ದಾವಣಗೆರೆ: ಸಿಎಂ ಯಡಿಯೂರಪ್ಪ ಅವರ ಮೇಲೆ ಆರೋಗ್ಯ ಸಚಿವ ಬಿ. ಶ್ರೀರಾಮುಲು ಹಾಗೂ ಸಚಿವ ರಮೇಶ್ ಜಾರಕಿಹೊಳಿ ಮುನಿಸಿಕೊಂಡಿದ್ದಾರೆ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಎದ್ದಿವೆ.
ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ಎರಡು ದಿನಗಳ ಕಾಲ ನಡೆದ ವಾಲ್ಮೀಕಿ ಜಾತ್ರೆಯ ಅಧ್ಯಕ್ಷತೆಯು ಶ್ರೀರಾಮುಲು ಅವರದ್ದಾಗಿತ್ತು. ವೇದಿಕೆಯ ವ್ಯವಸ್ಥೆ ನೋಡಿಕೊಂಡ ರಾಮುಲು, ಯಾವುದೇ ಭಾಷಣ ಮಾಡಲಿಲ್ಲ.
ಸಹ ವೇದಿಕೆಗೆ ಆಗಮಿಸಿದ್ದ ಶ್ರೀರಾಮುಲು, ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸ್ವಾಗತಿಸಿ ಕುಶಲೋಪಚರಿ ವಿಚಾರಿಸಿದರು. ನಂತರ ತೆರಳಿದ ಶ್ರೀರಾಮುಲು ಸಿಎಂ ಬಿಎಸ್ವೈ ಆಗಮಿಸಿದರು ಕಾಣಿಸಿಕೊಳ್ಳಲಿಲ್ಲ. ಮಗಳ ಮದುವೆ ಹಿನ್ನೆಲೆಯಲ್ಲಿ ತೆರಳಿದರು ಎಂದು ರಾಮುಲು ಆಪ್ತ ಮೂಲಗಳು ಹೇಳುತ್ತಿವೆ.
ಇನ್ನು ವಾಲ್ಮೀಕಿ ಸಮುದಾಯಕ್ಕೆ ಡಿಸಿಎಂ ಹುದ್ದೆ ನೀಡಬೇಕು ಹಾಗೂ ಮೀಸಲಾತಿಯಲ್ಲಿ ಶೇಕಡಾ 3ರಿಂದ 7.5ಕ್ಕೆ ಹೆಚ್ಚಿಸಬೇಕೆಂಬ ಬೇಡಿಕೆಯು ಜಾತ್ರೆಯ ಪ್ರಮುಖ ವಿಷಯವಾಗಿತ್ತು.
ಬಿಜೆಪಿ ನೂತನ ಸಚಿವರಾದ ಡಿಸಿಎಂ ಆಕಾಂಕ್ಷಿ ರಮೇಶ್ ಜಾರಕಿಹೊಳಿ ಈ ಕಾರ್ಯಕ್ರಮಕ್ಕೆ ಆಗಮಿಸಲಿಲ್ಲ. ಆದರೆ, ಅವರ ಸಹೋದರ ಸತೀಶ್ ಜಾರಕಿಹೊಳಿ ಪಾಲ್ಗೊಂಡಿದ್ದರು. ಒಟ್ಟಿನಲ್ಲಿ ರಾಮುಲು ಹಾಗೂ ರಮೇಶ್ ಜಾರಕಿಹೊಳಿ ಸಿಎಂ ಬಂದಾಗ ವೇದಿಕೆಯಲ್ಲಿ ಇಲ್ಲದಿರುವುದು ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.