ದಾವಣಗೆರೆ: ಬೆಣ್ಣೆ ನಗರಿ ಸ್ಮಾರ್ಟ್ ಸಿಟಿಗೆ ಆಯ್ಕೆಯಾಗಿ ಸಾಕಷ್ಟು ಬದಲಾವಣೆಯಾಗುತ್ತಿದೆ. ಆದರೆ ನಗರದ ರೈಲ್ವೆ ನಿಲ್ದಾಣದ ಪಕ್ಕದಲ್ಲೇ ಇರುವ ಅಂಡರ್ ಪಾಸ್ ಮಾತ್ರ ಅಭಿವೃದ್ಧಿಯಾಗದೆ ಉಳಿದುಕೊಂಡಿದೆ. ಹಳೇ ದಾವಣಗೆರೆಗೆ ಸಂಪರ್ಕ ಕಲ್ಪಿಸುವ ಪುರಾತನ ಪ್ರಮುಖ ಅಂಡರ್ಪಾಸ್ ಇದಾಗಿದ್ದು, ಮಳೆ ಬಂದ್ರೆ ಸಾಕು ಇಲ್ಲಿ ನೀರು ತುಂಬಿಕೊಂಡು ಜನ ಕಿರಿಕಿರಿ ಅನುಭವಿಸುತ್ತಾರೆ.
ದಾವಣಗೆರೆ ಮಹಾನಗರ ಪಾಲಿಕೆಯಾಗಿ, ಸ್ಮಾರ್ಟ್ ಸಿಟಿಯಾಗಿ ಹಲವು ವರ್ಷಗಳೇ ಉರುಳಿದರು ಕೂಡ ಪುರಾತನ ಅಂಡರ್ಪಾಸ್ಗಳು ಮಾತ್ರ ಅಭಿವೃದ್ಧಿ ಕಾಣದೆ ಹೇಗಿವೆಯೋ ಹಾಗೆಯೇ ಉಳಿದುಕೊಂಡಿವೆ. ರೈಲ್ವೆ ನಿಲ್ದಾಣ ಪಕ್ಕದಲ್ಲಿ ಇರುವ ಹಳೇ ದಾವಣಗೆರೆಯ ಕೆ.ಆರ್ ಮಾರುಕಟ್ಟೆ, ಇಸ್ಲಾಂ ಪೇಟೆ, ದುಗ್ಗಮನ ಪೇಟೆ, ಗಾಂಧಿನಗರ, ಆಜಾದ್ ನಗರ, ಬಾಷ ನಗರ, ಅಹ್ಮದ್ ನಗರಕ್ಕೆ ಸಂಪರ್ಕ ಕಲ್ಪಿಸುವ ಅಂಡರ್ ಪಾಸ್ಗೆ ಪಾಲಿಕೆ ಮೇಜರ್ ಸರ್ಜರಿ ಮಾಡಬೇಕಿದೆ.
ಮಳೆ ಬಂದರೆ ಸಾಕು ಈ ಅಂಡರ್ ಪಾಸ್‌ನಲ್ಲಿ ಭಾರೀ ನೀರು ಶೇಖರಣೆಯಾಗುತ್ತಿದೆ. ಇದರಿಂದಾಗಿ ಸಾಕಷ್ಟು ಜನ ಬಿದ್ದು ಅನಾಹುತ ಮಾಡಿಕೊಂಡಿದ್ದಾರೆ. ಇನ್ನು ಈ ಅಂಡರ್ ಪಾಸ್ ಮೂಲಕವೇ ಹಳೇ ದಾವಣಗೆರೆಗೆ ಹಾದು ಹೋಗಬೇಕಾಗಿದೆ. ಇಲ್ಲಿಯವರೆಗೆ ಹಲವು ಮೇಯರ್ಗಳು ಬದಲಾದರು ಕೂಡ ಅಂಡರ್ ಪಾಸ್ ಮಾತ್ರ ಅಭಿವೃದ್ಧಿ ಕಾಣದೆ ಹಾಗೇ ಉಳಿದಿದೆ.
ಸದಾ ನೀರಿನಿಂದ ತುಂಬಿಕೊಳ್ಳುವ ಅಂಡರ್ಪಾಸ್ಗೆ ಮೇಜರ್ ಸರ್ಜರಿ ಮಾಡಲು ಪ್ರಯತ್ನಿಸಿದರೂ ಕೂಡ ರೈಲ್ವೆ ಇಲಾಖೆ ಅಡ್ಡಗಾಲು ಹಾಕುತ್ತಿತ್ತು ಎಂಬ ಆರೋಪ ಇತ್ತು. ಆದ್ದರಿಂದ ಇಂದು ಮೇಯರ್ ಎಸ್.ಟಿ.ವೀರೇಶ್, ಪೌರಾಯುಕ್ತ ವಿಶ್ವನಾಥ ಮುದ್ದಜ್ಜಿ ಸೇರಿ ರೈಲ್ವೆ ಇಂಜಿನಿಯರ್ಗಳನ್ನು ಕರೆಸಿ ಸ್ಥಳಪರಿಶೀಲನೆ ಮಾಡಿದರು. ಅಂಡರ್ ಪಾಸ್‌ನಲ್ಲಿ ಶೇಖರಣೆಯಾಗುವ ನೀರು ಎತ್ತಲು ಪಂಪ್ ಅಳವಡಿಸಲು ಚಿಂತಿಸಲಾಗಿದೆ. ಈಗಿರುವ ಅಂಡರ್ ಡ್ರೈನೇಜ್ ಮಣ್ಣಿನಿಂದ ತುಂಬಿಕೊಂಡಿದ್ದು, ಅದನ್ನು ತೆಗೆಸಿ ಸುಗಮವಾಗಿ ನೀರು ಹೋಗುವಂತೆ ಮಾಡ್ತೀವಿ ಎಂದು ಪೌರಾಯುಕ್ತರು ತಿಳಿಸಿದ್ದಾರೆ.
ಓದಿ: ಬಳ್ಳಾರಿ ಪಾಲಿಕೆ ಚುನಾವಣೆ: ನಾಮಪತ್ರ ಸಲ್ಲಿಸಿದ ಗಾಲಿ ಸೋಮಶೇಖರ ರೆಡ್ಡಿ ಪುತ್ರ