ETV Bharat / state

ಬಗೆಹರಿಯದ ರಸ್ತೆ ಅಗಲೀಕರಣ ಕಾರ್ಯ : ಅಡ್ಡಕತ್ತರಿಗೆ ಸಿಕ್ಕಂತಾದ ಡಿಸಿ - ಹರಿಹರದಲ್ಲಿನ ತುಂಗಭದ್ರಾ ನದಿ ಸಮೀಪದ ಬೀರೂರು ಸಮ್ಮಸಗಿ ರಸ್ತೆ ಅಗಲೀಕರಣ

ಹರಿಹರದಲ್ಲಿನ ತುಂಗಭದ್ರಾ ನದಿ ಸಮೀಪದ ಬೀರೂರು ಸಮ್ಮಸಗಿ ರಸ್ತೆ ಅಗಲೀಕರಣ ತೆರವು ಕಾರ್ಯ ಬಗೆಹರಿಯದೇ ಇರುವುದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಿಗೆ ಅವರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ.

Mahantesh
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಿಗೆ
author img

By

Published : Feb 3, 2020, 8:56 PM IST

ಹರಿಹರ(ದಾವಣಗೆರೆ): ಹರಿಹರದಲ್ಲಿನ ತುಂಗಭದ್ರಾ ನದಿ ಸಮೀಪದ ಬೀರೂರು ಸಮ್ಮಸಗಿ ರಸ್ತೆ ಅಗಲೀಕರಣ ತೆರವು ಕಾರ್ಯ ಬಗೆಹರಿಯದೇ ಇರುವುದು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಿಗೆ ಅವರಿಗೆ ನುಂಗಲಾರದ ಬಿಸಿ ತುಪ್ಪವಾಗಿದೆ.

ಹೌದು ಹರಿಹರದಲ್ಲಿ ಕಳೆದ ಎಂಟು ವರ್ಷಗಳ ಹಿಂದೆ ಅಂಜನ್ ಕುಮಾರ್ ಜಿಲ್ಲಾಧಿಕಾರಿಯಾಗಿದ್ದ ವೇಳೆಯಲ್ಲಿ ಹರಿಹರದಲ್ಲಿನ ಪಿ.ಬಿ. ರಸ್ತೆಯನ್ನು ಅಗಲೀಕರಣ ಮಾಡಿದ್ದರು. ಆದರೆ ಈ ವೇಳೆ ರಾಘವೇಂದ್ರ ಮಠದ ಮುಂಭಾಗದಲ್ಲಿ ಮಾತ್ರ ತೆರವು ಕಾರ್ಯ ನಡೆಸಿರಲಿಲ್ಲ. ಆದರೆ ಇಂದು ಅಗಲೀಕರಣ ಅನಿವಾರ್ಯವಾಗಿದೆ.

ಬಗೆಹರಿಯದ ರಸ್ತೆ ಅಗಲೀಕರಣ ಕಾರ್ಯ

ರಸ್ತೆಯ ಒಂದು ಕಡೆ ನೀರಿನ ಟ್ಯಾಂಕ್​​, ಮತ್ತೊಂದು ಕಡೆ ಮುಸ್ಲಿಮರ ಪ್ರಾರ್ಥನಾ ಮಂದಿರ ಇದೆ . ಈ ಎರಡರಲ್ಲಿ ಒಂದು ಕಟ್ಟಡ ಅಗಲೀಕರಣದಿಂದ ತೆರವಾಗಲಿದೆ. ಈ ನಿಟ್ಟಿನಲ್ಲಿ ಯಾವ ಕಟ್ಟಡ ತೆರವು ಮಾಡಬೇಕು ಎಂಬುದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರಿಗೆ ನುಂಗಲಾಗದ ಬಿಸಿ ತುಪ್ಪವಾಗಿದ್ದು, ಮೂರು ನಾಲ್ಕು ಬಾರಿ ರಸ್ತೆಯನ್ನು ಸರ್ವೇ ಮಾಡಿಸಿದರೂ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ.

ಪ್ರಾರ್ಥನಾ ಮಂದಿರ ಉಳಿಯಲಿ ಎಂಬುದು ಶಾಸಕ ಎಸ್ ರಾಮಪ್ಪ ಮತ್ತು ಮಾಜಿ ಶಾಸಕ ಹೆಚ್.ಎಸ್ ಶಿವಶಂಕರ್ ಬೇಡಿಕೆಯಾದರೆ, ನೀರಿನ ಟ್ಯಾಂಕ್ ಉಳಿಯಬೇಕು ಎಂಬುದು ಮಾಜಿ ಶಾಸಕ ಬಿ.ಪಿ ಹರೀಶ್ ಬೇಡಿಕೆಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.