ದಾವಣಗೆರೆ : ಇಂದು ವರಮಹಾಲಕ್ಷ್ಮಿ ಪೂಜೆ ಹಿನ್ನೆಲೆ ಹೂವಿನ ಮಾರುಕಟ್ಟೆಯಲ್ಲಿ ಜನಜಂಗುಳಿ ಹೆಚ್ಚಿದೆ. ಬಹುತೇಕರು ಮಾಸ್ಕ್ ಧರಿಸದೇ ಹೂವಿನ ಖರೀದಿಯಲ್ಲಿ ತೊಡಗಿರೋದು ಕಂಡು ಬಂತು.
ಜಿಲ್ಲೆಯಲ್ಲಿ ದಿನೇದಿನೆ ಕೊರೊನಾ ಸೋಂಕಿತರು ಹೆಚ್ಚಾಗುತ್ತಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಮಾಸ್ಕ್ ಧರಿಸಿ ಎಂದು ಜಿಲ್ಲಾಡಳಿತ ಎಷ್ಟೇ ಮನವಿ ಮಾಡಿದ್ರೂ ಜನ ಮಾತ್ರ ಕ್ಯಾರೇ ಎನ್ನುತ್ತಿಲ್ಲ.
ಸೇವಂತಿಗೆ, ಚೆಂಡು, ಗುಲಾಬಿ ಸೇರಿ ಹೂವಿನ ದರ ಹೆಚ್ಚಾಗಿದೆ. ಇನ್ನೂ ಹಣ್ಣು, ವೀಳ್ಯದೆಲೆ, ಬಾಳೆಗೊನೆ ದರ ಇದಕ್ಕಿಂತ ಭಿನ್ನವಾಗಿಲ್ಲ. ಪಾಲಿಕೆ ಪಕ್ಕದಲ್ಲಿರೋ ಹೂ ಮಾರ್ಕೇಟ್ ಫುಲ್ ರಶ್ ಆಗಿದೆ. ಬೆಳಗ್ಗೆ 6 ಗಂಟೆಯಿಂದ್ಲೇ ಅಲಂಕಾರಿಕ ವಸ್ತುಗಳನ್ನ ಕೊಳ್ಳಲು ಜನ ಮುಗಿಬೀಳುತ್ತಿದ್ದಾರೆ.