ದಾವಣಗೆರೆ: ಗ್ರಾ.ಪಂ ಚುನಾವಣೆಯ 2ನೇ ಹಂತದ ಉಮೇದುವಾರಿಕೆ ಸಲ್ಲಿಕೆ ಮುಕ್ತಾಯವಾಗಿದೆ. ನ್ಯಾಮತಿ, ಹರಿಹರ, ಚನ್ನಗಿರಿ ಸೇರಿ ಮೂರು ತಾಲೂಕುಗಳ ಒಟ್ಟು 101 ಗ್ರಾ.ಪಂ.ಗಳಲ್ಲಿ ಅವಿರೋಧ ಆಯ್ಕೆಯ ಪರ್ವ ಜೋರಾಗಿದೆ. ಮೂರು ತಾಲೂಕುಗಳಲ್ಲಿ 299 ಸ್ಥಾನಗಳಿದ್ದು, ಅದರಲ್ಲಿ 163 ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಓದಿ: ರಾಜ್ಯದಲ್ಲಿಂದು 1,194 ಮಂದಿಗೆ ಕೋವಿಡ್ ಸೋಂಕು ದೃಢ; ಐವರು ಬಲಿ
ನ್ಯಾಮತಿ ತಾಲೂಕಿನಲ್ಲಿ 17 ಪಂಚಾಯಿತಿಗಳ ಪೈಕಿ 35 ಸ್ಥಾನಗಳಿದ್ದು, ಅದರಲ್ಲಿ 15 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಹರಿಹರ ತಾಲೂಕಿನಲ್ಲಿ ಒಟ್ಟು 23 ಗ್ರಾ.ಪಂಗಳಿದ್ದು, 93 ಸ್ಥಾನಗಳ ಪೈಕಿ 55 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಇನ್ನು ಚನ್ನಗಿರಿ ತಾಲೂಕಿನಲ್ಲಿ ಒಟ್ಟು 61 ಗ್ರಾಪಂಗಳಿದ್ದು, 171 ಸ್ಥಾನಗಳ ಪೈಕಿ 93 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.