ETV Bharat / state

ಚಂದ್ರು ಅಗಲಿಕೆ ನೋವಿನಲ್ಲಿರುವ ರೇಣುಕಾಚಾರ್ಯಗೆ ಉಪಹಾರ ತಿನ್ನಿಸಿದ ಮಹಿಳೆಯರು - Chandrashekhar death

ಸಹೋದರನ ಮಗನನ್ನು ಕಳೆದುಕೊಂಡು ನೋವಿನಲ್ಲಿರುವ ಶಾಸಕ ಎಂಪಿ ರೇಣುಕಾಚಾರ್ಯ ನಿವಾಸಕ್ಕೆ ಮಾದೇಹಳ್ಳಿ ಗ್ರಾಮದ ಮಹಿಳೆಯರು ಆಗಮಿಸಿ ಬೆಳಗಿನ ಉಪಹಾರ ತಿನ್ನಿಸಿದರು.

women fed renukacharya
ರೇಣುಕಾಚಾರ್ಯಗೆ ತುತ್ತು ತಿನ್ನಿಸಿದ ಮಹಿಳೆಯರು
author img

By

Published : Nov 5, 2022, 1:49 PM IST

Updated : Nov 5, 2022, 3:12 PM IST

ದಾವಣಗೆರೆ: ಶಾಸಕ ಎಂಪಿ ರೇಣುಕಾಚಾರ್ಯ ತಮ್ಮನ ಮಗನನ್ನು ಕಳೆದುಕೊಂಡು ನೋವಿನಲ್ಲಿದ್ದಾರೆ. ಮಾದೇಹಳ್ಳಿ ಗ್ರಾಮದ ಮಹಿಳೆಯರು, ಶಾಸಕರ ನಿವಾಸಕ್ಕೆ ಆಗಮಿಸಿ ರೇಣುಕಾಚಾರ್ಯ ಅವರಿಗೆ ಬೆಳಗಿನ ಉಪಹಾರ ತಿನ್ನಿಸಿದ್ದಾರೆ.

ರೇಣುಕಾಚಾರ್ಯಗೆ ತುತ್ತು ತಿನ್ನಿಸಿದ ಮಹಿಳೆಯರು

ಚಂದ್ರು ಸಾವಿನ ನೋವಲ್ಲಿರುವ ರೇಣುಕಾಚಾರ್ಯ ಕುಟುಂಬಕ್ಕೆ ಸಾಂತ್ವನ‌ದ ಮಹಾಪೂರವೇ ಹರಿದುಬರುತ್ತಿದೆ. ವಿವಿಧ ಗ್ರಾಮದ ಮುಖಂಡರು, ಶಾಸಕರು ಆಗಮಿಸಿ ಕುಟುಂಬಸ್ಥರಿಗೆ ಸಾಂತ್ವನ ನೀಡುತ್ತಿದ್ದಾರೆ. ಗ್ರಾಮಗಳ ಮಹಿಳೆಯರು ಮನೆಯಿಂದ ಅಡುಗೆ ಮಾಡಿಕೊಂಡು ಬಂದು ಶಾಸಕರಿಗೆ ಕೈ ತುತ್ತು ತಿನ್ನಿಸಿದ್ದಾರೆ. ಶಾಸಕರು ಅವರ ಪ್ರೀತಿಗೆ ಧನ್ಯವಾದ ತಿಳಿಸಿದ್ದಾರೆ.

ಪೊಲೀಸರ ವಿರುದ್ಧ ಬಿಜೆಪಿ ಕಾರ್ಯಕರ್ತರ ಆಕ್ರೋಶ: ಹೊನ್ನಾಳಿ ಶಾಸಕ ರೇಣುಕಾಚಾರ್ಯ ತಮ್ಮನ ಮಗ ಚಂದ್ರಶೇಖರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೋಲಿಸರ ವಿರುದ್ಧ ಬಿಜೆಪಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ. ಇದು ಪೂರ್ವ ನಿಯೋಜಿತ ಕೊಲೆ ಎಂದು ಆರೋಪ ಮಾಡಿದ್ದಾರೆ.

ನಾವು ಎಲ್ಲಾ ಸಾಕ್ಷಿಗಳನ್ನು ಪೊಲೀಸರಿಗೆ ಹುಡುಕಿಕೊಟ್ಟಿದ್ದೇವೆ. ಡ್ರೋನ್ ಬಳಸಿ ಕಾರು ಪತ್ತೆ ಮಾಡಿದ್ದು ನಾವೇ. ಆದರೆ ನಾವೇ ಕಾರು ಪತ್ತೆ ಮಾಡಿದ್ದು, ಓವರ್ ಸ್ಪೀಡ್​​ನಲ್ಲಿ ಇದ್ದರಿಂದ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಹೇಳುತ್ತಿದ್ದಾರೆ. ಪೋಲಿಸರು ಸರಿಯಾದ ಹಂತದಲ್ಲಿ ಪತ್ತೆ ಮಾಡಿಲ್ಲ. ತನಿಖೆ ಕೂಡ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಚಂದ್ರು ಕೈಗೆ ಹಗ್ಗ ಕಟ್ಟಿದ್ದಾರೆ... ಇದು ವ್ಯವಸ್ಥಿತ ಕೊಲೆ: ಶಾಸಕ ರೇಣುಕಾಚಾರ್ಯ ಆರೋಪ

Last Updated : Nov 5, 2022, 3:12 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.