ದಾವಣಗೆರೆ : ಕಮ್ಯುನಿಸ್ಟ್ ಪಕ್ಷದ ವತಿಯಿಂದ ಹಮ್ಮಿಕೊಳ್ಳಲಾಗಿರುವ ಸೂರಿಗಾಗಿ ಕೋಟಿ ಹೆಜ್ಜೆ ಕಾಲ್ನಡಿಗೆ ಜಾಥಾದ ಮೆರವಣಿಯನ್ನು ನಗರದಲ್ಲಿ ಪಕ್ಷದ ಕಾರ್ಯಕರ್ತರು ಅದ್ಧೂರಿಯಾಗಿ ಬರಮಾಡಿಕೊಂಡರು.
ಬಳ್ಳಾರಿಯಿಂದ ಆರಂಭವಾದ ಈ ಜಾಥಾ 900 ಕ್ಕಿಂತ ಹೆಚ್ಚು ಕಿ. ಮೀ. ದೂರದವರೆಗೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಗರದ ಜಯದೇವ ವೃತ್ತದಲ್ಲಿ ಸೂರಿಗಾಗಿ ಸಮರದ ಸಮಾವೇಶ ನಡೆಸಲಾಯಿತು. ನಿವೇಶನ ಇಲ್ಲದ ನಿರ್ಗತಿಕರಿಗೆ ನಿವೇಶನ ಕೊಡಿಸುವ ಉದ್ದೇಶ ಈ ಕಾಲ್ನಡಿಗೆ ಜಾಥಾದ ಮುಖ್ಯ ಧ್ಯೇಯವಾಗಿದೆ.
ಇದೇ ತಿಂಗಳ 31 ರಂದು ಜಾಥಾ ಬೆಂಗಳೂರು ತಲುಪಲಿದ್ದು, ಸೂರಿಗಾಗಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಸಿಪಿಐನ ತಾಲೂಕು ಕಾರ್ಯದರ್ಶಿ ಅವರಗೆರೆ ವಾಸು ತಿಳಿಸಿದರು.