ದಾವಣಗೆರೆ: ದೆಹಲಿಯಲ್ಲಿ ನಡೆದ ನಿಜಾಮುದ್ದೀನ್ ಸಭೆಯಲ್ಲಿ ಜಿಲ್ಲೆಯ ಇಬ್ಬರು ಭಾಗವಹಿಸಿದ್ದು, ಪ್ರಾಥಮಿಕ ಮಾಹಿತಿ ಪ್ರಕಾರ ಇವರು ನಗರಕ್ಕೆ ಬಂದಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದರು.
ಜಿಲ್ಲೆಯಿಂದ ಇಬ್ಬರು ದೆಹಲಿಯ ಜಮಾತ್ಗೆ ಹೋಗಿದ್ದರು. ಹರಿಹರದ ವ್ಯಕ್ತಿ ಹಾಗೂ ದಾವಣಗೆರೆಯ ಸಿದ್ದವೀರಪ್ಪ ಬಡಾವಣೆಯ ವ್ಯಕ್ತಿ ಹೋಗಿದ್ದರು. ಇದೀಗ ಒಬ್ಬರೂ ಆಂಧ್ರದ ಕರ್ನೂಲ್ ಹಾಗೂ ಇನ್ನೊಬ್ಬರು ನೊಯ್ಡಾದಲ್ಲಿ ಇದ್ದಾರೆ. ಇಬ್ಬರೂ ಕ್ವಾರಂಟೈನ್ನಲ್ಲಿ ಇದ್ದಾರೆ ಎಂದು ತಿಳಿಸಿದರು.
ಹರಿಹರದ ವ್ಯಕ್ತಿ ದೆಹಲಿಯಿಂದ ನೇರವಾಗಿ ಕರ್ನೂಲ್ಗೆ ಹೋಗಿದ್ದಾರೆ. ಮತ್ತೋರ್ವ ನೊಯ್ಡಾಗೆ ಹೋಗಿದ್ದು, ಈತ ದಾವಣಗೆರೆಗೆ ಬಂದು ಹೋಗಿರುವ ಕುರಿತಂತೆ ಪರಿಶೀಲಿಸಲಾಗುತ್ತಿದೆ. ಇಬ್ಬರೂ ಆರೋಗ್ಯವಾಗಿದ್ದು, ಕೊರೊನೊಗೆ ಸಂಬಂಧಿಸಿದ ಯಾವುದೇ ಲಕ್ಷಣಗಳಿಲ್ಲ. ಆದರೂ ಕ್ವಾರಂಟೈನ್ನಲ್ಲಿ ಇಡಲಾಗಿದೆ ಎಂದು ಮಾಹಿತಿ ನೀಡಿದರು.