ETV Bharat / state

ಕೃತಜ್ಞತಾ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರ ಉಲ್ಲಂಘನೆ: ರಾಂಗ್ ಆದ ರೇಣುಕಾಚಾರ್ಯ! - ಕೊರೊನಾ ವಾರಿಯರ್ಸ್ ಕೃತಜ್ಞತಾ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರದ ಉಲ್ಲಂಘನೆ

ಸಿಎಂ ರಾಜಕೀಯ ಕಾರ್ಯದರ್ಶಿಯೂ ಆದ ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮತ್ತೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಮೆರವಣಿಗೆ ನಡೆಸಲಾಗಿದೆ.

Violation of the social gap in the Corona Warriors  Programme at davanagere
ಕೊರೊನಾ ವಾರಿಯರ್ಸ್ ಕೃತಜ್ಞತಾ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರದ ಉಲ್ಲಂಘನೆ
author img

By

Published : Jun 1, 2020, 4:48 PM IST

ದಾವಣಗೆರೆ: ಕೊರೊನಾ ವಾರಿಯರ್ಸ್​ಗಳಿಗಾಗಿ ಹಮ್ಮಿಕೊಂಡಿದ್ದ ಕೃತಜ್ಞತಾ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರ ಉಲ್ಲಂಘಿಸಿದ ಘಟನೆ ಹೊನ್ನಾಳಿ ಪಟ್ಟಣದಲ್ಲಿ ನಡೆದಿದೆ.

ಸಿಎಂ ರಾಜಕೀಯ ಕಾರ್ಯದರ್ಶಿಯೂ ಆದ ಹೊನ್ನಾಳಿ ಶಾಸಕ ಎಂ. ಪಿ. ರೇಣುಕಾಚಾರ್ಯ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮತ್ತೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಮೆರವಣಿಗೆ ನಡೆಸಲಾಗಿದೆ. ಧ್ವನಿವರ್ಧಕದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಎಷ್ಟೇ ಮನವಿ ಮಾಡಿದರೂ ಜನರು‌ ‌ಮಾತ್ರ ಕ್ಯಾರೇ ಎನ್ನಲಿಲ್ಲ.

ಸಾಮಾಜಿಕ ಅಂತರದ ಉಲ್ಲಂಘನೆ
ಕಳೆದ ಎರಡು ತಿಂಗಳಿಂದ ಪೊಲೀಸ್ ಇಲಾಖೆ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರನ್ನು ಒಳಗೊಂಡಂತೆ ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಕೊರೊನಾ ವಾರಿಯರ್ಸ್​ಗಳಿಗೆ ಪ್ರೇರಣಾ ಪೂರ್ವಕವಾಗಿ ಕೃತಜ್ಞತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.‌ ಹೊನ್ನಾಳಿ ಪಟ್ಟಣದಲ್ಲಿ ವಾರಿಯರ್ಸ್​ಗಳಿಗೆ ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ರಾಯಣ್ಣ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಬಳಿಕ ಪುಷ್ಪವೃಷ್ಟಿ ಅರ್ಪಿಸಲಾಯಿತು.‌

ರಾಂಗ್ ಆದ ರೇಣುಕಾಚಾರ್ಯ...! ಎಷ್ಟೇ ಮನವಿ ಮಾಡಿದರೂ ಜನರು ಕೇಳದಿದ್ದಕ್ಕೆ ರೇಣುಕಾಚಾರ್ಯ ಸಿಟ್ಟಿಗೆದ್ದರು. ಮೈಕ್ ಬಳಿ ಬಂದು ಪದೇ ಪದೆ ಮನವಿ ಮಾಡಿದರು. ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಕಾರ್ಯಕ್ರಮಕ್ಕೆ ಚಾಲನೆ ನೀಡುವಾಗ ಅಂತರ ಕಾಯ್ದುಕೊಳ್ಳದವರನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ಮೆರವಣಿಗೆ ಮಧ್ಯೆಯೇ ಓಡೋಡಿ ಬಂದ ಅವರು,‌ ಈ ವೇಳೆ ಯುವಕನ ಬೆನ್ನಿಗೆ ಶಾಸಕರು ಹೊಡೆದ ಘಟನೆಯೂ ನಡೆಯಿತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.