ದಾವಣಗೆರೆ: ನಿವೃತ್ತ ನ್ಯಾ. ಎ ಜೆ ಸದಾಶಿವ ಆಯೋಗದ ವರದಿಯನ್ನು ಮುಂದಿನ ಸಂಪುಟದಲ್ಲಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಆಗ್ರಹಿಸಿ ಪತ್ರ ಚಳವಳಿ ನಡೆಸಲಿದ್ದೇವೆ ಎಂದು ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಮುತ್ತಣ್ಣ ವೈ ಬೆಣ್ಣೂರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 21 ವರ್ಷಗಳಿಂದ ಶೇ.15ರ ಮೀಸಲಾತಿಯಲ್ಲಿ ಒಳಮೀಸಲಾತಿ ನಿಗದಿಗೊಳಿಸಲು ಹೋರಾಟ ಮಾಡುತ್ತಲೇ ಬಂದಿದ್ದೇವೆ. 2009ರಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಎ ಜೆ ಸದಾಶಿವ ಆಯೋಗಕ್ಕೆ ಸುಮಾರು 12 ಕೋಟಿ ರೂ. ಅನುದಾನ ನೀಡುವುದರೊಂದಿಗೆ ವರದಿಯ ರೂಪರೇಷೆಗಳಿಗಾಗಿ ಎಲ್ಲಾ ರೀತಿಯ ಸಹಕಾರ ಸಿಕ್ಕಿದೆ. ನಂತರ 2012ರಲ್ಲಿ ಬಿಜೆಪಿ ಸರ್ಕಾರವೇ ವರದಿ ಪಡೆದುಕೊಂಡಿದೆ.
ಈ ಹಿನ್ನೆಲೆ ಇಂದು ಕೂಡ ಬಿಜೆಪಿ ಸರ್ಕಾರ ಇರುವುದರಿಂದ ನಮಗೆ ನಂಬಿಕೆ ಇದೆ. ವರದಿಯನ್ನು ಸಂಪುಟ ಅಂಗೀಕರಿಸುತ್ತೆ. ಅಂಗೀಕರಿಸದಿದ್ದಲ್ಲಿ ಮತ್ತೊಂದು ಧೃವೀಕರಣ ಆಗುತ್ತೆ ಎಂದು ಎಚ್ಚರಿಸಿದರು.