ETV Bharat / state

ಜನರಲ್ಲಿನ ದುಶ್ಚಟ ಹೋಗಲಾಡಿಸಲು ಬೀಡಿ, ಬಾಟಲಿ, ಗುಟ್ಕಾ ಭಿಕ್ಷೆ ಬೇಡಿದ ಶ್ರೀ ಬಸವಪ್ರಭು ಸ್ವಾಮೀಜಿ!

author img

By

Published : Aug 1, 2019, 8:06 PM IST

ಜಿಲ್ಲೆಯ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿಗಳು ಜನರಲ್ಲಿರುವ ದುಶ್ಚಟಗಳ ದುರಾಲೋಚನೆಯನ್ನು ದೂರ ಮಾಡಲು ಜೋಳಿಗೆ ಹಿಡಿದು ಮನೆ ಮನೆಗೆ ಹೋಗಿ ಮದ್ಯದ ಬಾಟಲಿ, ಬೀಡಿ, ಗುಟ್ಕಾ ಕೇಳುವ ಮೂಲಕ ಸಮಾಜಮುಖಿ ಕಾರ್ಯಕ್ಕೆ ಮುಂದಾಗಿದ್ದಾರೆ.

Sri Basavaprabhu swamiji ,ಶ್ರೀ ಬಸವಪ್ರಭು ಸ್ವಾಮೀಜಿ

ದಾವಣಗೆರೆ: ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಸ್ವಾಮೀಜಿಗಳು ಭಕ್ತರ ಮನೆಗೆ ತೆರಳಿ ಶ್ರಾವಣ ಭಿಕ್ಷೆ, ದವಸ ಧಾನ್ಯ ಕೇಳುವುದು ವಾಡಿಕೆ. ಆದರೆ ಜಿಲ್ಲೆಯ ಶ್ರೀ ಬಸವಪ್ರಭು ಸ್ವಾಮೀಜಿಗಳು ಜನರಲ್ಲಿರುವ ದುಶ್ಚಟಗಳ ದುರಾಲೋಚನೆಯನ್ನು ದೂರ ಮಾಡಲು ಜೋಳಿಗೆ ಹಿಡಿದು ಮನೆ ಮನೆಗೆ ಹೋಗಿ ಮದ್ಯದ ಬಾಟಲಿ, ಬೀಡಿ, ಗುಟ್ಕಾ ಕೇಳುವ ಮೂಲಕ ಸಮಾಜಮುಖಿ ಕಾರ್ಯಕ್ಕೆ ಮುಂದಾಗಿದ್ದಾರೆ.

ದಾವಣಗೆರೆಯ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ

ಜಿಲ್ಲೆಯ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಅವರು ಮಠಕ್ಕೋ, ಶಾಲೆಗೋ ದೇಣಿಗೆ ಕೊಡಿ ಎಂದು ಮನೆ ಮನೆ ಸುತ್ತುತ್ತಿಲ್ಲ. ಭಿಕ್ಷೆ ಬೇಡಿ ಲೋಕ ಕಲ್ಯಾಣಕ್ಕಾಗಿ ದುಡಿಯುತ್ತಿದ್ದಾರೆ. ಈ ಸ್ವಾಮೀಜಿಗಳು ಮನೆ ಮನೆ ಸುತ್ತಿ ಮದ್ಯದ ಬಾಟಲ್, ಗುಟ್ಕಾ ಚೀಟಿ ಸೇರಿದಂತೆ ಇತರೆ ಮಾದಕ ವಸ್ತುಗಳನ್ನು ಜೋಳಿಗೆಯಲ್ಲಿ ಹಾಕಿಸಿಕೊಳ್ಳುತ್ತಾರೆ. ಈ ಮೂಲಕ ಜನರಲ್ಲಿನ ದುಶ್ಚಟ ಮತ್ತು ದುರಾಲೋಚನೆಯನ್ನು ದೂರ ಮಾಡಲು ಪ್ರಯತ್ನಿಸುತ್ತಿದ್ದಾರೆ. ಸಮಾಜದಲ್ಲಿ ಅಶಾಂತಿ, ಕೊಲೆ, ಸುಲಿಗೆಯಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅದಕ್ಕಾಗಿ ಶ್ರೀಗಳು ಕಳೆದ 11 ವರ್ಷದಿಂದ ಪ್ರತಿ ಶ್ರಾವಣದಲ್ಲಿ ಈ ಕಾರ್ಯ ಮಾಡಿಕೊಂಡು ಬರುತ್ತಿದ್ದಾರೆ.

ಸ್ವಾಮೀಜಿಗಳು ಜೋಳಿಗೆಗೆ ಮಾದಕ ವಸ್ತುಗಳನ್ನು ಹಾಕಿಸಿಕೊಂಡು ವ್ಯಸನಿಗೆ ರುದ್ರಾಕ್ಷಿ ಕಟ್ಟಿ ಆತ್ಮಲಿಂಗದ ಮೇಲೆ ಪ್ರಮಾಣ ಮಾಡಿಸಿಕೊಳ್ಳುತ್ತಾರೆ. ಹೀಗೆ ಮಾಡುವುದರಿಂದ ಜನರಲ್ಲಿ ಜಾಗೃತಿ ಮೂಡುತ್ತದೆ. ಅದರಲ್ಲೂ ಶ್ರಾವಣದಲ್ಲಿ ಜನ ಭಕ್ತಿ ಭಾವದಿಂದ ಇರ್ತಾರೆ. ಮನವೊಲಿಸಿದರೆ ದುಶ್ಚಟ ಕೈಬಿಟ್ಟು ಮುಂದೆ ಒಳ್ಳೆಯ ಜೀವನ ನಡೆಸುತ್ತಾರೆ ಎಂಬುದು ಶ್ರೀಗಳ ನಂಬಿಕೆಯಾಗಿದೆ.

ಮನೆ ಮನೆಗೆ ತೆರಳುವ ಸ್ವಾಮೀಜಿ:
ನಗರದ ಬೂದಾಳದ ರಸ್ತೆಯಲ್ಲಿ ಜೋಳಿಗೆ ಹಿಡಿದು ಮನೆ ಮನೆಗೆ ತಿರುಗಿದ ಬಸವಪ್ರಭು ಶ್ರೀಗಳು, ದುಶ್ಚಟಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳುವಳಿಕೆ ನೀಡುವ ಕೆಲಸ ಮಾಡುತ್ತಾರೆ. ಪ್ರತಿ ವರ್ಷ ಶ್ರಾವಣದಲ್ಲಿ ಜಯದೇವ ಜೋಳಿಗೆ ಎಂಬ ವಿನೂತನ ಕಾರ್ಯಕ್ರಮ ಮಾಡುವ ಮೂಲಕ ಸಾಕಷ್ಟು ಮಂದಿಗೆ ಮದ್ಯಪಾನ ಸೇರಿದಂತೆ ಇತರೆ ಚಟಗಳನ್ನು ಬಿಡಿಸಿದ್ದಾರೆ.

Intro:(ಸ್ಟ್ರಿಂಜರ್; ಮಧುದಾವಣಗೆರೆ)

ದಾವಣಗೆರೆ; ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಸ್ವಾಮಿಜಿಗಳು ಭಕ್ತರ ಮನೆಗೆ ತೆರಳಿ ಶ್ರಾವಣ ಭಿಕ್ಷೆ, ದವಸ ಧಾನ್ಯ ಕೇಳುವುದು ವಾಡಿಕೆ. ಆದರೆ ದಾವಣಗೆರೆಯಲ್ಲೊಬ್ಬರು ಸ್ವಾಮೀಜಿ ಶ್ರಾವಣ ಮಾಸ ಬಂತು ಅಂದರೆ ಸಾಕು ಜೋಳಿಗೆ ಹಿಡಿದು ಮನೆ ಮನೆ ಹೋಗಿ ಹೋಗಿ, ಮದ್ಯದ ಬಾಟಲಿ, ಬೀಡಿ, ಗುಟ್ಕಾ ಕೇಳುತ್ತಾರೆ...

ಅಯ್ಯೋ.. ಇದೇನು ಸ್ವಾಮಿಜಿ ದವಸ ಧಾನ್ಯ ಕೇಳದೇ, ಬೀಡಿ, ಬಾಟಲಿ, ಗುಟ್ಕಾ ಕೇಳ್ತಾರ ಅಂತ ಕನ್ಫೂಸ್ ಆಗಬೇಡಿ, ಹೆಗಲಿಗೆ ಜೋಳಿಗೆ ಹಾಕಿಕೊಂಡು ಮನೆ ಮನೆ ಸುತ್ತುತ್ತಿರುವವರು ಈ ಸ್ವಾಮಿಯ ಹೆಸರು ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ. ಇವರು ಮಠಕ್ಕೊ, ಶಾಲೆಗೋ ದೇಣಿಗೆ ಕೊಡಿ ಅಂತ ಮನೆ ಮನೆ ಸುತ್ತುತ್ತಿಲ್ಲ. ಭಿಕ್ಷೆ ಬೇಡಿ ಲೋಕ ಕಲ್ಯಾಣಕ್ಕಾಗಿ ದುಡಿಯುತ್ತಿದ್ದಾರೆ.

ಜೋಳಿಗೆಗೆ
ಬೀಡಿ ಬಾಟಲಿ ಹಾಕಿ

ಸ್ವಾಮಿಜಿ ಹೆಗಲಿಗೆ ಜೋಳಿಗೆ ಹಾಕಿರೋದು ಜನರಲ್ಲಿನ ದುಶ್ಚಟ ಮತ್ತು ದುರಾಲೋಚನೆ ದೂರ ಮಾಡಲು. ವಿರಕ್ತ ಮಠದ ಬಸವ ಪ್ರಭು ಸ್ವಾಮೀಜಿಗಳು ಮನೆ ಮನೆ ಸುತ್ತಿ ಮದ್ಯದ ಬಾಟಲ್, ಗುಟ್ಕಾ ಚೀಟಿ ಸೇರಿದಂತೆ ಇತರೆ ಮಾದಕ ವಸ್ತುಗಳನ್ನು ಜೋಳಿಗೆಯಲ್ಲಿ ಹಾಕಿಸಿಕೊಳ್ಳುತ್ತಾರೆ. ದುಶ್ಚಟ ಹೆಚ್ಚಾದಷ್ಟು ಸಮಾಜದಲ್ಲಿ ಅಶಾಂತಿ, ಕೊಲೆ, ಸುಲಿಗೆ ಅಂತಹ ಪ್ರಕರಣಗಳು ಹೆಚ್ಚಾಗುತ್ತವೆ. ಅದಕ್ಕಾಗಿ ಶ್ರೀಗಳು11 ವರ್ಷದಿಂದ ಪ್ರತಿ ವರ್ಷ ಶ್ರಾವಣದಲ್ಲಿ ಜೋಳಿಗೆ ಹಿಡಿದು ದುಶ್ಚಟ ದೂರ ಮಾಡುತ್ತಿದ್ದಾರೆ. ಜೊಳಿಗೆಯಲ್ಲಿ ಮಾದಕ ವಸ್ತುಗಳನ್ನು ಹಾಕಿಸಿಕೊಂಡ ಬಳಿಕ ವ್ಯಸನಿಗೆ ರುದ್ರಾಕ್ಷಿ ಕಟ್ಟಿ ಆತ್ಮಲಿಂಗದ ಮೇಲೆ ಪ್ರಮಾಣ ಮಾಡಿಸಿಕೊಳ್ತಾರೆ. ಹೀಗೆ ಮಾಡುವುದರಿಂದ ಜನರಲ್ಲಿ ಜಾಗೃತಿ ಮೂಡುತ್ತದೆ. ಅದರಲ್ಲೂ ಶ್ರಾವಣದಲ್ಲಿ ಜನ ಭಕ್ತಿಭಾವದಿಂದ ಇರ್ತಾರೆ. ಮನವೊಲಿಸಿದರೆ ದುಶ್ಚಟ ಕೈಬಿಟ್ಟು ಮುಂದೇ ಒಳ್ಳೆಯ ಜೀವನ ನಡೆಸುತ್ತಾರೆ ಎಂಬುದು ಶ್ರೀಗಳ ನಂಬಿಕೆಯಾಗಿದೆ..

ಮನೆಮನೆ ತೆರಳುವ ಸ್ವಾಮಿಜಿ

ದಾವಣಗೆರೆ ನಗರದ ಬೂದಾಳದ ರಸ್ತೆಯಲ್ಲಿ ಜೊಳಿಗೆ ಹಿಡಿದು ಮನೆ ಮನೆ ತಿರುಗಿದ ಬಸವಪ್ರಭು ಶ್ರೀಗಳು ದುಶ್ಚಟಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳಿವಳಿಕೆ ನೀಡಿದರು. ಸಾರ್ವಜನಿಕರ ಜೇಬಿನಲ್ಲಿದ್ದ ಗುಟ್ಖಾ ಪ್ಯಾಕೇಟ್ ಜೋಳಿಗೆಗೆ ಹಾಕಿಸಿಕೊಂಡು ಹಣೆಗೆ ವಿಭೂತಿ ಹಚ್ಚಿ, ಕೊರಳಿಗೆ ರುದ್ರಾಕ್ಷಿ ಕಟ್ಟಿ ಭಕ್ತರಿಂದ ಪ್ರಮಾಣ ಮಾಡಿಸಿಕೊಳ್ಳುತ್ತಿದ್ದರು. ಶ್ರೀಗಳು ಹೀಗೆ ಪ್ರತಿ ವರ್ಷ ಶ್ರಾವಣದಲ್ಲಿ ಜಯದೇವ ಜೋಳಿಗೆ ಎಂಬ ವಿನೂತನ ಕಾರ್ಯಕ್ರಮ ಮಾಡುವುದರಿಂದ ಸಾಕಷ್ಟು ಮಂದಿ ಮದ್ಯಪಾನ ಸೇರಿದಂತೆ ಚಟಗಳನ್ನ ತ್ಯಜಿಸಿದ್ದಾರೆ. ನಾನು ಇಷ್ಟು ದಿನ ಕುಡಿತಾ ಇದ್ದೆ. ಇಂದು ಶ್ರೀಗಳು ರುದ್ರಾಕ್ಷಿ ಕಟ್ಟಿ ದುಶ್ಚಟ ಬಿಡುವಂತೆ ಮಾತು ತೆಗೆದುಕೊಂಡಿದ್ದಾರೆ. ಈ ಕಾರ್ಯಕ್ರಮದಿಂದ ಜನರು ಚಟಗಳನ್ನು ತ್ಯಜಿಸಿ ಉತ್ತಮ ವ್ಯಕ್ತಿಯಾಗಿದ್ದಾರೆ.

ಒಟ್ಟಾರೆ ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ಸ್ವಾಮೀಜಿ ಜೋಳಿಗೆ ಹಿಡಿದು ಮನೆ-ಮನೆ ಸುತ್ತುತ್ತಿರುವುದು ಶ್ಲಾಘನೀಯ ಕಾರ್ಯ. ಸ್ವಾಮೀಜಿಯ ಹಿತೋಪದೇಶ ಕೇಳಿ ಜನ ಮದ್ಯಪಾನ ಸೇರಿದಂತೆ ಇತರೆ ದುಶ್ಚಟ ಕೈಬಿಟ್ರೆ ಉತ್ತಮ ಸಮಾಜದ ಜೊತೆ ಸುಖಿ ಕುಟುಂಬ ಕೂಡ ನಿರ್ಮಾಣ ಆಗುತ್ತೆ..

ಪ್ಲೊ..

ಬೈಟ್: ಬಸವಪ್ರಭು ಸ್ವಾಮೀಜಿ, ವಿರಕ್ತ ಮಠ,Body:(ಸ್ಟ್ರಿಂಜರ್; ಮಧುದಾವಣಗೆರೆ)

ಬೈಟ್: ಬಸವಪ್ರಭು ಸ್ವಾಮೀಜಿ, ವಿರಕ್ತ ಮಠ,
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.