ETV Bharat / state

ಸಂಸದ ಸಿದ್ದೇಶ್ವರ್​ ವಿರುದ್ಧ ಮತ್ತೆ ಕಿಡಿಕಾರಿದ ಸಚಿವ ಎಸ್​ ಎಸ್​ ಮಲ್ಲಿಕಾರ್ಜುನ್​

author img

By

Published : Jul 31, 2023, 9:46 PM IST

ರಾಜಕೀಯವಾಗಿ ಚರ್ಚೆ ನಡೆಸಲು ಪಕ್ಷದ ಮುಖಂಡರನ್ನು ಹೈಕಮಾಂಡ್, ​ದೆಹಲಿಗೆ ಕರೆದಿದೆ ಎಂದು ಸಚಿವ ಎಸ್​ ಎಸ್​ ಮಲ್ಲಿಕಾರ್ಜುನ್​ ಹೇಳಿದ್ದಾರೆ.

ಎಸ್​ಎಸ್​ ಮಲ್ಲಿಕಾರ್ಜುನ್​
ಎಸ್​ಎಸ್​ ಮಲ್ಲಿಕಾರ್ಜುನ್​

ದಾವಣಗೆರೆ: ಶಾಸಕರಲ್ಲಿ ಸ್ವಲ್ಪ ಮಟ್ಟಿಗೆ ಅಸಮಾಧಾನ ಇರಬಹುದು, ಸರಿಪಡಿಸಿಕೊಳ್ಳಲು ಸಿಎಲ್​ಪಿ ಸಭೆ ಕರೆಯಲಾಗಿತ್ತು ಎಂದು ಗಣಿ ಹಾಗು ತೋಟಗಾರಿಕೆ ಸಚಿವ ಎಸ್ ಎಸ್​ ಮಲ್ಲಿಕಾರ್ಜುನ್ ತಿಳಿಸಿದರು. ನಗರದಲ್ಲಿಂದು ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ದೆಹಲಿಗೆ ಬುಲಾವ್ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದರು. ರಾಜಕೀಯವಾಗಿ ಮುಂದಿನ ಚುನಾವಣೆ ಬಗ್ಗೆ ಮಾತನಾಡಲು ಚರ್ಚಿಸಲು ಕರೆದಿದ್ದಾರೆ. ಸಚಿವರೊಂದಿಗೆ ಕೆಲ ಹಿರಿಯ ಶಾಸಕರಿಗೂ ಹೈಕಮಾಂಡ್ ಬುಲಾವ್ ಕೊಟ್ಟಿದೆ ಎಂದರು.

ಅಪರೇಷನ್​ ಕಾಂಗ್ರೆಸ್​ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, ಯಾವ ಅಪರೇಷನ್ ಇಲ್ಲ, ಅಪರೇಷನ್ ಮಾಡಲು ಬಿಜೆಪಿ ತರಹದ ಸರ್ಕಾರ ನಮ್ಮದಲ್ಲ. ನಮ್ಮ ಪಕ್ಷದಲ್ಲಿ ಯಾವ ಶಾಸಕರದ್ದು ಏನೂ ತೊಂದರೆ ಇಲ್ಲ. ಚರ್ಚೆ ಮಾಡಲು ದೆಹಲಿಗೆ ತೆರಳುತ್ತಿದ್ದೇವೆ, ಶಾಸಕರಲ್ಲಿ ವೈಮನಸ್ಸಿನ ಸಮಸ್ಯೆ ಕಾಂಪ್ಲಿಕೇಟ್ ಇರುತ್ತದೆ. ಎಲ್ಲವನ್ನು ಕುಳಿತು ಸರಿಪಡಿಸಿಕೊಳ್ಳಿ ಎಂದು ಸಿಎಂ ಹೇಳಿದ್ದಾರೆ. ಸ್ವಲ್ಪ ಅಸಮಾಧಾನ ಇರಬಹುದು. ಇದಕ್ಕೆ ಸಿಎಲ್​ಪಿ ಸಭೆ ಕರೆದಿದ್ದು, ಯಾವ ಶಾಸಕರಿಗೂ ಸಚಿವರ ಮೇಲೆ ಯಾವುದೇ ದ್ವೇಷ ಇಲ್ಲ ಎಂದು ಸ್ಪಷ್ಟಪಡಿಸಿದರು.

ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಪತ್ರ ಹರಿದು ಹಾಕಿದ ಘಟನೆಗೆ ಪ್ರತಿಕ್ರಿಯಿಸಿ ಇದೇನು ನಡೆಯಲಿಲ್ಲ, ನಾನು ಅ ಸಭೆಯಲ್ಲಿದ್ದೇ, ಇನ್ನು ಸಿಂಗಾಪುರದಲ್ಲಿ ಆಪರೇಷನ್ ವಿಚಾರವಾಗಿ ಮಾತನಾಡಿದ ಅವರು ಸಿದ್ದರಾಮಯ್ಯನವರು ಗಟ್ಟಿಯಾಗಿಯೇ ಇದ್ದಾರೆ, ಒಳ್ಳೆಯ ಆಡಳಿತ ಕೊಡ್ತಾ ಇದ್ದಾರೆ. ಹೆದರುವ ಅವಶ್ಯಕತೆ ಇಲ್ಲ ಎಂದರು.

ಹೈಸ್ಕೂಲ್‌ ಮೈದಾನಕ್ಕೆ ಚರ್ಚೆಗೆ ಬರಲಿ ಸವಾಲ್: ಮೈನಿಂಗ್ಸ್​ನಲ್ಲಿ ನಾವು ಏನು ಮಾಡಿಲ್ಲ ಎಂದು ಸಂಸದ ಜಿ ಎಂ ಸಿದ್ದೇಶ್ವರ್​ ಹೇಳುತ್ತಾರೆ. ಇವರು ಮೈನ್ಸ್ ನಲ್ಲೇ 220 ಕೋಟಿ ಹಗರಣ ಮಾಡಿದ್ದಾರೆ. ಇದರ‌ ಬಗ್ಗೆ ಮಾತನಾಡಲಿ, ಬೇಕಾದರೇ ಹೈಸ್ಕೂಲ್ ಮೈದಾನಕ್ಕೆ ಚರ್ಚೆಗೆ ಬರಲಿ ಎಂದು ಸವಾಲೆಸೆದರು. ಚರ್ಚೆಯಲ್ಲಿ ನಮ್ಮ ಆಡಳಿತವಧಿಯಲ್ಲಿ ಏನ್ ಆಗಿದೆ, ಅವರ ಆಡಳಿತದ ಅವಧಿಯಲ್ಲಿ ಏನ್ ಆಗಿದೆ ಎಂದು ಹೇಳಲಿ. ಏನೇನ್ ಆಗಿದೆ ಎಂದು ದಾಖಲೆ ಸಮೇತ ನಾ‌ನು ಚರ್ಚೆಗೆ ಸಿದ್ಧ, ಬೇಕಾದರೆ ಫೇಸ್ ಮಾಡಲಿ. ಇವರು ಪಾಲಿಕೆಯಲ್ಲಿ ಏನೆಲ್ಲ ಮಾಡಿದ್ದಾರೆ ಎಂಬುದರ ಬಗ್ಗೆ ನನಗೆ ದೂರುಗಳು ಬಂದಿವೆ. ಅವರು ಮೋದಿ ಫೋಟೋ ಮೇಲೆ ಅಧಿಕಾರಕ್ಕೆ ಬಂದವರು, ನಾವು ಕಾಂಗ್ರೆಸ್ ಹಾಗು ವೈಯಕ್ತಿಕ ವರ್ಚಸ್ ಮೇಲೆ ಬಂದಿರುವುದು ಎಂದು ಸಂಸದರ ವಿರುದ್ಧ ಕಿಡಿಕಾರಿದರು.

ಇದನ್ನೂ ಓದಿ: ಎಸ್‌ಸಿಎಸ್‌ಪಿ/ಟಿಎಸ್‌ಪಿ ಅಡಿ 4030 ಕೋಟಿ ರೂ. ಅನುದಾನ ಹೆಚ್ಚಳ: ಬಿಜೆಪಿಯವರ ಆರೋಪ ಸುಳ್ಳೆಂದ ಸಚಿವ ಹೆಚ್ ಸಿ ಮಹದೇವಪ್ಪ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.