ದಾವಣಗೆರೆ: ವಾಲ್ಮೀಕಿ ಜನಾಂಗದ ಬಹು ಬೇಡಿಕೆಯಾಗಿರುವ 7.5 ರಷ್ಟು ಮೀಸಲಾತಿಯನ್ನು ರಾಜ್ಯ ಸರ್ಕಾರ ನೀಡದೆ, ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡುತ್ತಿದೆ, ಹೀಗಾಗಿ ಮತ್ತೆ ಹೋರಾಟ ಮಾಡಿ ಮೀಸಲಾತಿ ಪಡೆಯುತ್ತೇವೆ ಎಂದು ವಾಲ್ಮೀಕಿ ಶ್ರೀ ಪ್ರಸನ್ನಾನಂದಪುರಿ ಸ್ವಾಮಿಜಿ ಎಚ್ಚರಿಕೆ ನೀಡಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ರಾಜನಹಳ್ಳಿ ವಾಲ್ಮೀಕಿ ಗುರುಪೀಠದಲ್ಲಿ ಮಾತನಾಡಿದ ಶ್ರೀಗಳು, ವಾಲ್ಮೀಕಿ ಜನಾಂಗಕ್ಕೆ 7.5 ಮೀಸಲಾತಿ ಹೆಚ್ಚಿಸುವ ಹಿನ್ನಲೆ ಹೋರಾಟಕ್ಕೆ ಮಣೆದು ಅಂದಿನ ಸಮ್ಮಿಶ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಿ ಸಮಯ ಕೇಳಿತ್ತು, ಈಗ ಆ ಅವಧಿ ಮುಗಿದಿದೆ, ಹೀಗಾಗಿ ನಾವು ಮತ್ತೆ ಹೋರಾಟ ಮಾಡಿ ಮೀಸಲಾತಿಪಡೆಯುತ್ತೇವೆ ಎಂದರು.
50% ಮೀಸಲಾತಿ ಮೀರಬಾರದು ಎಂದು ಸಂವಿಧಾನದಲ್ಲಿ ಇಲ್ಲ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಜನಸಂಖ್ಯೆಗೆ ಅನುಗುಣವಾಗಿ ಕೊಡಬೇಕು ಎಂದು ಸಂವಿಧಾನ ಹೇಳಿದೆ. ಆದರೆ, ರಾಜ್ಯ ಸರ್ಕಾರಗಳು ಇಚ್ಚಾಶಕ್ತಿ ತೋರಿಲ್ಲ, ಸರ್ಕಾರ ಕಿವಿಯಲ್ಲಿ ಹೂ ಇಡೋಕೆ ಬಂದರೆ ಕೇಳಲ್ಲ, ಹೋರಾಟ ಮಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.