ETV Bharat / state

ಉಪಚುನಾವಣೆಯಲ್ಲಿ 13 ಸ್ಥಾನಗಳಲ್ಲಿ ಬಿಜೆಪಿಗೆ ಗೆಲುವು.. ಸಚಿವ ಬೊಮ್ಮಾಯಿ ವಿಶ್ವಾಸ - ಔರದ್ಕರ ವರದಿ ಸರಿದೂಗಿಸಿದ್ದೇವೆ

ದಾವಣಗೆರೆ ನಗರದ ಎಂಬಿಎ ಕಾಲೇಜಿನ ಮೈದಾನದಲ್ಲಿ‌ ಮಾತನಾಡಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು, ಕನಿಷ್ಠ 15 ಸ್ಥಾನಗಳಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಸವರಾಜ್ ಬೊಮ್ಮಾಯಿ
author img

By

Published : Nov 18, 2019, 7:18 PM IST

ದಾವಣಗೆರೆ: ಬಂಡಾಯಗಳನ್ನೆಲ್ಲ ಸರಿಪಡಿಸಿ ಉಪಚುನಾವಣೆಯಲ್ಲಿ ಕನಿಷ್ಠ 13 ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತೇವೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ದಾವಣಗೆರೆ ನಗರದ ಎಂಬಿಎ ಕಾಲೇಜಿನ ಮೈದಾನದಲ್ಲಿ‌ ಮಾತನಾಡಿದ ಅವರು, ಹಿರೇಕೆರೂರು ಹಾಗೂ ರಾಣೆಬೆನ್ನೂರು ಕ್ಷೇತ್ರಗಳಿಗೆ ಇಂದು ಭೇಟಿ ನೀಡಿದ್ದೆ. ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಆ ಎರಡು ಕ್ಷೇತ್ರಗಳ‌ ಜೊತೆಗೆ ಕನಿಷ್ಠ 13 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದರು.

ಚುನಾವಣೆ ಬಂದಾಗ ಬಂಡಾಯ ಇದ್ದೇ ಇರುತ್ತದೆ. ಟಿಕೆಟ್ ಸಿಗದೇ ಇದ್ದೋರು ಬೇಜಾರು ಆಗುತ್ತಾರೆ. ಇವೆಲ್ಲವನ್ನುೂ ನಿಭಾಯಿಸಿ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. ಇಂದಿನವರೆಗೆ ಮಾಡಿರುವ ಕೆಲಸಗಳು ಹಾಗೂ ಮುಂದಿನ ಮೂರು ವರ್ಷ ಆಗಬೇಕಾದ ಕೆಲಸವನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ ಎಂದರು.

13 ಸ್ಥಾನಗಳಲ್ಲಿ ನಾವು ಗೆಲುವು ಸಾಧಿಸುತ್ತೇವೆ.. ಸಚಿವ ಬಸವರಾಜ್ ಬೊಮ್ಮಾಯಿ

ಮಹಾರಾಷ್ಟ್ರದಲ್ಲಿ ಪಕ್ಷಾಂತರ ಮಾಡಿರುವರು ಸೋತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾರಾಯಣ ರಾಣೆ ಶಿವಸೇನೆ ಬಿಟ್ಟು ಕಾಂಗ್ರೆಸ್​​ಗೆ ಬೆಂಬಲಿಗರ ಸಮೇತ ಹೋಗಿದ್ದರು, ಅವರು ಎಲ್ಲರೂ ಗೆದ್ದಿದ್ದರು. ಆಯಾ ಕ್ಷೇತ್ರ, ಒಟ್ಟು ರಾಜಕೀಯ ಚುನಾವಣೆಯಲ್ಲಿ ಪ್ರಭಾವ ಬೀರುತ್ತೆ ಎಂದರು.

ಔರಾದ್ಕರ್ ವರದಿ ಸರಿದೂಗಿಸಿದ್ದೇವೆ:

ಔರಾದ್ಕರ್ ವರದಿ ಬೇಸಿಕ್ ಸ್ಯಾಲರಿ ವ್ಯತ್ಯಾಸ ಇತ್ತು. ಅಗ್ನಿಶಾಮಕ ಹಾಗೂ ಜೈಲು ಅಧಿಕಾರಿಗಳ ವೇತನ ಸಮಸ್ಯೆ ಇತ್ತು. ಸರಿದೂಗಿಸುವ ಪ್ರಯತ್ನ ಮಾಡಿದ್ದೇವೆ, ಮುಂದೆ ಹಣಕಾಸು ಇಲಾಖೆ ನೋಡಿಕೊಳ್ಳುತ್ತದೆ ಎಂದು ತಿಳಿಸಿದರು.

ತನ್ವೀರ್​​ ಸೇಠ್ ಆರೋಗ್ಯವಾಗಿದ್ದಾರೆ:

ತನ್ವಿರ್ ಸೇಠ್ ಮೇಲೆ ಯುವಕ ಹಲ್ಲೆ ನಡೆಸಿರುವ ಬಗ್ಗೆ ಸಂಪೂರ್ಣ ಮಾಹಿತಿ ಪಡೆದಿದ್ದೇನೆ. ಈಗಾಗಲೇ ಯುವಕನನ್ನು ವಶಕ್ಕೆ ಪಡೆಯಲಾಗಿದೆ. ಸೇಠ್ ಅವರು‌ ಕೂಡ ಆರೋಗ್ಯವಾಗಿದ್ದಾರೆ. ಆ ಯುವಕ ಯಾವ ಕಾರಣಕ್ಕೆ ಹಲ್ಲೆ ನಡೆಸಿದ ಎಂದು ತನಿಖೆ ನಡೆಯುತ್ತಿದೆ. ಆದಷ್ಟೂ ಬೇಗ ಪ್ರಕರಣದ ಪೂರ್ಣ ಮಾಹಿತಿ ನೀಡುತ್ತೇವೆ ಎಂದು‌ ತಿಳಿಸಿದರು.

Intro:ದಾವಣಗೆರೆ; ಬಂಡಾಯಗಳನ್ನೆಲ್ಲ ಸರಿಪಡಿಸಿ ಉಪಚುನಾವಣೆಯಲ್ಲಿ ಕನಿಷ್ಠ 13 ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತೇವೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ..

ದಾವಣಗೆರೆ ನಗರದ ಎಂಬಿಎ ಕಾಲೇಜಿನ ಮೈದಾನದಲ್ಲಿ‌ ಮಾತನಾಡಿದ ಅವರು, ಹಿರೇಕೆರೂರು ಹಾಗೂ ರಾಣೆಬೆನ್ನೂರು ಕ್ಷೇತ್ರಗಳಿಗೆ ಇಂದು ಭೇಟಿ ನೀಡಿದ್ದೆ, ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಆ ಎರಡು ಕ್ಷೇತ್ರಗಳ‌ ಜೊತೆಗೆ ಕನಿಷ್ಟ ,13 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದರು..

Body:ಚುನಾವಣೆ ಬಂದಾಗ ಬಂಡಾಯ ಇದ್ದೆ ಇರುತ್ತದೆ, ಟಿಕೆಟ್ ಸಿಗದೇ ಇದ್ದೋರು ಬೇಜಾರು ಆಗುತ್ತಾರೆ. ಇವೆಲ್ಲವನ್ನು‌ ನಿಭಾಯಿಸಿ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ, ಇಂದಿನವರೆಗೆ ಮಾಡಿರುವ ಕೆಲಸಗಳು ಹಾಗೂ ಮುಂದಿನ ಮೂರು ವರ್ಷ ಆಗಬೇಕಾದ ಕೆಲಸವನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ ಎಂದರು. ಮಹಾರಾಷ್ಟ್ರ ದಲ್ಲಿ ಪಕ್ಷಾಂತರ ಮಾಡಿರುವುದು ಸೋತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾರಾಯಣ ರಾನೆ ಶಿವಸೇನೆ ಬಿಟ್ಟು ಕಾಂಗ್ರೆಸ್ ಗೆ ಬೆಂಬಲಿಗರ ಸಮೇತ ಹೋಗಿದ್ದರು, ಅವರು ಎಲ್ಲರು ಗೆದ್ದಿದ್ದರು. ಆಯಾ ಕ್ಷೇತ್ರ, ಒಟ್ಟು ರಾಜಕೀಯ ಚುನಾವಣೆಯಲ್ಲಿ ಪ್ರಭಾವ ಬೀರುತ್ತೆ ಎಂದರು.

ಔರದ್ಕರ ವರದಿ ಸರಿದೂಗಿಸಿದ್ದೇವೆ..

ಔರದಕರ್ ವರದಿ ಬೇಸಿಕ್ ಸ್ಯಾಲರಿ ವ್ಯತ್ಯಾಸ ಇತ್ತು, ಅಗ್ನಿಶಾಮಕ ಹಾಗೂ ಜೈಲು ಅಧಿಕಾರಿಗಳ ವೇತನ ಸಮಸ್ಯೆ ಇತ್ತು, ಸರಿದೂಗಿಸುವ ಪ್ರಯತ್ನ ಮಾಡಿದ್ದೇವೆ, ಮುಂದೆ ಹಣಕಾಸು ಇಲಾಖೆ ನೋಡಿಕೊಳ್ಳುತ್ತದೆ ಎಂದು ತಿಳಿಸಿದರು..

Conclusion:ಶೇಠ್ ಆರೋಗ್ಯವಾಗಿದ್ದಾರೆ..

ತನ್ವಿರ್ ಸೇಠ್ ಮೇಲೆ ಯುವಕ ಹಲ್ಲೆ ನಡೆಸಿರುವ ಬಗ್ಗೆ ಪೂರ್ಣ ಮಾಹಿತಿ ಪಡೆದಿದ್ದೇನೆ. ಈಗಾಗಲೇ ಯುವಕನನ್ನು ವಶಕ್ಕೆ ಪಡೆಯಲಾಗಿದೆ. ಸೇಠ್ ಅವರು‌ ಕೂಡ ಆರೋಗ್ಯವಾಗಿದ್ದಾರೆ. ಆ ಯುವಕ ಯಾವ ಕಾರಣಕ್ಕೆ ಹಲ್ಲೆ ನಡೆಸಿದ ಎಂದು ತನಿಖೆ ನಡೆಯುತ್ತಿದೆ. ಆದಷ್ಟೂ ಬೇಗ ಪ್ರಕರಣದ ಪೂರ್ಣ ಮಾಹಿತಿ ನೀಡುತ್ತೇವೆ ಎಂದು‌ ತಿಳಿಸಿದರು..

ಪ್ಲೊ..

ಬೈಟ್; ಬಸವರಾಜ್ ಬೊಮ್ಮಾಯಿ.. ಗೃಹ ಸಚಿವ..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.