ದಾವಣಗೆರೆ: ಹಾಲು ಮತ ಸಮಾಜ, ಪಂಚಮಸಾಲಿ ಸಮುದಾಯಗಳು ಮೀಸಲಾತಿಗೆ ಸರ್ಕಾರದ ವಿರುದ್ಧ ಹಲ್ಲು ಮಸೆಯುತ್ತಿವೆ. ಇತ್ತ ವಾಲ್ಮೀಕಿ ಸಮುದಾಯಕ್ಕೆ ಈಗಾಗಲೇ ರಾಜ್ಯ ಸರ್ಕಾರ ಮೀಸಲಾತಿಯ ಸಿಹಿ ಸುದ್ದಿ ನೀಡಿದ ಬೆನ್ನಲ್ಲೇ ಸರ್ಕಾರ ಇಕ್ಕಟ್ಟಿಗೆ ಸಿಲುಕಿದೆ. ವಾಲ್ಮೀಕಿ ಸಮುದಾಯಕ್ಕೆ ನೀಡಿದಂತೆ ನಮಗೂ ಮೀಸಲಾತಿ ನೀಡಿ ಎಂದು ಸರ್ಕಾರದ ಮೇಲೆ ಒತ್ತಡ ಹಾಕಲಾಗುತ್ತಿದ್ದು, ಪ್ರಾಣ ಬಿಟ್ಟೆವು ಮೀಸಲಾತಿ ಬಿಡೆವು ಎಂಬ ಸಂದೇಶವನ್ನು ವಚನಾನಂದ ಶ್ರೀ ಸರ್ಕಾರಕ್ಕೆ ರವಾನಿಸಿದ್ದಾರೆ.
ಪ್ರಾಣ ಬಿಟ್ಟೆವು ಮೀಸಲಾತಿ ಬಿಡೆವು ಎಂದು ದಾವಣಗೆರೆ ಜಿಲ್ಲೆಯ ಹರಿಹರದ ಪಂಚಮಸಾಲಿ ಗುರುಪೀಠಾಧ್ಯಕ್ಷರಾದ ವಚನಾನಂದ ಶ್ರೀ ಸರ್ಕಾರಕ್ಕೆ ಸಂದೇಶ ರವಾನಿಸಿದ್ದಾರೆ. ವಾಲ್ಮೀಕಿ ಸಮುದಾಯದಂತೆ ನಮ್ಮ ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ನೀಡಿ ಎಂದು ಸಭೆಗಳ ಮೇಲೆ ಸಭೆ ಮಾಡಲಾಗುತ್ತಿದೆ. ಹರಿಹರದ ಪಂಚಮಸಾಲಿ ಮಠದಲ್ಲಿ ಈಗಾಗಲೇ ಪ್ರತಿದಿನ ಒಂದೊಂದು ಜಿಲ್ಲೆಗಳ ಮುಖಂಡರೊಂದಿಗೆ ಶ್ರೀಗಳು ಚರ್ಚೆ ನಡೆಸುತ್ತಿದ್ದಾರೆ.
2ಎ ಮೀಸಲಾತಿಗಾಗಿ ನಿರಂತರವಾಗಿ ಹೋರಾಟ: ಮೀಸಲಾತಿ ಪಡೆಯಲು ಶ್ರೀಗಳು ತಮ್ಮ ಭಕ್ತರೊಂದಿಗೆ ಚರ್ಚೆ ಮಾಡ್ತಿದ್ದು, ಸರ್ಕಾರಕ್ಕೆ ಮತ್ತೊಂದು ತಲೆಬಿಸಿಯಾಗಿ ಪರಿಣಮಿಸಿದೆ. ಇತ್ತ 29 ವರ್ಷಗಳಿಂದ ಕೇಂದ್ರದಲ್ಲಿ ಒಬಿಸಿ ಮೀಸಲಾತಿ, ರಾಜ್ಯದಲ್ಲಿ 2ಎ ಮೀಸಲಾತಿಗಾಗಿ ನಿರಂತರವಾಗಿ ಹೋರಾಟ ನಡೆಯುತ್ತಿದೆ. ಆದರೆ, ಸರ್ಕಾರ ಮಾತ್ರ ಇಂದು ನಾಳೆ ಎಂದು ಮೀಸಲಾತಿ ಪ್ರಕಟಿಸದೇ ದಿನಗಳನ್ನು ಮುಂದೂಡುತ್ತಿದೆ. ಇದರಿಂದ ಸರ್ಕಾರದ ವಿರುದ್ಧ ಇಡೀ ಪಂಚಮಸಾಲಿ ಸಮಾಜದ ಮುಖಂಡರು ಹಾಗೂ ವಚನಾನಂದ ಶ್ರೀ ಹಿಡಿ ಶಾಪ ಹಾಕ್ತಿದ್ದಾರೆ.
ಈಗಾಗಲೇ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗ್ಡೆಯವರಿಗೆ ಕುಲಶಾಸ್ತ್ರ ಅಧ್ಯಯನ ಮಾಡಲು ಸೂಚಿಸಿದೆ. ಅವರು ಕೂಡ ರಾಜ್ಯಾದ್ಯಂತ ಕುಲಶಾಸ್ತ್ರ ಅಧ್ಯಯನ ಮಾಡ್ತಿದ್ದಾರೆ. ರಾಜ್ಯದಲ್ಲಿ 2ಎ ಮೀಸಲಾತಿ ಸಿಕ್ಕೇ ಸಿಗುತ್ತದೆ ಎಂಬ ಭರವಸೆ ಇದೆ. ಪ್ರಾಣ ಬಿಟ್ಟೆವು ಮೀಸಲಾತಿ ಬಿಡೆವು ಎಂಬ ಸಂದೇಶವನ್ನು ವಚನಾನಂದ ಶ್ರೀ ಸರ್ಕಾರಕ್ಕೆ ರವಾನಿಸಿದ್ದಾರೆ.
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ: ಇನ್ನು ಕೂಡಲಸಂಗಮ ಪೀಠಾಧ್ಯಕ್ಷರಾದ ಜಯಮೃತ್ಯುಂಜಯ ಶ್ರೀಗಳು ಕೂಡ ಹೋರಾಟ ಮಾಡ್ತಿದ್ದಾರೆ. ಅವರ ಹೋರಾಟ ಅವರಿಗೆ ನಮ್ಮ ಹೋರಾಟ ನಮಗೆ ಒಟ್ಟಾರೆ, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಸಿಗುವಂತಾಗಬೇಕು ಎಂದು ಕರ್ನಾಟಕ ರಾಜ್ಯ ವೀರಶೈವ ಪಂಚಮಸಾಲಿ ಸಂಘ ಅಧ್ಯಕ್ಷ ಬಿ ಎಸ್ ಪಾಟೀಲ್ ಅಭಿಪ್ರಾಯ ಪಟ್ಟಿದ್ದಾರೆ.
ಇನ್ನು ಸರ್ಕಾರ ಇವತ್ತು ನಾಳೆ ಎಂದು ಮೀಸಲಾತಿ ನೀಡಲು ಸರ್ಕಾರ ಹಿಂದೇಟು ಹಾಕ್ತಿಲ್ಲ. ಎರಡು ಪೀಠದ ಹೋರಾಟಗಳು ವಿಧಾನಗಳು ಬೇರೆಯಾಗಿದ್ದು, ಉದ್ದೇಶಗಳು ಒಂದೇಯಾಗಿದೆ ಎಂದು ಕರ್ನಾಟಕ ರಾಜ್ಯ ವೀರಶೈವ ಪಂಚಮಸಾಲಿ ಸಂಘ ಅಧ್ಯಕ್ಷ ಬಿ ಎಸ್ ಪಾಟೀಲ್ ತಿಳಿಸಿದರು.
ಒಟ್ಟಾರೆ ಕುಲಶಾಸ್ತ್ರ ಅಧ್ಯಯನದ ನೆಪದಲ್ಲಿ ಸರ್ಕಾರ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡದೇ ದಿನಗಳನ್ನು ದೂಡುತ್ತಿದೆ. ಇದರಿಂದ ಕುಲಶಾಸ್ತ್ರ ಅಧ್ಯಯನ ಮುಗಿಯಬೇಕಾಗಿದೆ. ಆದರೂ ಸರ್ಕಾರ ನಮ್ಮ ಪರವಾಗಿದೆ ಎಂದು ವಚನಾನಂದ ಶ್ರೀಗಳು ಮೀಸಲಾತಿಗಾಗಿ ಕಾದು ಕೂತಿದ್ದಾರೆ.
ಮತ್ತೊಂದು ಕಡೆ ಕೂಡಲಸಂಗಮ ಪೀಠದ ಜಯಮೃತ್ಯುಂಜಯ ಶ್ರೀಗಳು ಹೋರಾಟ ಮಾಡ್ತಿದ್ದಾರೆ. ಇದರ ಮಧ್ಯೆ ಹಾಲುಮತ ಸಮಾಜದವರು ಎಸ್ಟಿಗೆ ಸೇರಿಸುವಂತೆ ಪಟ್ಟು ಹಿಡಿದಿರುವುದು ಇದು ಹೇಗೆ ಸಾಧ್ಯ ಎಂಬುದು ಯಕ್ಷ ಪ್ರಶ್ನೆಯಾಗಿ ಉಳಿದಿದೆ.
ಓದಿ: ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಿಕ್ಕೇ ಸಿಗುತ್ತೆ : ವಚನಾನಂದ ಶ್ರೀ