ಆದೇಶವನ್ನು ನಾವು ಅದನ್ನು ಪಾಲಿಸುತ್ತೇವೆ, ಹೆಣ್ಣು ಮಕ್ಕಳಿಗೆ ಉಚಿತ ಬಸ್​ ಪ್ರಯಾಣ ಯೋಜನೆ ತಂದಿರುವುದಕ್ಕೆ ಖುಷಿಯಾಗುತ್ತದೆ. ಇದರಿಂದ ಬಡವರಿಗೆ ಅನುಕೂಲವಾಗಲಿದೆ. ಮಹಿಳೆಯರು ಉಚಿತ ಬಸ್​ ಪ್ರಯಾಣ ಮಾಡಲು ಯಾವುದಾದರೂ ರಾಜ್ಯ ಮತ್ತು ಕೇಂದ್ರ ಸರ್ಕಾರ ನೀಡುವ ಭಾವಚಿತ್ರ ವಿರುವ ಗುರುತಿನ ಚೀಟಿಯನ್ನು ತೋರಿಸಬೇಕು ಎಂದು ಹೇಳಿದರು.

ಇದನ್ನೂ ಓದಿ:Free Bus: ಉಚಿತ ಬಸ್ ಪ್ರಯಾಣ- ಮಹಿಳಾ ಪ್ರಯಾಣಿಕರು ಏನಂತಾರೆ?

ಶಕ್ತಿ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ: ರಾಜ್ಯದ ಎಲ್ಲ ಮಹಿಳೆಯರು ಮತ್ತು ವಿದ್ಯಾರ್ಥಿನಿಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವ 'ಶಕ್ತಿ ಯೋಜನೆ'ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಚಾಲನೆ ನೀಡಿದ್ದಾರೆ. ವಿಧಾನಸೌಧ ಮುಂಭಾಗ ಯೋಜನೆಯ ಉದ್ಘಾಟನಾ ಸಮಾರಂಭ ನಡೆಯಿತು. ಕಾಂಗ್ರೆಸ್ ಪಕ್ಷವು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದ 5 ಗ್ಯಾರಂಟಿ ಯೋಜನೆಗಳಲ್ಲಿ ಜಾರಿಯಾಗಿರುವ ಮೊದಲ ಯೋಜನೆ ಇದಾಗಿದೆ. ರಾಜ್ಯಾದ್ಯಂತ ಏಕಕಾಲಕ್ಕೆ ಶಕ್ತಿ ಯೋಜನೆ ಉದ್ಘಾಟನೆಗೊಂಡಿದೆ. ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಶಾಸಕರು ಚಾಲನೆ ನೀಡಿದ್ದಾರೆ.

Last Updated : Jun 11, 2023, 5:01 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.