ETV Bharat / state

ಸರ್ಕಾರದ ಕೆಲಸಗಳಲ್ಲಿ ವಿಜಯೇಂದ್ರ ಹಸ್ತಕ್ಷೇಪ ಇಲ್ಲ, ಇದು ಕಾಂಗ್ರೆಸ್​ನವರ ಅಪಪ್ರಚಾರ: ಶ್ರೀ ರಾಮುಲು - ಸಚಿವ ಶ್ರೀರಾಮುಲು

ಸರ್ಕಾರದ ಕೆಲಸಗಳಲ್ಲಿ ಬಿ.ವೈ. ವಿಜಯೇಂದ್ರ ಅವರು ಹಸ್ತಕ್ಷೇಪ ಮಾಡುತ್ತಿಲ್ಲ. ಇದು ಕಾಂಗ್ರೆಸ್​​ನವರು ಸೃಷ್ಟಿಸುತ್ತಿರುವ ಸುಳ್ಳು ಎಂದು ದಾವಣಗೆರೆಯಲ್ಲಿ ಸಚಿವ ಶ್ರೀರಾಮುಲು ಹೇಳಿದ್ದಾರೆ.

Shri Ramulu
ಶ್ರೀ ರಾಮುಲು
author img

By

Published : Feb 16, 2020, 7:39 PM IST

ದಾವಣಗೆರೆ: ಸರ್ಕಾರದ ಕೆಲಸಗಳಲ್ಲಿ ಬಿ.ವೈ. ವಿಜಯೇಂದ್ರ ಅವರು ಹಸ್ತಕ್ಷೇಪ ಮಾಡುತ್ತಿಲ್ಲ. ಇದು ಕಾಂಗ್ರೆಸ್​​ನವರು ಸೃಷ್ಟಿಸುತ್ತಿರುವ ಸುಳ್ಳು ಎಂದು ದಾವಣಗೆರೆಯಲ್ಲಿ ಸಚಿವ ಶ್ರೀರಾಮುಲು ಹೇಳಿದ್ದಾರೆ.

ನಗರದ ಬಿಜೆಪಿ ಕಚೇರಿಯಲ್ಲಿ ತಮ್ಮ ಮಗಳ ಮದುವೆ ಹಿನ್ನೆಲೆ ಮುಖಂಡರಿಗೆ, ಕಾರ್ಯಕರ್ತರಿಗೆ ಆಹ್ವಾನ ಪತ್ರಿಕೆ ನೀಡಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ಅವರ ಬಳಿ ಹಿರಿಯ ಶಾಸಕರು, ಸಚಿವರು ನಿಲ್ಲಬೇಕಾದ ಪರಿಸ್ಥಿತಿ ಬಂದಿದೆ ಎಂಬುದೆಲ್ಲ ಸುಳ್ಳು. ಇದು ಕಾಂಗ್ರೆಸ್​​ನವರು ಸೃಷ್ಟಿಸುತ್ತಿರುವ ಸುಳ್ಳು, ನಮ್ಮ ನಾಯಕ ಬಿಎಸ್​ವೈ ಅವರು ಸಮರ್ಥರಿದ್ದಾರೆ ಎಂದು ತಿಳಿಸಿದರು.

ಸರ್ಕಾರದ ಕೆಲಸಗಳಲ್ಲಿ ವಿಜಯೇಂದ್ರ ಅವರ ಹಸ್ತಕ್ಷೇಪ ಇಲ್ಲ- ಶ್ರೀ ರಾಮುಲು

ನಾಳೆಯಿಂದ ಅಧಿವೇಶನ ಪ್ರಾರಂಭ ಆಗುತ್ತಿದೆ, ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯುತ್ತದೆ, ಹಲವು ಸಮಸ್ಯೆಗಳಿಗೆ ಪರಿಹಾರ ಹುಡುಕುವ ಪ್ರಯತ್ನ ನಡೆಸುತ್ತೇವೆ. ವಿರೋಧ ಪಕ್ಷಕ್ಕೂ ತಕ್ಕ ಉತ್ತರಗಳನ್ನು ನೀಡಲಿದ್ದೇವೆ. ವಿರೋಧ ಪಕ್ಷದ ಆಯ್ಕೆ ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟದ್ದು, ಸಿಎಎ ವಿಚಾರದಲ್ಲಿ ಕಾಂಗ್ರೆಸ್ ಅವರ ಅಜೆಂಡಾ ಇಟ್ಟುಕೊಂಡು ಹೊರಟಿದೆ, ಜನರಿಗೆ ಈಗಾಗಲೇ ಮನವರಿಕೆ ಆಗಿದೆ. ಕೆಲವು ಕಿಡಿಗೇಡಿಗಳ ವಿರುದ್ಧ ಸರ್ಕಾರ ಕಾನೂನು ಕಾಪಾಡುವ ದೃಷ್ಟಿಯಿಂದ ನಿರ್ಧಾರ ಕೈಗೊಳ್ಳಲಿದೆ ಎಂದರು.

ಮರಿಯಮ್ಮನಹಳ್ಳಿ ಕಾರು ಅಪಘಾತದಲ್ಲಿ ಈಗಾಗಲೇ ತನಿಖೆ‌ ನಡೆಯುತ್ತಿದೆ. ಈ ಅಪಘಾತದ ಹಿಂದೆ ಯಾರಿದ್ದಾರೆ ಎಂದು ತಿಳಿದಿದ್ದು, ಕ್ಲಿನ್ ಚಿಟ್ ನೀಡಲಾಗಿದೆ. ಮೂಲ ಬಿಜೆಪಿಗರು, ಬಂದವರು ಎಲ್ಲರನ್ನು ಒಟ್ಟಾಗಿ ನೋಡಲಾಗಿದೆ, ನಮ್ಮಲ್ಲಿ‌ ಯಾವೂದೇ ಭಿನ್ನಾಭಿಪ್ರಾಯವಿಲ್ಲ. ಅಧಿವೇಶನ ಮುಗಿದ ಬಳಿಕ ಉಸ್ತುವಾರಿ ಸಚಿವರ ಚರ್ಚೆ ನಡೆಯುತ್ತದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.