ETV Bharat / state

ಮಗುವಿನ ಹೊಕ್ಕಳ ಬಳಿ 2 ಕೆಜಿ ಗಡ್ಡೆ: ಶಸ್ತ್ರಚಿಕಿತ್ಸೆಗೆ ಸಹಾಯಹಸ್ತ ಚಾಚಿದ ಬಡದಂಪತಿ - ಶಸ್ತ್ರಚಿಕಿತ್ಸೆಗೆ ಸಹಾಯಹಸ್ತ ಚಾಚಿದ ಬಡದಂಪತಿ

ಹರಿಹರ ತಾಲೂಕಿನ ಚಿಕ್ಕಬಿದರಿ ಗ್ರಾಮದ ಕುಮಾರ-ಹನಮಕ್ಕ ದಂಪತಿಯ ಮಗುವಿನ ಹೊಕ್ಕಳ ಬಳಿ ಎರಡು ಕೆಜಿಯಷ್ಟು ಗಡ್ಡೆ ಬೆಳೆದಿದೆ.

Kumar Hanumakka couple appeal for a helping
ಕುಮಾರ್ ಹನಮಕ್ಕ ದಂಪತಿ ಸಹಾಯ ಹಸ್ತಕ್ಕಾಗಿ ಮನವಿ
author img

By

Published : Feb 3, 2023, 6:20 AM IST

Updated : Feb 3, 2023, 6:10 PM IST

ಶಸ್ತ್ರಚಿಕಿತ್ಸೆಗೆ ಸಹಾಯಹಸ್ತ ಚಾಚಿದ ಬಡದಂಪತಿ

ದಾವಣಗೆರೆ: ದಂಪತಿ ವಿವಾಹವಾಗಿ ಮಗು ಜನಿಸಿತು, ಮೊದಲೆರಡು ವರ್ಷ ಕೂಲಿ ಮಾಡುತ್ತ ದಂಪತಿ ಆ ಮಗುವಿನ ಆರೈಕೆಯಲ್ಲಿ ಸುಂದರ ಜೀವನ ಕಳೆದರು. ಆದರೆ ದುರದೃಷ್ಟವಶಾತ್ ಒಂಬತ್ತು ವರ್ಷಗಳೂ ಉರುಳಿದರೂ ಆ ಮಗುವಿನ ಬೆಳವಣಿಗೆಯಲ್ಲಿ ಮಾತ್ರ ಸುಧಾರಣೆ ಕಾಣುತ್ತಿಲ್ಲ. ಅಂದ್ರೇ ಮಗುವಿನ ಹೊಕ್ಕಳ ಬಳಿ ಎರಡು ಕೆಜಿ ಮೀರುವ ಗಡ್ಡೆಯೊಂದು ಬೆಳೆದು ನಿಂತಿದೆ. ಗಡ್ಡೆ ಹೊರ ತೆಗೆಸುವ ಶಸ್ತ್ರ ಚಿಕಿತ್ಸೆಗೆ ಬಡದಂಪತಿಗೆ ಅಪಾರ ಹಣ ಅಗತ್ಯವಿದ್ದು, ದಂಪತಿ ಈಗ ಸಹಾಯದ ಹಸ್ತ ನೀಡುವಂತೆ ಈಟಿವಿ ಭಾರತ ಮೂಲಕ ಜನರಿಗೆ ಮನವಿ ಮಾಡಿದ್ದಾರೆ.

ಹೌದು... ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಚಿಕ್ಕ ಬಿದರಿ ಗ್ರಾಮದ ಕುಮಾರ ಹನಮಕ್ಕ ಎಂಬ ದಂಪತಿ ಮಗು ಮಾಹಾಂತೇಶ್ ಚಿಕಿತ್ಸೆ ಕೊಡಿಸಲು ಹಣ ಇಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ದಂಪತಿಗೆ ಮಗುವಿನ ಹೊಟ್ಟೆ ಭಾಗದಲ್ಲಿ ದೊಡ್ಡ ಗಡ್ಡೆ ಬೆಳೆದಿದ್ದು ಮತ್ತಷ್ಟು ಹೈರಾಣಾಗಿಸಿದೆ.

ಮಗು ಜನಿಸಿ ಒಂಬತ್ತು ವರ್ಷ ಕಳೆದವು:ಮಗು ಮಹಾಂತೇಶ ಜನಿಸಿ ಒಂಬತ್ತು ವರ್ಷ ಉರುಳಿದ್ರು ಕೂಡ ಮಗು ಬೆಳವಣಿಗೆ ಕಂಡಿಲ್ಲ. ದಿಕ್ಕುತೋಚದ ದಂಪತಿ ತನ್ನ ಮಗನನ್ನು ಹೊತ್ತು ಸಹಾಯಕ್ಕಾಗಿ ಡಿಸಿ ಕಚೇರಿಗೆ ಆಗಮಿಸಿ, ಜಿಲ್ಲಾಧಿಕಾರಿ ಶಿವಾನಂದ ಕಾಪಶಿಯವರ ಬಳಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ಮಗುವಿನ ಚಿಕಿತ್ಸೆಗೆ ಜಿಲ್ಲಾಧಿಕಾರಿ ಭರವಸೆ:ಹೊಕ್ಕಳದ ಬಳಿ ದೊಡ್ಡ ಗಡ್ಡೆ ದಿನೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಚಿಕಿತ್ಸೆಗಾಗಿ ಸಹಕರಿಸಿ ಎಂದು ಮನವಿ ಮಾಡಿದರು. ಇನ್ನು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಚಿಕಿತ್ಸೆ ಕೊಡಿಸುವ ಭರವಸೆ ನೀಡಿದ್ದಾರೆ. ಇನ್ನು ಪ್ರತಿಕ್ರಿಯಿಸಿದ ಮಗುವಿನ ತಾಯಿ ಹನುಮಕ್ಕ ಅವರು ಮಗುವಿಗೆ ಹೊಕ್ಕಳ ಬಳಿ ಎರಡು ಕೆಜಿಯಷ್ಟು ಗಾತ್ರದ ದೊಡ್ಡ ಗಡ್ಡೆ ಇದೆ. ನಾವು ಕೂಲಿ‌ ಕಾರ್ಮಿಕರು, ಹುಟ್ಟಿದ ಮೊದಲ ಎರಡು ವರ್ಷ ಮಗು ಚೆನ್ನಾಗಿತ್ತು. ಬರ್ತಾ ಬರ್ತಾ ಹೊಟ್ಟೆಯ ಮೇಲಿನ ಗಂಟು ದೊಡ್ಡದಾಗಿದೆ. ಶಸ್ತ್ರಚಿಕಿತ್ಸೆಗೆ ಹಣ ಬೇಕಾಗಿದೆ ಎಂದು ಸಹಾಯದ ಹಸ್ತಾ ಚಾಚಿದರು.

ಮಗುವನ್ನೂ ಉಳಿಸಿಕೊಳ್ಳಲು ಸಾಲ ಮಾಡಿದ ದಂಪತಿ: ಇನ್ನು ಮಗುವನ್ನು ಉಳಿಸಿಕೊಳ್ಳಲು ಈ ದಂಪತಿ ಸಾಲ ಸೋಲ ಮಾಡುವ ಮೂಲಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದೆ. ಇಲ್ಲಿಯ ತನಕ 7 ಲಕ್ಷ ರೂಪಾಯಿ ಖರ್ಚು ಮಾಡಿದ್ರು ಯಾವುದೇ ಪ್ರಯೋಜನ ಆಗಲಿಲ್ಲ. ಬೆಂಗಳೂರು, ಮಂಗಳೂರು, ದಾವಣಗೆರೆ ಆಸ್ಪತ್ರೆಗಳಲ್ಲಿ ಮಗುವಿನ ಚಿಕಿತ್ಸೆಗೆ ಇದ್ದ ಹಣ ಖರ್ಚು ಮಾಡಿ ಸಹಾಯದ ಹಸ್ತು ಚಾಚಿದ್ದಾರೆ. ಇನ್ನು ದಾವಣಗೆರೆಯ ಬಾಪೂಜಿ ಆಸ್ಪತ್ರೆಯಲ್ಲಿ ಮಗುವಿನ ಹೊಟ್ಟೆಯ ಭಾಗದ ಗಡ್ಡೆಯ ಚಿಕಿತ್ಸೆಗೆ ತಯಾರಾಗಿದ್ದು, ಚಿಕಿತ್ಸೆ ವೆಚ್ಚ ಒಂದೂವರೆ ಲಕ್ಷದ ಭರಿಸಬೇಕಾಗಿದೆ ಎಂದು ಬಡ ದಂಪತಿ ಸಹಾಯ ಹಸ್ತ ಚಾಚುತ್ತಿದ್ದಾರೆ.

ಮಗುವಿನ ಸ್ಥಿತಿಗೆ ಕಣ್ಣೀರು ಹಾಕಿದ ತಂದೆ ಕುಮಾರ್: ಇನ್ನು ಇದೇ ವೇಳೆ ಕಣ್ಣೀರು ಹಾಕುತ್ತ ಪ್ರತಿಕ್ರಿಯಿಸಿದ ಮಗುವಿನ ತಂದೆ ಕುಮಾರ್ ಅವರು, ನನ್ನ ಮಗನ ಚಿಕಿತ್ಸೆಗೆ ಒಂದೂವರೆ ಲಕ್ಷಾ ರೂಪಾಯಿ ವೆಚ್ಚವಾಗುತ್ತೆ ಎಂದು ವೈದ್ಯರು ಹೇಳಿದ್ದಾರೆ.ನನಗೆ ಮೂರು ಜನ ಮಕ್ಕಳಿದ್ದು, ಅದರಲ್ಲಿ ಇಬ್ಬರು ತುಂಬಾ ಚೆನ್ನಾಗಿದ್ದಾರೆ. ಆದರೆ ಈ ಮಗು ಮಾತ್ರ ಹೊಟ್ಟೆ ಹೊಕ್ಕಳಲ್ಲಿ ಗಡ್ಡೆ ಬೆಳೆದು ಬೆಳವಣಿಗೆ ಕುಂಠಿತಗೊಂಡಿದೆ. ನನ್ನ ಮಗು ಮಹಾಂತೇಶ್ ಜೀವ ಉಳಿಸಲು ಹಣದ ಅವಶ್ಯಕತೆ ಇದೆ ಎಂದು ಪರಿತಪಿಸಿದರು.

ಮಗುವಿನ ತಂದೆ ಬ್ಯಾಂಕ್ ಖಾತೆ, ದೂರವಾಣಿ ಸಂಖ್ಯೆ: ಚಿಕಿತ್ಸೆಗೆ ಸಹಾಯ ಮಾಡುವ ದಾನಿಗಳು ಮಗುವಿನ ತಂದೆ ಕುಮಾರ್​ ಗೆ ಸಂಪರ್ಕಿಸಲು -7259319960 ಮೊಬೈಲ್ ಸಂಖ್ಯೆ ಬಳಸಬಹುದು. ಬ್ಯಾಂಕ್ ಖಾತೆ Union bank Sarathi harihar taluku davanagere distic.577601.Account no 520101261503734.ifsc no UBIN094104.MASTER MAHANTESH MGS HANUMAKKA ಕ್ಕೆ ಹಣ ವರ್ಗಾವಣೆ ಮಾಡಿ ಮಗುವಿನ ಚಿಕಿತ್ಸೆಗೆ ಸಹಕರಿಸಬೇಕಾಗಿದೆ.

ಇದನ್ನೂಓದಿ:ನಾಗರ ಹಾವನ್ನು ಕೊರಳಿಗೆ ಸುತ್ತಿಕೊಂಡು ಚುನಾವಣೆ ಭವಿಷ್ಯ ನುಡಿದ ವ್ಯಕ್ತಿ!- ವಿಡಿಯೋ

Last Updated : Feb 3, 2023, 6:10 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.