ETV Bharat / state

ಹರಿಹರ ಕ್ಷೇತ್ರ ಕೈ ಟಿಕೆಟ್ ಘೋಷಣೆ ಇನ್ನೂ ಕಗ್ಗಂಟು: ಹೈಕಮಾಂಡ್​ ನಡೆಗೆ ಶಾಸಕ ಎಸ್ ರಾಮಪ್ಪ ಬೆಂಬಲಿಗರ ಅಸಮಾಧಾನ

author img

By

Published : Apr 8, 2023, 6:49 PM IST

Updated : Apr 8, 2023, 10:15 PM IST

ಹರಿಹರ ಕ್ಷೇತ್ರಕ್ಕೆ ಇನ್ನೂ ಘೋಷಣೆಯಾಗದ ಕಾಂಗ್ರೆಸ್​ ಟಿಕೆಟ್​ - ಹಾಲಿ ಶಾಸಕ ಎಸ್​ ರಾಮಪ್ಪ ಬೆಂಬಲಿಗರಲ್ಲಿ ಗೊಂದಲ- ಕನಕ ಪೀಠದ ಶ್ರೀಗಳ ವಿರುದ್ಧದ ವದಂತಿ ತಳ್ಳಿಹಾಕಿದ ಕಾಂಗ್ರೆಸ್​ ಮುಖಂಡರು

Harihara MLA S Ramappa Supporters
ಹರಿಹರ ಶಾಸಕ ಎಸ್ ರಾಮಪ್ಪನವರ ಬೆಂಬಲಿಗರು

ಹಾಲಿ ಶಾಸಕ ಎಸ್​ ರಾಮಪ್ಪ ಬೆಂಬಲಿಗರು

ದಾವಣಗೆರೆ: ಈಗಾಗಲೇ ಕಾಂಗ್ರೆಸ್​​​ನಿಂದ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆಯಾಗಿದ್ದರೂ ಹರಿಹರದ ಹಾಲಿ ಶಾಸಕ ಎಸ್ ರಾಮಪ್ಪ ಅವರ ಹೆಸರು ಮಾತ್ರ ಇನ್ನೂ ಘೋಷಣೆಯಾಗದಿರುವುದು ಬೆಂಬಲಿಗರಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. ಆಕಾಂಕ್ಷಿತರಲ್ಲಿ ಒಬ್ಬರಿಗೆ ಟಿಕೆಟ್ ಕೊಡಲಾಗುವುದು ಎಂಬ ಹೈಕಮಾಂಡ್ ಸೂಚಿಸಿದ್ದು, ಆದರೆ ಇಡೀ ಹರಿಹರ ಕಾಂಗ್ರೆಸ್ ನ ಕಾರ್ಯಕರ್ತರು ಹಾಗು ಮುಖಂಡರು ಹಾಲಿ ಶಾಸಕ ಎಸ್ ರಾಮಪ್ಪ ಅವರಿಗೆ ಕೈ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಇದಲ್ಲದೇ ತನಗೆ ಟಿಕೆಟ್ ಸಿಗುವ ವಿಶ್ವಾಸದಲ್ಲಿ ಹಾಲಿ ಶಾಸಕ ಎಸ್ ರಾಮಪ್ಪ ಅವರು ಕಾಲಿಗೆ ಚಕ್ರಕಟ್ಟಿಕೊಂಡು ಇಡೀ ಕ್ಷೇತ್ರದಲ್ಲಿ ಸಂಚರಿಸುತ್ತಿದ್ದಾರೆ. ರಾಮಪ್ಪನವರಿಗೆ ಟಿಕೆಟ್ ಮಾತ್ರ ಇನ್ನೂ ಘೋಷಣೆ ಆಗದಿರುವುದಕ್ಕೆ ಕಾರ್ಯಕರ್ತರು ಹಾಗೂ ಮುಖಂಡರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಕೈ ಟಿಕೆಟ್ ವಿಚಾರವಾಗಿ 'ಈಟಿವಿ ಭಾರತ'ಕ್ಕೆ ಪ್ರತಿಕ್ರಿಯಿಸಿದ ಶಾಸಕ ರಾಮಪ್ಪ ಅವರ ಬೆಂಬಲಿಗ ಹಾಗೂ ಕಾಂಗ್ರೆಸ್ ಮುಖಂಡ ಆರ್ ವಿಜಯ್ ಕುಮಾರ್ ಅವರು, ರಾಮಪ್ಪನವರು ತಮ್ಮ ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕೆಲಸಗಳನ್ನು ನೋಡಿ, ಇಷ್ಟರೊಳಗೆ ಹೈಕಮಾಂಡ್​ ಟಿಕೆಟ್ ಘೋಷಣೆ ಮಾಡಬೇಕಿತ್ತು. ಹರಿಹರ ಕ್ಷೇತ್ರದ ಟಿಕೆಟ್ ಘೋಷಣೆ ಆಗದಿರುವುದರಿಂದ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಯಾಗಿದೆ ಎಂದಿದ್ದಾರೆ.

ಇನ್ನು ಸಿದ್ದರಾಮಯ್ಯ, ಡಿಕೆಶಿ ಅವರಿಗೆ ಮನವಿಯನ್ನೂ ಮಾಡಿದ್ದು, ರಾಮಪ್ಪನವರಿಗೆ ಟಿಕೆಟ್ ಘೋಷಣೆ ಮಾಡದೆ ಇದ್ರೇ, ಹರಿಹರದಲ್ಲಿ ಕಾಂಗ್ರೆಸ್ 20 ವರ್ಷಗಳ ಹಿಂದೆ ಹೋಗುವುದು ಖಂಡಿತ. ರಾಮಪ್ಪನವರು ಪಕ್ಷ ಸಂಘಟನೆ ದೃಷ್ಟಿಯಿಂದ ಟಿಕೆಟ್ ಘೋಷಣೆ ಮಾಡ್ಬೇಕಾಗಿದೆ. ನಮ್ಮ ನಾಯಕರನ್ನು ಬಂಡಾಯ ಏಳುವಂತೆ ನಾವ್ಯಾಕೆ ಮಾಡ್ಬೇಕು. ರಾಮಪ್ಪನವರು ಪ್ರಾಮಾಣಿಕ ಪಕ್ಷಕ್ಕೆ ದುಡಿದವರಿಗೆ ಕಾಂಗ್ರೆಸ್ ನಾಯಕರು ಮೊದಲ ಲಿಸ್ಟ್​ನಲ್ಲೇ ಟಿಕೆಟ್ ಘೋಷಣೆ ಮಾಡಬೇಕಿತ್ತು. ಇಲ್ಲವಾಗಿದ್ದಲ್ಲಿ ಮುಂದಿನ ನಡೆ ಬಗ್ಗೆ ನಮ್ಮ ನಾಯಕ ಎಸ್ ರಾಮಪ್ಪನವರೊಂದಿಗೆ ಚರ್ಚಿಸಿ ನಿರ್ಧಾರ ಮಾಡುತ್ತೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕನಕ ಪೀಠದ ನಿರಂಜನಾನಂದ ಪುರಿ ಶ್ರೀ ಹಸ್ತಕ್ಷೇಪವಿಲ್ಲ- ವಿಜಯ್​ಕುಮಾರ್: ಎಸ್ ರಾಮಪ್ಪನವರಿಗೆ ಟಿಕೆಟ್ ತಪ್ಪಿಸುವ ದೃಷ್ಟಿಯಿಂದ ಕನಕ ಪೀಠದ ನಿರಂಜನಂದ ಪುರಿ ಶ್ರೀ ಕಾಂಗ್ರೆಸ್ ನಾಯಕರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಮಾತು ಹರಿಹರ ಕಾಂಗ್ರೆಸ್ ಕಾರ್ಯಕರ್ತರ ವಲಯದಲ್ಲಿ ಕೇಳಿಬರುತ್ತಿವೆ. ಇದಕ್ಕೆ ಶ್ರೀಗಳಿಗೆ ಯಾವುದೇ ಸಂಬಂಧವಿಲ್ಲ ಎಂದು ಕಾಂಗ್ರೆಸ್ ಮುಖಂಡ ವಿಜಯ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಶ್ರೀಗಳು ಶಾಸಕ ರಾಮಪ್ಪನವರಿಗೆ ಟಿಕೆಟ್ ನೀಡದಂತೆ ಹಸ್ತಕ್ಷೇಪ ಮಾಡ್ತಿದ್ದಾರೆಂದು ಸುಳ್ಳು ವದಂತಿ ಹಬ್ಬಿಸಿದ್ದು, ಇದು ತಪ್ಪು ಸಂದೇಶವಾಗಿದೆ. ಗುರುಗಳು ಸಮಾಜದ ಪರವಾಗಿದ್ದು, ವ್ಯಕ್ತಿಪರವಾಗಿಲ್ಲ. ಪಕ್ಷದ ಹೈಕಮಾಂಡ್ ಯಾರಿಗೇ ಟಿಕೆಟ್ ನೀಡಿದ್ರು ಕೂಡ ಅವರ ಆಶೀರ್ವಾದ ಇರುತ್ತದೆ. ಈ ವಿಚಾರದಲ್ಲಿ ಗುರುಗಳನ್ನು ತಪ್ಪು ದಾರಿಗೆ ಎಳೆಯುವ ಕೆಲಸವನ್ನು ಯಾರು ಮಾಡ್ಬೇಡಿ. ಗುರುಗಳು ಎಸ್ ರಾಮಪ್ಪನವರಿಗೆ ಆಶೀರ್ವಾದ ಮಾಡಿದ್ದಾರೆ. ರಾಮಪ್ಪನವರನ್ನು ಬಿಟ್ರೇ ಯಾರಿಗೂ ಶ್ರೀಯವರು ಆಶೀರ್ವಾದ ಮಾಡಿಲ್ಲ ಎಂದು ತಿಳಿಸಿದರು.

ಎಸ್ ರಾಮಪ್ಪನವರಿಗೆ ಕೈ ಟಿಕೆಟ್ ವಿಳಂಬ: 2019 ರಲ್ಲಿ ಸಮ್ಮಿಶ್ರ ಸರ್ಕಾರ ಉರುಳಿಸಿ 17 ಜನರನ್ನೂ ಆಪರೇಷನ್ ಕಮಲಕ್ಕೆ ಒಳಪಡಿಸಿ, ಸರ್ಕಾರ ರಚಿಸುವ ಮುನ್ನ ಹರಿಹರ ಶಾಸಕನಿಗೆ ಬಿಜೆಪಿಗೆ ಬರುವಂತೆ ಆಫರ್ ನೀಡಿದ್ದರು. ಅಂತಹ ಸಮಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಬಗೆಯದೆ ಆಪರೇಷನ್ ಕಮಲಕ್ಕೆ ಒಳಗಾಗದೇ ಪಕ್ಷ ನಿಷ್ಠೆ ತೋರಿದ್ದ ಶಾಸಕ ರಾಮಪ್ಪ ಅವರಿಗೆ ಪಕ್ಷ ಟಿಕೆಟ್ ಘೋಷಣೆ ಆಗದಿರುವುದು ಇಡೀ ಹರಿಹರ ಕ್ಷೇತ್ರದ ಕಾಂಗ್ರೆಸ್ ನಾಯಕರಲ್ಲಿ ಅಸಮಾಧಾನಕ್ಕೆ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ.

ಇದನ್ನೂಓದಿ:ಸಿದ್ದರಾಮಯ್ಯ ಮನೆ ಮುಂದೆ ಗೋಣಿ ಮಹಾಂತೇಶ್​ ಬೆಂಬಲಿಗರ ಹೋರಾಟ ; ಎಚ್​. ವಿಶ್ವನಾಥ್ ಭೇಟಿ

Last Updated : Apr 8, 2023, 10:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.