ETV Bharat / state

ಶಿಕ್ಷಕ, ಶಿಕ್ಷಕಿಯ ಅನುಮಾನಾಸ್ಪದ ಸಾವು: ಕೊಲೆ ನಡೆದಿರುವ ಶಂಕೆ! - davanagere murder news

ಹೊನ್ನಾಳಿ ತಾಲೂಕಿನ ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ವೇದು ಎಂಬ ಶಿಕ್ಷಕ ಹಾಗೂ ಆತನಿಗೆ ಪರಿಚಯವಿದ್ದ ಶಿಕ್ಷಕಿಯ ಶವ ಪತ್ತೆಯಾಗಿದ್ದು, ಕೊಲೆ ಶಂಕೆ ವ್ಯಕ್ತವಾಗಿದೆ.

teachers-murder-in-honnali-taluk
ಶಿಕ್ಷಕ, ಶಿಕ್ಷಕಿಯ ಅನುಮಾನಾಸ್ಪದ ಸಾವು: ಕೊಲೆ ನಡೆದಿರುವ ಶಂಕೆ!
author img

By

Published : Nov 1, 2020, 4:08 PM IST

Updated : Nov 1, 2020, 9:00 PM IST

ದಾವಣಗೆರೆ: ಹೊನ್ನಾಳಿ ತಾಲೂಕಿನ ಗೊಲ್ಲರಹಳ್ಳಿಯಲ್ಲಿ ಖಾಸಗಿ ಶಾಲಾ ಶಿಕ್ಷಕ ಹಾಗೂ ಆತನಿಗೆ ಪರಿಚಯವಿದ್ದ ಶಿಕ್ಷಕಿಯ ಶವವು ಪತ್ತೆಯಾಗಿದ್ದು, ಇಬ್ಬರೂ ಕೂಡ ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದೆ.

teachers murder in honnali taluk
ಶಿಕ್ಷಕ ವೇದು ಶವ

ಕಾರಿಗನೂರು ಕ್ರಾಸ್​​ನ ನಿವಾಸಿ ವೇದು(26), ಮತ್ತು ಅವರಿಗೆ ಪರಿಚಯವಿದ್ದ ಶಿಕ್ಷಕಿ ಕೊಲೆಯಾಗಿದ್ದಾರೆ. ಕಳೆದ 28 ರಂದು ಮನೆ ಬಿಟ್ಟಿದ್ದ ಶಿಕ್ಷಕ ವೇದು ಹೆಣವಾಗಿ ಗೊಲ್ಲರಹಳ್ಳಿಯಲ್ಲಿ ಪತ್ತೆಯಾಗಿದ್ದರು.‌ ಹೊನ್ನಾಳಿ ತಾಲೂಕಿನ ತುಂಗಾಭದ್ರಾ ನದಿ ತೀರದಲ್ಲಿ ಶಿಕ್ಷಕನ ಪರ್ಸ್, ಬ್ಯಾಗ್, ಶೂ ಪತ್ತೆಯಾಗಿತ್ತು. ತನಿಖೆ ನಡೆಸಿದೆ ವೇಳೆ ಶವ ಪತ್ತೆಯಾಗಿದೆ.

ಇನ್ನು ವೇದುಗೆ ಪರಿಚಯವಿದ್ದ ಶಿಕ್ಷಕಿಯ ಶವವೂ ಕೂಡ ನಿನ್ನೆ ಚನ್ನಗಿರಿ ತಾಲೂಕಿನ ರಾಜಗೊಂಡನಹಳ್ಳಿ ಗ್ರಾಮದ ಕೃಷಿ ಹೊಂಡದಲ್ಲಿ ಪತ್ತೆಯಾಗಿದೆ.

ಕಾರಿಗನೂರು ಗ್ರಾಮದ ಶಿವಕುಮಾರ್ ಎಂಬುವವರ ಜೊತೆ ಶಿಕ್ಷಕಿಯ ವಿವಾಹವಾಗಿತ್ತು. ಶಿವಕುಮಾರ್ ಮನೆಯವರು ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು. ಈ ಕಾರಣಕ್ಕೆ ಹಲವು ಬಾರಿ ಮನೆಯಲ್ಲಿ ಗಲಾಟೆ ಆಗಿತ್ತು. ಶಿವಕುಮಾರ್ ತನ್ನ ಸಹೋದರನ ಜೊತೆ ಸೇರಿ ಕೊಲೆ ಮಾಡಿ ಕೃಷಿ ಹೊಂಡದಲ್ಲಿ ಹಾಕಿದ್ದಾರೆ ಎಂದು ಹತ ಶಿಕ್ಷಕಿಯ ಸಹೋದರ ಪ್ರದೀಪ್ ಚನ್ನಗಿರಿ ಪೊಲೀಸರಿಗೆ ದೂರು ನೀಡಿದ್ದಾರೆ.

ಚನ್ನಗಿರಿ ಪೊಲೀಸರು ಪ್ರಕರಣ ಕುರಿತು ಜಂಟಿ ತನಿಖೆ ನಡೆಸುತ್ತಿದ್ದಾರೆ. ಸಾವಿಗೀಡಾಗಿರುವ ಶಿಕ್ಷಕಿ ಪತಿಯ ಮೇಲೆ ಪೊಲೀಸರಿಗೆ ಅನುಮಾನ ಬಂದಿದ್ದು, ಪ್ರಕರಣ ಬೇಧಿಸಲು ತನಿಖೆ ಚುರುಕುಗೊಳಿಸಿದ್ದಾರೆ.‌

Last Updated : Nov 1, 2020, 9:00 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.