ETV Bharat / state

ಫೆಬ್ರವರಿ 8, 9 ರಂದು ವಾಲ್ಮೀಕಿ ಜಾತ್ರೆ: ಪ್ರಸನ್ನಾನಂದಪುರಿ ಶ್ರೀ - ETv Bharat Kannada news

ವಾಲ್ಮೀಕಿ ಜಾತ್ರೆಯನ್ನು ಫೆ.8 ಹಾಗೂ 9 ರಂದು ಹಮ್ಮಿಕೊಳ್ಳಲಾಗಿದೆ ಎಂದು ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಶ್ರೀ ತಿಳಿಸಿದರು.

Rajanahalli Valmiki Peetha Prasannanandpuri Shri
ರಾಜನಹಳ್ಳಿ ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಶ್ರೀ
author img

By

Published : Dec 15, 2022, 9:39 PM IST

Updated : Dec 15, 2022, 10:51 PM IST

ರಾಜನಹಳ್ಳಿ ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಶ್ರೀ

ದಾವಣಗೆರೆ: ವಾಲ್ಮೀಕಿ ಜಾತ್ರೆಯನ್ನು ಫೆಬ್ರವರಿ 8 ಹಾಗೂ 9 ರಂದು ಹಮ್ಮಿಕೊಳ್ಳಲಾಗಿದ್ದು, ಈ ಬಾರಿ ಜಗಳೂರಿನ ಬಿಜೆಪಿ ಶಾಸಕ ಎಸ್ ವಿ ರಾಮಚಂದ್ರಪ್ಪನವರಿಗೆ ಅಧ್ಯಕ್ಷತೆ ವಹಿಸಲಾಗಿದೆ ಎಂದು ರಾಜನಹಳ್ಳಿ ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಶ್ರೀ ತಿಳಿಸಿದರು. ‌ದಾವಣಗೆರೆ ನಗರದಲ್ಲಿರುವ ನಾಯಕ ಸಮಾಜದ ವಿದ್ಯಾರ್ಥಿ ನಿಲಯದಲ್ಲಿ ನಡೆದ ಜಾತ್ರೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾಹಿತಿ ನೀಡಿದರು.

ಮೀಸಲಾತಿ ವಿಚಾರವಾಗಿ ಮಾತನಾಡಿ, ಸಿಎಂ ಬಸವರಾಜ ಬೊಮ್ಮಾಯಿ ಈಗಾಗಲೇ ಸುಗ್ರಿವಾಜ್ಞೆ ಹೊರಡಿಸಿ ಮೀಸಲಾತಿ ಪ್ರಮಾಣ ಹೆಚ್ಚಳ ಮಾಡಿದ್ದಾರೆ. ಇದೇ ತಿಂಗಳು ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು ಚರ್ಚೆ ನಡೆಯಲಿದೆ ಎಂದರು. ಇನ್ನು ನಾಯಕ ಜಾತಿಯಲ್ಲಿರುವ ಪರಿವಾರರು, ತಳವಾರರನ್ನು 2014 ರಲ್ಲಿ ಎಸ್ಸಿ ವರ್ಗಕ್ಕೆ ಸೇರಿಸುವಂತೆ ಸಿಎಂಗೆ ಮನವಿ ಮಾಡಲಾಗಿದೆ. ಸಿದ್ದಿ ಸಮಾಜದವರನ್ನು ಎಸ್ಸಿ ವರ್ಗದ ಪಟ್ಟಿಗೆ ಸೇರಿಸಲಾಗಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ:ಕೋವಿಡ್ ಸಂಕಷ್ಟ, ವಾಲ್ಮೀಕಿ ಜಾತ್ರೆ ಮುಂದೂಡಿಕೆ : ಪ್ರಸನ್ನಾನಂದಪುರಿ ಶ್ರೀ

Last Updated : Dec 15, 2022, 10:51 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.