ETV Bharat / state

ಬಿರು ಬಿಸಿಲಿಗೆ ಕಂಗೆಟ್ಟು ಈಜುಕೊಳಕ್ಕೆ ತೆರಳಿದ್ದ ಬಾಲಕರಿಬ್ಬರು ಸಾವು - ಐವರು ಹುಡುಗರು ನೀರುಪಾಲು

ಈಜಲು ಹೋಗಿದ್ದ ಇಬ್ಬರು ಹುಡುಗರು ನೀರು ಪಾಲಾಗಿರುವ ದುರ್ಘಟನೆ ದಾವಣಗೆರೆ ನಗರದ ದೇವರಾಜ ಅರಸು ಬಡಾವಣೆಯಲ್ಲಿ ನಡೆದಿದೆ.

two boys died
ಬಾಲಕರಿಬ್ಬರು ಸಾವು
author img

By

Published : May 20, 2023, 6:49 AM IST

ದಾವಣಗೆರೆ : ಈಜಲು ತೆರಳಿದ್ದ ಬಾಲಕರಿಬ್ಬರು ಈಜುಕೊಳದಲ್ಲಿ ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ನಗರದ ದೇವರಾಜ ಅರಸು ಬಡಾವಣೆಯಲ್ಲಿ ನಡೆದಿದೆ. ಕಳೆದ ಮಾರ್ಚ್ ತಿಂಗಳಿನಲ್ಲಿ ನವೀಕರಣಗೊಂಡು ಲೋಕಾರ್ಪಣೆಯಾಗಿದ್ದ ಈಜುಕೊಳ ಇದೀಗ ಇಬ್ಬರನ್ನು ಬಲಿ ಪಡೆದಿದೆ. ಮೃತರು ದಾವಣಗೆರೆ ನಗರದ ಬೀಡಿ ಲೇಔಟ್​ನ ನಿವಾಸಿಗಳೆಂದು ತಿಳಿದು ಬಂದಿದೆ.

ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಬಿಸಿಲಿನಿಂದ ರೋಸಿ ಹೋಗಿದ್ದ ಬಾಲಕರು ಈಜುಕೊಳಕ್ಕಾಗಮಿಸಿದ್ದರು. ಮೇಲಿಂದ ನೀರಿಗೆ ಧುಮುಕಿ ಈಜಾಡಲು ತೆರಳಿದ್ದ ಇಬ್ಬರು ಬಾಲಕರಿಗೆ ಈಜು ಬಾರದ ಹಿನ್ನೆಲೆ ಸಾವನ್ನಪ್ಪಿದ್ದಾರೆ. ಸಾಮಾನ್ಯವಾಗಿ ಇಂತಹ ಘಟನೆಗಳು ನಡೆಯಬಾರದೆಂದು ಈಜುಕೊಳಕ್ಕೆ ಮಾರ್ಗದರ್ಶಕರನ್ನು ನಿಯೋಜನೆ ಮಾಡಲಾಗುತ್ತದೆ. ಅದ್ರೆ, ಇಲ್ಲಿ ಯಾವ ಮಾರ್ಗದರ್ಶಕರು ಹಾಗೂ ತರಬೇತಿದಾರರು ಇಲ್ಲದಿರುವುರಿಂದ ಈ ಘಟನೆ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಸದ್ಯಕ್ಕೆ ಮೃತ ದೇಹಗಳನ್ನು ಜಿಲ್ಲಾ ಚಿಗಟೇರಿ ಸರ್ಕಾರಿ ಆಸ್ಪತ್ರೆಯಗೆ ರವಾನಿಸಲಾಗಿದ್ದು, ಘಟನಾ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ‌ ನಡೆಸಿ ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ : ಗಂಡಕ್ ನದಿಯಲ್ಲಿ ಈಜಲು ಹೋದ ಐವರು ಹುಡುಗರು ನೀರು ಪಾಲು..!

ಬಿರು ಬೇಸಿಗೆಯಿಂದ ಕಂಗೆಟ್ಟ ದಾವಣಗೆರೆಯ ಜನರಿಗೆ ಈ ಈಜುಕೊಳ ವರದಾನವಾಗಿತ್ತು. ಆದರೆ, ಕೆಲವು ತಿಂಗಳ ಕಾಲ ಕಾರಣಾಂತರಗಳಿಂದ ಬಂದ್ ಮಾಡಲಾಗಿತ್ತು. ಪುನಃ ನವೀಕರಿಸುವ ಮೂಲಕ ಕಳೆದ ಮಾರ್ಚ್ ತಿಂಗಳಲ್ಲಿ ಸಂಸದ ಸಿದ್ದೇಶ್ವರ್ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಪಾಲಿಕೆಯ ಅಧಿಕಾರಿಗಳು ಸಮ್ಮುಖದಲ್ಲಿ ಉದ್ಘಾಟನೆ ಮಾಡಿದ್ದರು. ಇದೀಗ ಪಾಲಿಕೆಯ ಅಧಿಕಾರಿಗಳು ಮಾರ್ಗದರ್ಶಕರು ಮತ್ತು ತರಬೇತುದಾರರನ್ನು ನೇಮಕ ಮಾಡದೇ ಇರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ : ತುಮಕೂರು : ಈಜು ಕಲಿಯಲು ಹೋಗಿದ್ದ ವ್ಯಕ್ತಿ ನೀರಲ್ಲಿ ಮುಳುಗಿ ಸಾವು

ಐವರು ಹುಡುಗರು ನೀರುಪಾಲು : ಬಿಹಾರದ ಗಂಡಕ್ ನದಿಯಲ್ಲಿ ಈಜಲು ಹೋಗಿದ್ದ ಐವರು ಹುಡುಗರು ನೀರು ಪಾಲಾಗಿರುವ ದುರ್ಘಟನೆ ಇದೇ ತಿಂಗಳ 5ನೇ ತಾರೀಖಿನಂದು ನಡೆದಿತ್ತು. ಸಾಹೇಬ್‌ಪುರ ಕಮಲ್ ಪೊಲೀಸ್ ಠಾಣಾ ವ್ಯಾಪ್ತಿಯ ವಿಷ್ಣುಪುರದ ಅಹೋಕ್ ಗಂಡಕ್ ನದಿಯಲ್ಲಿ ಘಟನೆ ಜರುಗಿತ್ತು. ಒಟ್ಟು 9 ಮಂದಿ ಹುಡುಗರು ಈಜಲು ಹೋಗಿದ್ದರು. ಈ ಪೈಕಿ ನಾಲ್ವರು ಹೊರಗೆ ಬಂದಿದ್ದರು. ಐವರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಮುಳುಗಿದವರಲ್ಲಿ ಮೂವರು ಬಾಲಕರು, ಮುಂಗೇರ್ ಮತ್ತು ಮಾಧೇಪುರ ಜಿಲ್ಲೆಯವರಾಗಿದ್ದಾರೆ. ಇಬ್ಬರು ಹುಡುಗರು ವಿಷ್ಣುಪುರ ಅಹೋಕ್ ನಿವಾಸಿಗಳು. ಎಲ್ಲಾ ಬಿಶನ್‌ಪುರ ಗ್ರಾಮದಲ್ಲಿ ನಡೆಯಲಿರುವ ಮದುವೆ ಸಮಾರಂಭದಲ್ಲಿ ಭಾಗವಹಿಸಲು ಬಂದಿದ್ದರು.

ಇದನ್ನೂ ಓದಿ : ಹಾವೇರಿ : ಆದಾಯದ ಕೊರತೆ ಇದ್ದರೂ ಈಜುಕೊಳ ನಡೆಸುತ್ತಿರುವ ಗುತ್ತಿಗೆದಾರರು

ಇನ್ನು ಫೆಬ್ರವರಿ 22 ರಂದು ಪೋಷಕರು ಬೇಡ ಎಂದರೂ ಸ್ನೇಹಿತರೊಂದಿಗೆ ಬುದ್ಧವಿಹಾರ ನೋಡಲು ಬಂದಿದ್ದ ಬಾಲಕ ಕಲ್ಲು ಕ್ವಾರಿಯಲ್ಲಿ ನಿಂತ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಕಲಬುರಗಿ ನಗರದ ಶ್ರೀ ರಾಮತೀರ್ಥ ದೇವಸ್ಥಾನದ ಹಿಂಭಾಗ ನಡೆದಿತ್ತು. ಬೀದರ್ ನಗರದ ಅಂಬೇಡ್ಕರ್ ಬಡಾವಣೆ ನಿವಾಸಿ ಆಶೀಶ್ ಗುಪ್ತಾ (15) ಮೃತಪಟ್ಟಿದ್ದ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.