ದಾವಣಗೆರೆ: ಘಟಾನುಘಟಿಗಳು ರಾಜೀನಾಮೆ ನೀಡಲಿದ್ದಾರೆ, ಮೈತ್ರಿ ಸರ್ಕಾರ ಬಿದ್ದರೆ ಅದಕ್ಕೆ ಹೊಣೆ ನಾವಲ್ಲ. ಕಾದು ನೋಡಿ ಎಂದು ದಾವಣಗೆರೆಯಲ್ಲಿ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೊಸ ಬಾಂಬ್ ಸಿಡಿಸಿದ್ದಾರೆ.
ಬಿಜೆಪಿ ಆಪರೇಷನ್ ಕಮಲ ಮಾಡಲ್ಲ, ಸರ್ಕಾರದ ಕಾರ್ಯವೈಖರಿಗೆ ಬೇಸತ್ತು ಘಟಾನುಘಟಿಗಳೇ ರಾಜೀನಾಮೆ ಕೊಡ್ತಾರೆ. ಅಧಿವೇಶನದ ಒಳಗೆ ಸರ್ಕಾರ ಬಿದ್ದರೆ ಅದಕ್ಕೆ ನಾವು ಹೊಣೆಯಲ್ಲ. ನಾವು ಸನ್ಯಾಸಿಗಳಲ್ಲ, ಸರ್ಕಾರ ಬಿದ್ದರೆ ಬಿಜೆಪಿ ಸರ್ಕಾರ ರಚನೆ ಮಾಡುತ್ತೇವೆ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್, ಪರಮೇಶ್ವರ್, ಕುಮಾರಸ್ವಾಮಿ, ರೇವಣ್ಣ ಈ ನಾಲ್ವರ ಸರ್ಕಾರ ಇದು. ಇವರಿಂದ ಶಾಸಕರು ಬೇಸತ್ತು ರಾಜೀನಾಮೆ ನೀಡುತ್ತಿದ್ದಾರೆ. ದಿನೇಶ್ ಗುಂಡೂರಾವ್ ರಿವರ್ಸ್ ಆಪರೇಷನ್ ಮಾಡುತ್ತೇವೆ ಎಂದಿದ್ದಾರೆ. ತಾಕತ್ ಇದ್ದರೆ ಬಿಜೆಪಿಯ ಒಬ್ಬ ಶಾಸಕನನ್ನು ಮಾತನಾಡಿಸಿ ನೋಡಲಿ ಎಂದು ಸವಾಲ್ ಹಾಕಿದರು.