ETV Bharat / state

ದಾವಣಗೆರೆಯಲ್ಲಿ ಹಾಡಹಗಲೇ ಮನೆಗೆ ನುಗ್ಗಿದ ಖದೀಮ.. ಮಹಿಳೆ ಮೇಲೆ ಹಲ್ಲೆಗೈದು ಲಕ್ಷಗಟ್ಟಲೆ ಹಣ ದರೋಡೆ - ಹಣ ದರೋಡೆ ಮಾಡಿದ ಕಳ್ಳ

money stolen in Davanagere: ದಾವಣಗೆರೆಯ ಕುಂದುವಾಡ ರಸ್ತೆಯಲ್ಲಿರುವ ಲೇಕ್​​ ವೀವ್​ ಬಡಾವಣೆಯಲ್ಲಿ ಹಾಡಹಗಲೇ ದರೋಡೆಕೊರನೊಬ್ಬ ಮನೆಗೆ ನುಗ್ಗಿ ಹಣ ದೋಚಿದ್ದಾನೆ.

ಹಾಡುಹಗಲೇ ಲಕ್ಷಗಟ್ಟಲೆ ಹಣ ದರೋಡೆ ಮಾಡಿದ ಕಳ್ಳ
ಹಾಡುಹಗಲೇ ಲಕ್ಷಗಟ್ಟಲೆ ಹಣ ದರೋಡೆ ಮಾಡಿದ ಕಳ್ಳ
author img

By ETV Bharat Karnataka Team

Published : Sep 14, 2023, 6:45 PM IST

Updated : Sep 14, 2023, 7:32 PM IST

ಎಸ್ಪಿ ಉಮಾ ಪ್ರಶಾಂತ್ ಮನೆಕಳ್ಳತನ ಪ್ರಕರಣದ ಬಗ್ಗೆ ಮಾಹಿತಿ ನೀಡಿದರು

ದಾವಣಗೆರೆ : ಜಿಲ್ಲೆಯಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದೆ. ಒಂಟಿ ಮಹಿಳೆಯರು ಇರುವ ಮನೆಗಳನ್ನೇ ಟಾರ್ಗೆಟ್ ಮಾಡ್ತಿರುವ ದುರುಳರು ಹಾಡಹಗಲೇ ಮನೆಗಳಿಗೆ ನುಗ್ಗಿ ಹಣ ದೋಚುತ್ತಿದ್ದಾರೆ. ಇಂತಹ ಪ್ರಕರಣ ಬೆಣ್ಣೆ ನಗರಿಯ ಜನರನ್ನು ಬೆಚ್ಚಿಬೀಳಿಸಿದೆ. ಒಂಟಿ ಮಹಿಳೆ ಇರುವ ಮನೆಗೆ ನುಗ್ಗಿದ ದುರುಳನೋರ್ವ ಮನಬಂದಂತೆ ಹಲ್ಲೆ ಮಾಡಿ ಮನೆಯಲ್ಲಿದ್ದ ಐದು ಲಕ್ಷವನ್ನು ಹಾಡಹಗಲೇ ದೋಚಿರುವ ಘಟನೆಯಿಂದ ಇಡೀ ನಗರದ ಜನರಲ್ಲಿ ಆತಂಕ ಉಂಟಾಗಿದೆ.

ಇಲ್ಲಿನ ಪ್ರತಿಷ್ಠಿತ ಏರಿಯಾದ ಮನೆಗಳಲ್ಲಿ ಜನರಿಗೆ ಸೇಫ್​ ಇಲ್ವಾ? ಎಂಬ ಪ್ರಶ್ನೆ ಉದ್ಭವವಾಗಿದೆ‌. ಹಗಲು ಹೊತ್ತೆ ಕಳ್ಳರು ಮನೆಗೆ ನುಗ್ಗಿ ಕಳ್ಳತನ ಮಾಡ್ತಿರುವುದರಿಂದ‌ ಜನಸಾಮಾನ್ಯರು ಭಯಭೀತರಾಗಿದ್ದಾರೆ. ದಾವಣಗೆರೆ ಕುಂದುವಾಡ ರಸ್ತೆಯಲ್ಲಿನ ಲೇಕ್ ವೀವ್ ಬಡಾವಣೆಯಲ್ಲಿರುವ ಶ್ರೀನಾಥ್ ಹಾಗು ಯೋಗೇಶ್ವರಿ ದಂಪತಿ ಮನೆಯಲ್ಲಿ ಹಗಲೇ ದರೋಡೆ ಮಾಡಲಾಗಿದೆ. ಬುಧವಾರ ಹಾಡಹಗಲೇ ಶ್ರೀನಾಥ್ ಅವರ ಮನೆಗೆ ನುಗ್ಗಿದ್ದ ಖದೀಮನೋರ್ವ ಮನೆಯಲ್ಲಿದ್ದ ಮಹಿಳೆ ಯೋಗೇಶ್ವರಿ ಮೇಲೆ ಮೊದಲಿಗೆ ಮನಬಂದಂತೆ ಹಲ್ಲೆ ಮಾಡಿದ್ದಾನೆ. ಹಣ ಕೊಡು ಇಲ್ಲದಿದ್ದರೆ ಮಗುವನ್ನು ಕೊಲ್ಲುತ್ತೇನೆ ಎಂದು ಬೆದರಿಕೆ ಹಾಕಿದ್ದ.

ಮನೆಗೆ ನುಗ್ಗಿದ ವ್ಯಕ್ತಿಯ ಚಲನವಲನ ಸಿಸಿ ಕ್ಯಾಮರಾದಲ್ಲಿ‌ ಸೆರೆಯಾಗಿದೆ. ಈ ಖದೀಮನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಇನ್ನು ಮನೆಯಲ್ಲಿ ಒಂಟಿ ಮಹಿಳೆ ಇರುವುದನ್ನು ಗಮನಿಸಿ ದರೋಡೆಕೋರ ಆ ಮಹಿಳೆ ಮೇಲೆ ಹಲ್ಲೆ ಮಾಡಿ ಹಣ ಲಪಾಟಿಸಿರುವ ವಿಚಾರ ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಹಲ್ಲೆಗೊಳಗಾದ ಯೋಗೇಶ್ವರಿಯವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮನೆಯ ಮಾಲೀಕ ಶ್ರೀನಾಥ್ ಅವರು ಮನೆಯಲ್ಲಿ ಇಲ್ಲದ್ದನ್ನು ಗಮನಿಸಿರುವ ದುರುಳ ಮಗನ ಚಿಕಿತ್ಸೆಗಾಗಿ ಇರಿಸಿದ್ದ ಸುಮಾರು 5 ಲಕ್ಷಕ್ಕೂ ಅಧಿಕ ಹಣವನ್ನು ಲಪಟಾಯಿಸಿದ್ದಾನೆ. ಮನೆಗೆ ಕಳ್ಳನ ಎಂಟ್ರಿ ಮತ್ತು ಎಕ್ಸಿಟ್ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಕಳ್ಳನ ಮುಖಕ್ಕೆ ಮುಸುಕು ಹಾಕಿದ್ದರಿಂದ ಗುರುತಿಸಲು ಕಷ್ಟವಾಗಿದೆ. 5 ಲಕ್ಷ ಹಣ ಕಳ್ಳತನವಾಗಿರುವುದರಿಂದ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ರಾಮಗೊಂಡ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದರ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಳ್ಳನನ್ನು ಬಂಧಿಸಲು ಕಾರ್ಯಾಚರಣೆಗಿಳಿದಿದ್ದಾರೆ.

ಈ ವೇಳೆ ಹಲ್ಲೆಗೊಳಗಾದ ಮಹಿಳೆ ಯೋಗೇಶ್ವರಿ ಪ್ರತಿಕ್ರಿಯಿಸಿ, ನಾನು ಕಸ ಎಸೆಯಲು ಹೊರ ಹೋದ ಸಂದರ್ಭದಲ್ಲಿ ಮನೆಯೊಳಗೆ ಕಳ್ಳ ಅಡಗಿಕೊಂಡಿದ್ದ. ಮನೆಯೊಳಗೆ ತೆರಳಿದ ಬಳಿಕ ಮನಬಂದಂತೆ ತಲೆ ಭಾಗಕ್ಕೆ ಹಲ್ಲೆ ಮಾಡಿದ್ದಾನೆ. ಕೋಣೆಗೆ ತೆರಳಿ ಬೀಗ ಕೊಡು, ಹಣ ಎಲ್ಲಿದೆ? ಎಂದು ಕೇಳಿದನು. ಹಲ್ಲೆ ಮಾಡ್ಬೇಡ ಹಣ ಕೊಡುವೆ ಎಂದು ಹೇಳಿದಾಗ ಸುಮ್ಮನಾದ ದುಷ್ಕರ್ಮಿ ಬೀಗ ಪಡೆದು ಹಣ ತೆಗೆದುಕೊಂಡು ತನ್ನನ್ನು ಯಾರೋ ಕಳಿಸಿದ್ದಾರೆಂದು ಹೇಳಿ ಹೊರಟು ಹೋದ ಎಂದಿದ್ದಾರೆ.

ಎಸ್ಪಿ ಉಮಾ ಪ್ರಶಾಂತ್ ಹೇಳಿದ್ದಿಷ್ಟು : ಈ ಘಟನೆ ಕಳೆದ ದಿನ ನಡೆದಿದ್ದು, ಮನೆಯೊಡತಿ ಯೋಗೇಶ್ವರಿ ಅವರು ಕಸ ಎಸೆಯಲು ಮನೆಯಿಂದ ಹೊರ ಬಂದಾಗ ಅಪರಿಚಿತ ಯುವಕ ಮನೆಯೊಳಗೆ ತೆರಳಿ ಮಗುವನ್ನು ಹೆದರಿಸಿ ಕೂರಿಸಿರುತ್ತಾನೆ. ಬಳಿಕ ಮನೆಯೊಳಗೆ ಬಂದ ಮಹಿಳೆ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿ ಗಾಯಗೊಳಿಸಿದ್ದಾನೆ. ಹಣ, ಚಿನ್ನ ಎಲ್ಲಿಟ್ಟಿದ್ದೀಯಾ? ಎಂದು ಕೂಗುತ್ತ ಕೇಳಿದ್ದಾನೆ. ಮಹಿಳೆಯಿಂದ ಹಣ ಪಡೆದು ಯುವಕ ಕಾಲ್ಕಿತ್ತಿದ್ದಾನೆ. ಮಾಹಿತಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆಹಾಕಿದ್ದೇನೆ. ಈ ಪ್ರಕರಣ ತನಿಖಾ ಹಂತದಲ್ಲಿದೆ. ಇದರ ಸಂಬಂಧ ಪ್ರಕರಣ ದಾಖಲಾಗಿದೆ. ಆರೋಪಿಗಾಗಿ ಹುಡುಕಾಟ ಶುರುವಾಗಿದೆ. ಅಪರಿಚಿತ ವ್ಯಕ್ತಿಯ ಚಲನವಲನದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ತನಿಖೆ ನಡೆಸುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ : ಮನೆಗೆ ನುಗ್ಗಿ ಕುಟುಂಬಸ್ಥರನ್ನು ಕಟ್ಟಿ ಹಾಕಿ ನಗದು ಚಿನ್ನಾಭರಣ ದೋಚಿದ ದರೋಡೆಕೋರರು

Last Updated : Sep 14, 2023, 7:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.