ETV Bharat / state

ಬಾಲಕಿ ಅಪಹರಿಸಿ ಲೈಂಗಿಕ ಕಿರುಕುಳ: ಹೊನ್ನಾಳಿಯಲ್ಲಿ ಯುವಕ ಸೇರಿ ಮೂವರು ಆರೋಪಿಗಳು ಅರೆಸ್ಟ್ - ದಾವಣಗೆರೆಯಲ್ಲಿ ಬಾಲಕಿ ಅಪಹರಿಸಿ ಲೈಂಗಿಕ ಕಿರುಕುಳ ಆರೋಪ

ಬಾಲಕಿ ಅಪಹರಿಸಿ ಲೈಂಗಿಕ‌ ಕಿರುಕುಳ ನೀಡಿದ ಆರೋಪದ ಮೇರೆಗೆ ಮೂವರು ಆರೋಪಿಗಳನ್ನ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ದಾವಣಗೆರೆ ಜಿಲ್ಲೆಯಲ್ಲಿ ಈ ಪ್ರಕರಣ ನಡೆದಿದೆ.

Three arrested for Girl accused of kidnapping and sexually abusing her In Davanagere
ಬಾಲಕಿ ಅಪಹರಿಸಿ ಲೈಂಗಿಕ ಕಿರುಕುಳ ಆರೋಪ
author img

By

Published : Nov 8, 2020, 10:06 AM IST

ದಾವಣಗೆರೆ: ಬಾಲಕಿ ಅಪಹರಿಸಿ ಲೈಂಗಿಕ‌ ಕಿರುಕುಳ ನೀಡಿದ ಆರೋಪದ ಮೇರೆಗೆ ಯುವಕ ಹಾಗೂ ಆತನಿಗೆ ಸಹಕರಿಸಿದ ಇಬ್ಬರು ಆರೋಪಿಗಳನ್ನು ಹೊನ್ನಾಳಿ ಪೊಲೀಸರು ಬಂಧಿಸಿದ್ದಾರೆ‌.‌

ಹಾಲೇಶ್, ಈತನಿಗೆ ಸಹಕಾರ ನೀಡಿದ ಚನ್ನಗಿರಿ ತಾಲೂಕಿನ ಹರೋಸಾಗರದ ಹಾಲೇಶಪ್ಪ ಹಾಗೂ ಕುಂದೂರು ಗ್ರಾಮದ ರುದ್ರೇಶ್ ಬಂಧಿತ ಆರೋಪಿಗಳು.

ಹೊನ್ನಾಳಿ ತಾಲೂಕಿನ ಗ್ರಾಮವೊಂದರ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ಹಾಲೇಶ್ ಅಪಹರಿಸಿದ್ದಾನೆ. ಮಾತ್ರವಲ್ಲ, ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಈತನ ಕೃತ್ಯಕ್ಕೆ ಸ್ನೇಹಿತ ರುದ್ರೇಶ್ ಹಾಗೂ ಹಾಲೇಶಪ್ಪ ಸಹಕರಿಸಿದ್ದರು ಎನ್ನಲಾಗ್ತಿದೆ. ಮತ್ತೊಬ್ಬ ಆರೋಪಿ ಹನುಮಂತಪ್ಪ ಪರಾರಿಯಾಗಿದ್ದು, ಈತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಪೋಕ್ಸೋ‌ ಕಾಯ್ದೆಯಡಿ ಹಾಲೇಶ್​ನನ್ನು ಬಂಧಿಸಲಾಗಿದೆ. ಎಸ್ ಐ ತಿಪ್ಪೇಸ್ವಾಮಿ, ಹೆಡ್ ಕಾನ್​ಸ್ಟೇಬಲ್‌ಗಳಾದ ಫೈರೋಜ್, ಜಗದೀಶ್, ಶೀಲಾ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬಾಲಕಿಯನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಸೇರಿಸಲಾಗಿದೆ. ಪ್ರಕರಣದ ತನಿಖೆ ಮುಂದವರಿದಿದೆ ಎಂದು ಹೊನ್ನಾಳಿ ಸಿಪಿಐ ಟಿ. ವಿ. ದೇವರಾಜ್ ಮಾಹಿತಿ ನೀಡಿದ್ದಾರೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.