ಹರಿಹರ : ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಪೀಠಾಧಿಪತಿ, ಶ್ವಾಸ ಗುರು ಶ್ರೀ ವಚನಾನಂದ ಮಹಾ ಸ್ವಾಮೀಜಿಯವರು ದೇವಭೂಮಿ ಹಿಮಾಲಯದ ತಪ್ಪಲಿನಲ್ಲಿರುವ ಮಹಾತ್ಮರೊಬ್ಬರನ್ನು ಭೇಟಿ ಮಾಡಿ, ಅಲ್ಲಿಯೇ ಕೆಲ ಕಾಲ ಧ್ಯಾನ ಮಾಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮೈ ಕೊರೆಯುವ ಚಳಿಯಲ್ಲಿ ಶ್ರೀ ವಚನಾನಂದ ಮಹಾ ಸ್ವಾಮೀಜಿಯವರು ಹಿಮಾಲಯದಲ್ಲಿನ ಪ್ರತಿಯೊಂದು ದೇವಾಲಯಗಳಿಗೆ ಭೇಟಿ ನೀಡಿ ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡು, ಹಿಮಾಲಯದ ಸೌಂದರ್ಯವನ್ನು ಕಣ್ಣು ತುಂಬಿಕೊಂಡರು. ಮನಸ್ಸನ್ನು ಗೆದ್ದ ಯೋಗಿಗಳು ಶೀತ ಮತ್ತು ಉಷ್ಣ, ಸುಖ ಮತ್ತು ದುಃಖ, ಸನ್ಮಾನ ಮತ್ತು ಅವಮಾನದ ದ್ವಂದ್ವಗಳಿಂದ ಮುಕ್ತರಾಗಿರುತ್ತಾರೆ. ಅಂತಹ ಯೋಗಿಗಳು ದೇವರ ಮೇಲೆ ಅಚಲವಾದ ಭಕ್ತಿಯಲ್ಲಿ ಲೀನರಾಗಿ ಶಾಂತಿ ಮತ್ತು ಸ್ಥಿರತೆಯಿಂದ ಕೂಡಿರುತ್ತಾರೆ ಎಂದು ಹೇಳಿದ್ದಾರೆ.