ETV Bharat / state

ವಿದ್ಯಾರ್ಥಿನಿಯ ಸ್ಕೂಟಿಗೆ ಡಿಕ್ಕಿ ಹೊಡೆದ ಕಾರು: ಅಪಘಾತದ ವಿಡಿಯೋ ನೋಡಿದ್ರೆ ಎದೆ ಝಲ್ ಅನ್ನುತ್ತೆ!

ವಿದ್ಯಾರ್ಥಿನಿಯ ದ್ವಿಚಕ್ರ ವಾಹನಕ್ಕೆ ವೇಗವಾಗಿ ಬಂದ ಕಾರೊಂದು ಡಿಕ್ಕಿ ಹೊಡೆದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಅಪಘಾತ ದೃಶ್ಯ ನೋಡಿದರೆ ನಿಜಕ್ಕೂ ಎದೆ ಝಲ್​ ಅನ್ನುತ್ತೆ.

ವಿದ್ಯಾರ್ಥಿನಿ ಶೈಲಜಾ ತನ್ನ ಸ್ಕೂಟಿಯಲ್ಲಿ ವಿವಿಯ ಕಡೆಯಿಂದ ಬರುತ್ತಿದ್ದಾಗ ಡಿಕ್ಕಿ ಹೊಡೆದ ಕಾರು
author img

By

Published : Apr 27, 2019, 11:23 PM IST

ದಾವಣಗೆರೆ: ತಾಲೂಕಿನ ತೋಳಹುಣಸೆ ಗ್ರಾಮದ ದಾವಣಗೆರೆ ವಿವಿ ಬಳಿ ನಡೆದಿದ್ದ ಅಪಘಾತದ ವಿಡಿಯೋ ನೋಡಿದರೆ ಎದೆ ಝಲ್ ಎನಿಸುವಂತಿದೆ.

ಹೌದು, ಕರ್ಕಿ ಗ್ರಾಮದ ವಿದ್ಯಾರ್ಥಿನಿ ಶೈಲಜಾ ತನ್ನ ಸ್ಕೂಟಿಯಲ್ಲಿ ವಿವಿಯ ಕಡೆಯಿಂದ ಬರುತ್ತಿದ್ದಾಗ ಈ ವೇಳೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಸ್ಕೂಟಿ ಸಂಪೂರ್ಣ ಜಖಂಗೊಂಡರೆ, ವಿದ್ಯಾರ್ಥಿನಿ ಬೀಳುವ ದೃಶ್ಯ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ದೃಶ್ಯಾವಳಿ ಅಪಘಾತದ ತೀವ್ರತೆ ತೋರಿಸುತ್ತದೆಯಲ್ಲದೇ, ಕ್ಷಣ ಮಾತ್ರದಲ್ಲಿ ನಡೆದ ಈ ಅಪಘಾತ ನೋಡಿದರೆ ಭಯವೆನಿಸುತ್ತದೆ.

ವಿವಿಯಲ್ಲಿ ವ್ಯಾಸಂಗ ಮಾಡುತ್ತಿದ್ದ 23 ವರ್ಷದ ಶೈಲಜಾ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದಳು. ಆಸ್ಪತ್ರೆಗೆ ಸೇರಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾಳೆ. ಶನಿವಾರ ಮಧ್ಯಾಹ್ನದ ವೇಳೆ ಕಾಲೇಜು ಮುಗಿಸಿ ತನ್ನ ದ್ವಿಚಕ್ರ ವಾಹನದಲ್ಲಿ ದಾವಣಗೆರೆ ವಿವಿಯ ಮುಖ್ಯ ಗೇಟ್​ನಿಂದ ಹೊರ ಹೋಗುವಾಗ ಅತಿ ವೇಗವಾಗಿ ಬಂದ ಕಾರು, ಬೈಕ್​ಗೆ​ ಡಿಕ್ಕಿ ಹೊಡೆದಿದೆ. ಈ ದೃಶ್ಯ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಲ್ಲಿದ್ದ ಸ್ಥಳೀಯರು, ವಿದ್ಯಾರ್ಥಿಗಳು ತಕ್ಷಣ ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದಾದರೂ ಪ್ರಯೋಜನವಾಗಲಿಲ್ಲ.

ವಿದ್ಯಾರ್ಥಿನಿ ಶೈಲಜಾ ತನ್ನ ಸ್ಕೂಟಿಯಲ್ಲಿ ವಿವಿಯ ಕಡೆಯಿಂದ ಬರುತ್ತಿದ್ದಾಗ ಡಿಕ್ಕಿ ಹೊಡೆದ ಕಾರು

ವಿವಿ ವಿದ್ಯಾರ್ಥಿಗಳ ಆಕ್ರೋಶ:

ದಾವಣಗೆರೆಯಿಂದ ಬೀರೂರು ರಾಜ್ಯ ಹೆದ್ದಾರಿ ಕಾಲೇಜು ಮುಂಭಾಗದಲ್ಲಿ ಹಾದು ಹೋಗುತ್ತದೆ. ವಾಹನಗಳ ದಟ್ಟಣೆ ಯಾವಾಗಲೂ ಹೆಚ್ಚಾಗಿರುತ್ತದೆ. ಅತ್ಯಂತ ವೇಗದಲ್ಲಿ ವಾಹನಗಳು ಓಡಾಡುತ್ತವೆ. ವಿದ್ಯಾರ್ಥಿಗಳು ರಸ್ತೆಯನ್ನು ದಾಟುವಾಗ ಸಾಕಷ್ಟು ಅಪಘಾತಗಳಾಗಿವೆ. ಯಾವುದೇ ಸೂಚನಾ ಫಲಕಗಳಿಲ್ಲದಿರುವುದೇ ಅವಘಡಗಳಿಗೆ ಕಾರಣವಾಗುತ್ತಿದೆ ಎಂಬುದು ವಿವಿ ವಿದ್ಯಾರ್ಥಿಗಳ ಆರೋಪ.

ವಿವಿ ಮುಂಭಾಗದ ರಸ್ತೆಯಲ್ಲಿ ವಾಹನಗಳು ನಿಧಾನಗತಿಯಲ್ಲಿ ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕು. ಅಪಘಾತದಲ್ಲಿ ಮೃತಪಟ್ಟಿರುವ ವಿದ್ಯಾರ್ಥಿನಿ ಶೈಲಜಾ ಸಾವಿಗೆ ರಾಜ್ಯ ರಸ್ತೆ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳ ಬೇಜವಾಬ್ದಾರಿ ಕಾರಣ. ಆದಷ್ಟು ಬೇಗ ಇಲ್ಲಿ ಹಂಪ್ಸ್​ ಮತ್ತು ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂದು ವಿವಿಯ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

Intro:filename
KN_DVG_01_27_HORRIBAL_SCRIPT_05_YOGARAJ_7203307

ಅಪಘಾತದ ವಿಡಿಯೋ ಎದೆ ಝಲ್ ಎನ್ನುತ್ತೆ....!

ದಾವಣಗೆರೆ: ತಾಲೂಕಿನ ತೋಳಹುಣಸೆ ಗ್ರಾಮದ ದಾವಣಗೆರೆ ವಿವಿ ಬಳಿ ನಡೆದಿದ್ದ ಅಪಘಾತದ ವಿಡಿಯೋ ಎದೆ ಝಲ್ ಎನಿಸುವಂತಿದೆ.

ಹೌದು. ಕರ್ಕಿ ಗ್ರಾಮದ ವಿದ್ಯಾರ್ಥಿನಿ ಶೈಲಜಾ ತನ್ನ ಸ್ಕೂಟಿಯಲ್ಲಿ ವಿವಿಯ ಕಡೆಯಿಂದ ರಸ್ತೆಗೆ ಬರುತ್ತಾರೆ. ಈ ವೇಳೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಸ್ಕೂಟಿ ಸಂಪೂರ್ಣ ಜಖಂಗೊಂಡರೆ, ವಿದ್ಯಾರ್ಥಿನಿ ಬೀಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ದೃಶ್ಯಾವಳಿ ಅಪಘಾತದ ತೀವ್ರತೆ ತೋರಿಸುತ್ತದೆಯಲ್ಲದೇ, ಕ್ಷಣ ಮಾತ್ರದಲ್ಲಿ ನಡೆದ ಆಕ್ಸಿಡೆಂಟ್ ನೋಡಿದರೆ ಭಯವಾಗುತ್ತದೆ.

ವಿವಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ೨೩ ವರ್ಷದ ಶೈಲಜಾ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದಳು. ಆಸ್ಪತ್ರೆಗೆ ಸೇರಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಳು. ಶನಿವಾರ ಮಧ್ಯಾಹ್ನ ವೇಳೆ ಕಾಲೇಜ್ ಮುಗಿಸಿ ತನ್ನ ದ್ವಿಚಕ್ರ ವಾಹನದಲ್ಲಿ ದಾವಣಗೆರೆ ವಿವಿಯ ಮುಖ್ಯ ಗೇಟ್ ನಿಂದ ಹೊರ ಹೋಗುವಾಗ ಅತಿ ವೇಗವಾಗಿ ಬಂದ ಕಾರು ಬೈಕ್ ಡಿಕ್ಕಿ ಹೊಡೆದಿರುವ ದೃಶ್ಯ ರೆಕಾರ್ಡ್ ಆಗಿದೆ. ಅಲ್ಲೇ ಇದ್ದವರು ಎದ್ನೋ ಬಿದ್ನೋ ಅಂತಾ ರಕ್ಷಣೆಗೆ ಓಡಿ ಹೋಗಿದ್ದಾರೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ಸ್ಥಳೀಯರು, ವಿದ್ಯಾರ್ಥಿಗಳು ಮುಂದಾದರೂ ಪ್ರಯೋಜನವಾಗಲಿಲ್ಲ.

ವಿವಿ ವಿದ್ಯಾರ್ಥಿಗಳ ಆಕ್ರೋಶ

ದಾವಣಗೆರೆಯಿಂದ ಬೀರೂರು ರಾಜ್ಯ ಹೆದ್ದಾರಿ ಕಾಲೇಜ್ ಮುಂಭಾಗದಲ್ಲಿ ಹಾದು ಹೋಗುತ್ತದೆ. ವಾಹನಗಳ ದಟ್ಟಣೆ ಯಾವಾಗಲೂ ಹೆಚ್ಚಾಗಿರುತ್ತದೆ. ಅತ್ಯಂತ ವೇಗದಲ್ಲಿ ವಾಹನಗಳು ಓಡಾಡುತ್ತವೆ. ವಿದ್ಯಾರ್ಥಿಗಳು ರಸ್ತೆಯನ್ನು ದಾಟುವಾಗ ಸಾಕಷ್ಟು ಅಪಘಾತಗಳಾಗಿವೆ. ಯಾವುದೇ ಸೂಚನೆ ಫಲಕಗಳಿಲ್ಲದೇ ಇರುವುದೇ ಅವಘಡಗಳಿಗೆ ಕಾರಣವಾಗುತ್ತಿದೆ ಎಂಬುದು ವಿವಿ ವಿದ್ಯಾರ್ಥಿಗಳ ಆರೋಪ.

ವಿವಿ ಮುಂಭಾಗದ ರಸ್ತೆಯಲ್ಲಿ ವಾಹನಗಳು ನಿಧಾನಗತಿಯಲ್ಲಿ ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕು. ಅಪಘಾತದಲ್ಲಿ ಮೃತಪಟ್ಟಿರುವ ವಿದ್ಯಾರ್ಥಿನಿ ಶೈಲಜಾ ಸಾವಿಗೆ ರಾಜ್ಯ ರಸ್ತೆ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳ ಬೇಜವಾಬ್ದಾರಿ ಕಾರಣ. ಆದಷ್ಟು ಬೇಗ ಇಲ್ಲಿ ಹಂಪ್ಸ್ ಮತ್ತು ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂದು ವಿವಿಯ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.Body:filename
KN_DVG_01_27_HORRIBAL_SCRIPT_05_YOGARAJ_7203307

ಅಪಘಾತದ ವಿಡಿಯೋ ಎದೆ ಝಲ್ ಎನ್ನುತ್ತೆ....!

ದಾವಣಗೆರೆ: ತಾಲೂಕಿನ ತೋಳಹುಣಸೆ ಗ್ರಾಮದ ದಾವಣಗೆರೆ ವಿವಿ ಬಳಿ ನಡೆದಿದ್ದ ಅಪಘಾತದ ವಿಡಿಯೋ ಎದೆ ಝಲ್ ಎನಿಸುವಂತಿದೆ.

ಹೌದು. ಕರ್ಕಿ ಗ್ರಾಮದ ವಿದ್ಯಾರ್ಥಿನಿ ಶೈಲಜಾ ತನ್ನ ಸ್ಕೂಟಿಯಲ್ಲಿ ವಿವಿಯ ಕಡೆಯಿಂದ ರಸ್ತೆಗೆ ಬರುತ್ತಾರೆ. ಈ ವೇಳೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಸ್ಕೂಟಿ ಸಂಪೂರ್ಣ ಜಖಂಗೊಂಡರೆ, ವಿದ್ಯಾರ್ಥಿನಿ ಬೀಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ದೃಶ್ಯಾವಳಿ ಅಪಘಾತದ ತೀವ್ರತೆ ತೋರಿಸುತ್ತದೆಯಲ್ಲದೇ, ಕ್ಷಣ ಮಾತ್ರದಲ್ಲಿ ನಡೆದ ಆಕ್ಸಿಡೆಂಟ್ ನೋಡಿದರೆ ಭಯವಾಗುತ್ತದೆ.

ವಿವಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ೨೩ ವರ್ಷದ ಶೈಲಜಾ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದಳು. ಆಸ್ಪತ್ರೆಗೆ ಸೇರಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಳು. ಶನಿವಾರ ಮಧ್ಯಾಹ್ನ ವೇಳೆ ಕಾಲೇಜ್ ಮುಗಿಸಿ ತನ್ನ ದ್ವಿಚಕ್ರ ವಾಹನದಲ್ಲಿ ದಾವಣಗೆರೆ ವಿವಿಯ ಮುಖ್ಯ ಗೇಟ್ ನಿಂದ ಹೊರ ಹೋಗುವಾಗ ಅತಿ ವೇಗವಾಗಿ ಬಂದ ಕಾರು ಬೈಕ್ ಡಿಕ್ಕಿ ಹೊಡೆದಿರುವ ದೃಶ್ಯ ರೆಕಾರ್ಡ್ ಆಗಿದೆ. ಅಲ್ಲೇ ಇದ್ದವರು ಎದ್ನೋ ಬಿದ್ನೋ ಅಂತಾ ರಕ್ಷಣೆಗೆ ಓಡಿ ಹೋಗಿದ್ದಾರೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ಸ್ಥಳೀಯರು, ವಿದ್ಯಾರ್ಥಿಗಳು ಮುಂದಾದರೂ ಪ್ರಯೋಜನವಾಗಲಿಲ್ಲ.

ವಿವಿ ವಿದ್ಯಾರ್ಥಿಗಳ ಆಕ್ರೋಶ

ದಾವಣಗೆರೆಯಿಂದ ಬೀರೂರು ರಾಜ್ಯ ಹೆದ್ದಾರಿ ಕಾಲೇಜ್ ಮುಂಭಾಗದಲ್ಲಿ ಹಾದು ಹೋಗುತ್ತದೆ. ವಾಹನಗಳ ದಟ್ಟಣೆ ಯಾವಾಗಲೂ ಹೆಚ್ಚಾಗಿರುತ್ತದೆ. ಅತ್ಯಂತ ವೇಗದಲ್ಲಿ ವಾಹನಗಳು ಓಡಾಡುತ್ತವೆ. ವಿದ್ಯಾರ್ಥಿಗಳು ರಸ್ತೆಯನ್ನು ದಾಟುವಾಗ ಸಾಕಷ್ಟು ಅಪಘಾತಗಳಾಗಿವೆ. ಯಾವುದೇ ಸೂಚನೆ ಫಲಕಗಳಿಲ್ಲದೇ ಇರುವುದೇ ಅವಘಡಗಳಿಗೆ ಕಾರಣವಾಗುತ್ತಿದೆ ಎಂಬುದು ವಿವಿ ವಿದ್ಯಾರ್ಥಿಗಳ ಆರೋಪ.

ವಿವಿ ಮುಂಭಾಗದ ರಸ್ತೆಯಲ್ಲಿ ವಾಹನಗಳು ನಿಧಾನಗತಿಯಲ್ಲಿ ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕು. ಅಪಘಾತದಲ್ಲಿ ಮೃತಪಟ್ಟಿರುವ ವಿದ್ಯಾರ್ಥಿನಿ ಶೈಲಜಾ ಸಾವಿಗೆ ರಾಜ್ಯ ರಸ್ತೆ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳ ಬೇಜವಾಬ್ದಾರಿ ಕಾರಣ. ಆದಷ್ಟು ಬೇಗ ಇಲ್ಲಿ ಹಂಪ್ಸ್ ಮತ್ತು ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂದು ವಿವಿಯ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.Conclusion:null
ETV Bharat Logo

Copyright © 2024 Ushodaya Enterprises Pvt. Ltd., All Rights Reserved.