ETV Bharat / state

ಭಾನುವಾರ ಲಾಕ್​​ಡೌನ್‌, ಹರಿಹರ ಸಂಪೂರ್ಣ ಸ್ತಬ್ಧ - Sunday Lockdown

ಟ್ಯಾಕ್ಸಿ, ಆಟೋ, ತುರ್ತು ವಾಹನಗಳ ಓಡಾಟ ಬಿಟ್ಟು, ಇನ್ನುಳಿದ ಎಲ್ಲಾ ರೀತಿಯ ವಾಹನಗಳ ಓಡಾಟಕ್ಕೆ ಬ್ರೇಕ್ ಬಿದ್ದಿದೆ. ತರಕಾರಿ ಮಾರುಕಟ್ಟೆ, ಹೂ, ಹಣ್ಣು, ಹೋಟೆಲ್ ದಿನಸಿ ಅಂಗಡಿಗಳು ಹಾಗೂ ದೇವಾಲಯಗಳು ಸಂಪೂರ್ಣ ಬಂದ್ ಆಗಿದ್ದವು..

Sunday Lockdown effect on harihara
ಹರಿಹರ ನಗರ ಸಂಪೂರ್ಣ ಸ್ತಬ್ಧ
author img

By

Published : Jul 5, 2020, 8:43 PM IST

ಹರಿಹರ: ಇಂದು ನಗರ ಸಂಪೂರ್ಣ ಸ್ತಬ್ಧಗೊಂಡಿತ್ತು. ಜನ ಹಾಗೂ ವಾಹನಗಳ ಸಂಚಾರವಿಲ್ಲದೆ ರಸ್ತೆಗಳೆಲ್ಲಾ ಬಿಕೋ ಎನ್ನುತ್ತಿದ್ದವು.

ಶನಿವಾರ ರಾತ್ರಿ 8 ಗಂಟೆಯಿಂದಲೇ ಪ್ರಾರಂಭವಾಗಿರುವ ಲಾಕ್​​ಡೌನ್ ಸತತ 33 ಗಂಟೆಗಳ ಕಾಲ ಮುಂದುವರೆದಿದೆ. ನಗರದಲ್ಲಿ ವ್ಯಾಪಾರ, ವಹಿವಾಟು ಬಂದ್ ಆಗಿದೆ. ಖಾಸಗಿ ಕ್ಲಿನಿಕ್ ಹಾಗೂ ಔಷಧಿ ಅಂಗಡಿಗಳು ಹೊರತುಪಡಿಸಿ ಉಳಿದೆಲ್ಲಾ ವಹಿವಾಟುಗಳು ಸ್ಥಗಿತಗೊಂಡಿವೆ.

ರಾಜ್ಯ ರಸ್ತೆ ಸಾರಿಗೆ ಬಸ್​​ಗಳ ಸಂಚಾರ ಶನಿವಾರ ರಾತ್ರಿಯಿಂದಲೇ ಬಂದ್ ಆಗಿದೆ. ಟ್ಯಾಕ್ಸಿ, ಆಟೋ, ತುರ್ತು ವಾಹನಗಳ ಓಡಾಟ ಬಿಟ್ಟು, ಇನ್ನುಳಿದ ಎಲ್ಲಾ ರೀತಿಯ ವಾಹನಗಳ ಓಡಾಟಕ್ಕೆ ಬ್ರೇಕ್ ಬಿದ್ದಿದೆ. ತರಕಾರಿ ಮಾರುಕಟ್ಟೆ, ಹೂ, ಹಣ್ಣು, ಹೋಟೆಲ್ ದಿನಸಿ ಅಂಗಡಿಗಳು ಹಾಗೂ ದೇವಾಲಯಗಳು ಸಂಪೂರ್ಣ ಬಂದ್ ಆಗಿದ್ದವು.

ನಗರದಲ್ಲಿ ಪೊಲೀಸರು ವಾಹನಗಳಲ್ಲಿ ಗಸ್ತು ತಿರುಗಿ ಹೊರಗೆ ಓಡಾಡುವ ಜನರಿಗೆ ಎಚ್ಚರಿಕೆ ನೀಡುತ್ತಿದ್ದರು. ಅಲ್ಲದೆ ಪ್ರಮುಖ ಸರ್ಕಲ್‌ಗಳಲ್ಲಿ ಒಬ್ಬೊಬ್ಬ ಪೊಲೀಸರನ್ನು ನಿಯೋಜಿಸಿ ಬಿಗಿಯಾದ ಕ್ರಮ ಕೈಗೊಳ್ಳಲಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.