ETV Bharat / state

ಕಂದಾಯ ಕಟ್ಟಿದರೂ ಬದುಕು ಅತಂತ್ರ; ಹಕ್ಕು ಪತ್ರಕ್ಕಾಗಿ ದಾವಣಗೆರೆ ಸ್ಲಂ ನಿವಾಸಿಗಳ ಹೋರಾಟ

ದಾವಣಗೆರೆಯ ಮಹಾವೀರ ನಗರದ ನಿವಾಸಿಗಳು ಹಕ್ಕುಪತ್ರ ನೀಡುವಂತೆ ದಶಕಗಳಿಂದ ಹೋರಾಟ ನಡೆಸುತ್ತಿದ್ದಾರೆ.

author img

By ETV Bharat Karnataka Team

Published : Dec 6, 2023, 4:12 PM IST

slum-residents-of-davanagere-insistence-to-give-the-hakkupatra
ದಾವಣಗೆರೆ : ಹಕ್ಕುಪತ್ರ ನೀಡುವಂತೆ ಸ್ಲಂ ನಿವಾಸಿಗಳ ಒತ್ತಾಯ

ದಾವಣಗೆರೆ : ನಗರದ ಸ್ಲಂವೊಂದರಲ್ಲಿ ವಾಸಿಸುವ ಜನರು ತಮಗೆ ಹಕ್ಕು ಪತ್ರಗಳನ್ನು ನೀಡುವಂತೆ ಕಳೆದ ಐದು ದಶಕಗಳಿಂದ ಹೋರಾಟ ನಡೆಸುತ್ತಿದ್ದಾರೆ. ಆದರೆ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮಕೈಗೊಂಡಿಲ್ಲ. ಆದಷ್ಟು ಬೇಗ ನಮಗೆ ಹಕ್ಕು ಪತ್ರಗಳನ್ನು ವಿತರಿಸಬೇಕು ಎಂದು ಇಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ.

ಹೌದು, ಇಲ್ಲಿನ ಮಹಾವೀರ ನಗರದ ನಿವಾಸಿಗಳು ಹಕ್ಕು ಪತ್ರಕ್ಕಾಗಿ ಸ್ಲಂ ಬೋರ್ಡ್ ಕಚೇರಿಗೆ ದಿನನಿತ್ಯ ಅಲೆದಾಟ ನಡೆಸುತ್ತಿದ್ದಾರೆ. ಮಹಾವೀರ ನಗರವನ್ನು ಸ್ಲಂ ಎಂದು ಘೋಷಣೆ ಮಾಡಿದ್ದು, ಇಲ್ಲಿ ಸುಮಾರು 120 ಮನೆಗಳಿವೆ. ಈ ಮನೆಗಳಿಗೆ 50 ವರ್ಷ ಕಳೆದರೂ ಹಕ್ಕುಪತ್ರ ನೀಡಿಲ್ಲ. ಈ ನಗರವನ್ನು 1977ರಲ್ಲಿ ಜೀನ್ ದತ್ತಪ್ಪ ಎಂಬವರು ಇಲ್ಲಿನ ಬಡಕೂಲಿ ಕಾರ್ಮಿಕರಿಗೆ ದಾನವಾಗಿ ಕೊಟ್ಟು, ಆಸ್ತಿ ಪತ್ರವನ್ನು ನೀಡಿದ್ದರು. ಕಳೆದ ಕೆಲವು ದಶಕಗಳಿಂದ ಈ ಸ್ಲಂನಲ್ಲಿ ನೆಲೆಸಿದ್ದರೂ ಇಲ್ಲಿ ಜನರಿಗೆ ಯಾವುದೇ ಮೂಲ ಸೌಕರ್ಯಗಳು ಲಭ್ಯವಾಗಿಲ್ಲ.

ಈ ಕುರಿತು ಪ್ರತಿಕ್ರಿಯಿಸಿದ ಮಹಾವೀರ ನಗರದ ನಿವಾಸಿ ಷಣ್ಮುಖಪ್ಪ, ಇಲ್ಲಿ 40-50 ವರ್ಷಗಳಿಂದ ಜೀವನ ಸಾಗಿಸುತ್ತಿದ್ದೇವೆ. ಸರ್ಕಾರದಿಂದ ನಮಗೆ ಯಾವುದೇ ಸೌಕರ್ಯಗಳು ಲಭ್ಯವಾಗಿಲ್ಲ. ಕನಿಷ್ಠ ಪಕ್ಷ ನಾವು ವಾಸ ಮಾಡುತ್ತಿರುವ ಮನೆಗಳಿಗೂ ಹಕ್ಕುಪತ್ರಗಳನ್ನು ನೀಡಿಲ್ಲ. ಜನಪ್ರತಿನಿಧಿಗಳು ಚುನಾವಣೆ ವೇಳೆ ಆಶ್ವಾಸನೆ ಕೊಟ್ಟು ಹೋಗುತ್ತಾರೆ. ಆದರೆ ನಮ್ಮ ಸಮಸ್ಯೆ ಮಾತ್ರ ಬಗೆಹರಿದಿಲ್ಲ. ನಾವು ಇಲ್ಲಿ ನೆಲೆಸಿದ್ದೇವೆ ಎಂದು ಖಚಿತಪಡಿಸಲು ನಮಗೆ ಹಕ್ಕುಪತ್ರ ಬೇಕು ಎಂದು ಒತ್ತಾಯಿಸಿದ್ದಾರೆ.

ಇಲ್ಲಿ ಒಟ್ಟು 120 ಮನೆಗಳಿವೆ. 1977ರಿಂದ ಗುಡಿಸಲು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದೇವೆ. ಹಕ್ಕು ಪತ್ರಗಳನ್ನು ಪಡೆಯಲು ಸ್ಲಂ ಬೋರ್ಡ್ ಅಧಿಕಾರಿಗಳ ಬಳಿ ತೆರಳಿದರೆ, ಮತ್ತೆ ಬನ್ನಿ ಎನ್ನುತ್ತಿದ್ದಾರೆ‌. ಜಾಗದ ಕಂದಾಯ ಕಟ್ಟುತ್ತಿದ್ದೇವೆ. ಆದರೂ ಹಕ್ಕುಪತ್ರ ನೀಡಿಲ್ಲ. ಡೋರ್ ನಂಬರ್ ಕೋಡುತ್ತೇವೆ ಎಂದಿದ್ದರು. ಅದನ್ನೂ ಕೂಡ ಕೊಟ್ಟಿಲ್ಲ. ಹಕ್ಕು ಪತ್ರ ಕೊಟ್ಟರೆ ನಾವು ಸರಿಯಾದ ಮನೆಗಳನ್ನು ಕಟ್ಟಿಕೊಂಡು ಜೀವನ ಮಾಡ್ತಿವಿ ಎಂದು ಶಣ್ಮಖಪ್ಪ ಅಳಲನ್ನು ತೋಡಿಕೊಂಡರು.

ಫರೀದಾಬಾನು ಎಂಬುವರು ಮಾತನಾಡಿ, ನಮಗೆ ಒಂದು ಮನೆ ಇದೆ. ಆದರೆ ಹಕ್ಕುಪತ್ರ ಮಾತ್ರ ಕೊಟ್ಟಿಲ್ಲ. ನಮಗೆ ಹಕ್ಕು ಪತ್ರ ಬೇಕು. ಸಂಬಂಧಪಟ್ಟ ಅಧಿಕಾರಿಗಳು ನಮಗೆ ಹಕ್ಕು ಪತ್ರಗಳನ್ನು ಒದಗಿಸಿಕೊಡಬೇಕೆಂದು ಮನವಿ ಮಾಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ಲಂ ಬೋರ್ಡ್ ಎಇಇ ದೇವರಾಜ್ ಅವರು, ಈಗಾಗಲೇ ಮಹಾವೀರ್ ನಗರದ ಸಮಸ್ಯೆ ಗಮನಕ್ಕೆ ಬಂದಿದೆ. ಕಳೆದ ದಿನ ಅಲ್ಲಿನ ನಿವಾಸಿಗಳು ಬಂದು ಮನವಿ ಕೊಟ್ಟಿದ್ದಾರೆ. ಈ ಬಗ್ಗೆ ಗಮನ ಹರಿಸಲಾಗುವುದು. ಈಗಾಗಲೇ ಮಹಾವೀರ ನಗರವನ್ನು ಸ್ಲಂ ಎಂದು ಘೋಷಣೆ ಮಾಡಲಾಗಿದೆ. ಸದ್ಯದಲ್ಲೇ ಈ ಸಮಸ್ಯೆ ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಇದನ್ನೂ ಓದಿ : ಪ್ಲಾಸ್ಟಿಕ್​ನಿಂದ ಟೈಲ್ಸ್ ತಯಾರಿಕೆ: ಪಾಲಿಕೆಯ ಕಸ ಸಂಗ್ರಹಣ ಘಟಕದಲ್ಲಿ ಹೊಸ ಪ್ರಯೋಗ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.