ETV Bharat / state

ಕೊರೊನಾ ಭೀತಿಗೆ ಬಂದ್.. ಕ್ವಿಂಟಾಲ್‌ಗಟ್ಟಲೆ ತರಕಾರಿ ಉಚಿತವಾಗಿ ವಿತರಿಸಿದ ವರ್ತಕ.. - ಕೊರೊನಾ ಭೀತಿಗೆ ಬಂದ್

ನಗರದ ಎಪಿಎಂಸಿ ಯಾರ್ಡ್‌ನ ವರ್ತಕ ಕೆ ಎನ್‌ ನೀಲಪ್ಪ ಅವರು ನೂರಾರು ಕೆಜಿ ತರಕಾರಿಯನ್ನು ಉಚಿತವಾಗಿ ಜನರಿಗೆ ನೀಡಿದರು. ಈರುಳ್ಳಿ, ಟೊಮ್ಯಾಟೊ, ಮೆಣಸಿನಕಾಯಿ ಸೇರಿ ಇತರೆ ಕಾಯಿಪಲ್ಯಗಳನ್ನು ಉಚಿತವಾಗಿ ನೀಡುವ ಮೂಲಕ ಗಮನ ಸೆಳೆದಿದ್ದಾರೆ.

ತರಕಾರಿಯನ್ನು ಉಚಿತವಾಗಿ ನೀಡಿದ ವರ್ತಕ
ತರಕಾರಿಯನ್ನು ಉಚಿತವಾಗಿ ನೀಡಿದ ವರ್ತಕ
author img

By

Published : Apr 1, 2020, 10:53 AM IST

Updated : Apr 1, 2020, 11:33 AM IST

ದಾವಣಗೆರೆ : ಕೊರೊನಾ ಭೀತಿ ಎಲ್ಲವನ್ನೂ ನಿಶಬ್ಧಗೊಳಿಸಿದೆ. ಈ ಕಾರಣದಿಂದಾಗಿ ಮಾನವೀಯತೆ ಉಳ್ಳವರು ಒಂದಲ್ಲಾ ಒಂದು ರೀತಿ ಜನರಿಗೆ ಸಹಕಾರ ಮಾಡಲು ಮುಂದಾಗುತ್ತಿದ್ದಾರೆ. ದಾವಣಗೆರೆಯ ವರ್ತಕರೊಬ್ಬರು ಉಚಿತವಾಗಿ ತರಕಾರಿ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ನಗರದ ಎಪಿಎಂಸಿ ಯಾರ್ಡ್‌ನ ವರ್ತಕ ಕೆ ಎನ್‌ ನೀಲಪ್ಪ ಅವರು ನೂರಾರು ಕೆಜಿ ತರಕಾರಿಯನ್ನು ಉಚಿತವಾಗಿ ಜನರಿಗೆ ನೀಡಿದರು. ಈರುಳ್ಳಿ, ಟೊಮ್ಯಾಟೊ, ಮೆಣಸಿನಕಾಯಿ ಸೇರಿ ಇತರೆ ಕಾಯಿಪಲ್ಯಗಳನ್ನು ಉಚಿತವಾಗಿ ನೀಡುವ ಮೂಲಕ ಗಮನ ಸೆಳೆದಿದ್ದಾರೆ.

ಈ ತರಕಾರಿಯನ್ನು ಯಾವುದೇ ಕಾರಣಕ್ಕೂ ಹಣಕ್ಕೆ ಮಾರಾಟ ಮಾಡಬೇಡಿ. ಕಷ್ಟದಲ್ಲಿರುವವರಿಗೆ ನೆರವಾಗಿ ಎನ್ನುವ ಸಂದೇಶ ಕೂಡ ನೀಡಿದ್ದಾರೆ. ತರಕಾರಿ ಖರೀದಿಸಲು ಆಗದಂಥವರಿಗೆ ತಲುಪಿಸುವ ಕೆಲಸವನ್ನೂ ಕೂಡ ಮಾಡಿ ಎಂದು ಸಾಮಾಜಿಕ ಕಾರ್ಯಕರ್ತರು, ಸಂಘಸಂಸ್ಥೆಗಳ ಪದಾಧಿಕಾರಿಗಳಲ್ಲಿ ಮನವಿ ಕೂಡ ಮಾಡಿದ್ದಾರೆ.

Last Updated : Apr 1, 2020, 11:33 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.