ETV Bharat / state

ಬೆಣ್ಣೆನಗರಿಯ ಸ್ಮಾರ್ಟ್​ ಸಿಟಿ ಯೋಜನೆಗಳೆಲ್ಲಾಅವೈಜ್ಞಾನಿಕ:ಜೆಡಿಎಸ್​ ಆರೋಪ - undefined

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಸ್ಮಾರ್ಟ್ ಸಿಟಿ ಯೋಜನೆ ದಾವಣಗೆರೆ​​ಯಲ್ಲಿ ಹಳ್ಳ ಹಿಡಿದಿದ್ದು, ಸಾರ್ವಜನಿಕರಿಗೆ ಅನುಕೂಲಕ್ಕಿಂತ ಹೆಚ್ಚಾಗಿ ಅನಾನುಕೂಲಗಳನ್ನೇ ಸೃಷ್ಟಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ.

ದಾವಣಗೆರೆಯಲ್ಲಿ ಸ್ಮಾರ್ಟ್​ ಸಿಟಿ ಯೋಜನೆಗಳೆಲ್ಲಾ ಅವೈಜ್ಞಾನಿಕ ಎಂದು ಜೆಡಿಎಸ್​ ಆರೊಪ
author img

By

Published : May 9, 2019, 10:31 AM IST

ದಾವಣಗೆರೆ: ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳು ಕಳಪೆ ಹಾಗೂ ಅವೈಜ್ಞಾನಿಕವಾಗಿದ್ದು,ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಅಂಧ ದರ್ಬಾರ್​​ ನಡೆಯುತ್ತಿದೆ ಎಂದು ಜೆಡಿಎಸ್ ಮುಖಂಡ ಅಮಾನುಲ್ಲಾ ಖಾನ್ ಆಕ್ರೋಶ ವ್ಯಕ್ತಪಡಿಸಿದರು.

ದಾವಣಗೆರೆಯಲ್ಲಿ ಸ್ಮಾರ್ಟ್​ ಸಿಟಿ ಯೋಜನೆಗಳೆಲ್ಲಾ ಅವೈಜ್ಞಾನಿಕ- ಜೆಡಿಎಸ್​ ಆರೊಪ

ದಾವಣಗೆರೆಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನಗರದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳು ಬಹುತೇಕ ಅವೈಜ್ಞಾನಿಕ ಹಾಗೂ ಕಳಪೆಯಿಂದ ಕೂಡಿದೆ. ಅನೇಕ ಕಡೆ ಈಗಾಗಲೇ ಮುಕ್ತಾಯ ಹಂತದಲ್ಲಿರುವ ರಸ್ತೆಗಳು, ಚರಂಡಿಗಳು ಅಂತಿಮವಾಗಿ ಸಾರ್ವಜನಿಕರಿಗೆ ಅನುಕೂಲಕ್ಕಿಂತ ಅನಾನುಕೂಲಗಳನ್ನೇ ಸೃಷ್ಟಿಸುತ್ತಿವೆ. ಮಂಡಿಪೇಟೆ,ಎಂಜಿ.ರಸ್ತೆ, ಚೌಕಿಪೇಟೆ ರಸ್ತೆಗಳಲ್ಲಿ ಹಾಕಿರುವ ಪೈಪ್ ಲೈನ್‌​ಗಳ ಚೇಂಬರ್ ಮೇಲೆ ಮುಚ್ಚಿರುವ ಸ್ಲ್ಯಾಬ್‌ಗಳು ಸಮ ತಟ್ಟಾಗಿಲ್ಲ. ಹೀಗಾಗಿ ವಾಹನ ಸಂಚಾರ ಹಾಗೂ ನಿಲುಗಡೆಗೂ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.

ಇನ್ನೂ 50 ವರ್ಷವಾದರೂ ಏನೂ ಆಗದಂತ ಚರಂಡಿಗಳನ್ನು ಬೇಕಾಬಿಟ್ಟಿಯಾಗಿ ಅಗೆದು ಮನಬಂದಂತೆ ಅದಕ್ಕೆ ಹೊಂದಿಸಿ ಕಾಂಕ್ರಿಟ್ ಹಾಕಲಾಗುತ್ತಿದೆ. ಸ್ಮಾರ್ಟ್ ಸಿಟಿಗೆ ಪ್ರತ್ಯೇಕ ಕಂಪನಿ ನಿಗದಿಪಡಿಸಿದ್ದು, ಈ ಕಂಪನಿ ಕಾನೂನು ಬಾಹಿರವಾಗಿ ರಸ್ತೆ, ಚರಂಡಿಗಳನ್ನು ನಿರ್ಮಿಸುತ್ತಿದೆ. ಕೇವಲ ಟೆಂಡರ್ ಪ್ರಕ್ರಿಯೆಯಂತೆ ತನ್ನ ಅಂದಾಜು ಪಟ್ಟಿಯಲ್ಲಿರುವ ಕೆಲಸ ಹೇಗಾದರೂ ಮಾಡಿ ಅಳತೆ ತೋರಿಸಿದರೆ ಸಾಕು ಬಿಲ್ ಪಾವತಿ ಮಾಡಲು ಅನುಕೂಲವಾಗುತ್ತದೆ ಎನ್ನುವ ರೀತಿ ವರ್ತಿಸುತ್ತಿದ್ದಾರೆ ಎಂದು ಅವರು ದೂರಿದ್ದಾರೆ.

ಸಾರ್ಟ್ ಸಿಟಿ ಕಾಮಗಾರಿಗಳ ನೇರ ಗುತ್ತಿಗೆ ಪಡೆದ ಅರ್ಹ ಗುತ್ತಿಗೆದಾರರು ಕೆಲಸ ಮಾಡದೇ ಅನುಭವ ರಹಿತ ವ್ಯಕ್ತಿಗಳಿಗೆ ಉಪಗುತ್ತಿಗೆ ನೀಡುತ್ತಿರುವುದೇ ಇಂತಹ ಅವಾಂತರಕ್ಕೆ ಕಾರಣ. ಮೇಲ್ಕಂಡ ನೂನತೆಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲು ನಿರ್ಲಕ್ಷ್ಯ ವಹಿಸಿದರೆ ಮುಖ್ಯಮಂತ್ರಿಗಳಿಗೆ ದೂರು ಸಲ್ಲಿಸುತ್ತೇನೆ ಎಂದು ಅಮಾನುಲ್ಲಾ ಖಾನ್ ಎಚ್ಚರಿಕೆ ನೀಡಿದ್ದಾರೆ.

sample description

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.