ETV Bharat / state

ಬಸವಣ್ಣ ಪ್ರತಿಪಾದಿಸಿದ್ದು ಮೀಸಲಾತಿಯನ್ನಲ್ಲ, ಸಮಾನತೆ: ಸಿರಿಗೆರೆ ಶ್ರೀ - ​ ETV Bharat Karnataka

ಎಲ್ಲಾ ಸಮುದಾಯದವರು ಸಮಾನರು ಎಂಬ ಸಂದೇಶವನ್ನು ಬಸವಣ್ಣನವರು ಸಾರಿದ್ದಾರೆ ಎಂದು ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ಹೇಳಿದರು.

ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀಗಳು
ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀಗಳು
author img

By ETV Bharat Karnataka Team

Published : Dec 24, 2023, 10:40 AM IST

Updated : Dec 24, 2023, 11:04 AM IST

ಬಸವಣ್ಣ ಪ್ರತಿಪಾದಿಸಿದ್ದು ಮೀಸಲಾತಿಯನ್ನಲ್ಲ, ಸಮಾನತೆ

ದಾವಣಗೆರೆ : ಹೋರಾಟ ಮಾಡಿ ಮೀಸಲಾತಿ ತರುವುದಲ್ಲ. ಬಸವಣ್ಣನವರು ಮೀಸಲಾತಿ ತರಲಿಲ್ಲ, ಸಮಾನತೆ ತಂದರು ಎಂದು ಸಿರಿಗೆರೆ ತರಳಬಾಳು ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ಅಭಿಪ್ರಾಯ ವ್ಯಕ್ತಪಡಿಸಿದರು. ದಾವಣಗೆರೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ವತಿಯಿಂದ ಜರುಗಿದ 24 ಅಧಿವೇಶನದ ಮೊದಲನೇ ದಿನದ ವೇದಿಕೆ ಕಾರ್ಯಕ್ರಮದಲ್ಲಿ ಶ್ರೀಗಳು ಮಾತನಾಡಿದರು.

ಎಲ್ಲಾ ಸಮುದಾಯದವರು ಸಮಾನರು ಎಂಬ ಸಂದೇಶವನ್ನು ಬಸವಣ್ಣನವರು 12 ಶತಮಾನದಲ್ಲಿಯೇ ಸಾರಿದರು. ವೀರಶೈವ ಸಮಾಜ ಅಧಃಪತನಕ್ಕೆ ಹೋಗ್ತಿರುವುದಕ್ಕೆ ವೀರಶೈವರೇ ಕಾರಣ. ವೀರಶೈವರಿಗೆ ಶತ್ರುಗಳು ಯಾರೆಂದರೆ ವೀರಶೈವರುಗಳೇ ಆಗಿದ್ದಾರೆ, ಅಂತೆಯೇ ಲಿಂಗಾಯತರಿಗೆ ಶತ್ರುಗಳು ಯಾರು ಎಂದರೇ ಲಿಂಗಾಯತರೇ ಎಂದು ಸಿರಿಗೆರೆ ತರಳಬಾಳು ಮಠದ ಶ್ರೀಗಳು ಹೇಳಿದರು.

ಎಲ್ಲರೂ ನಮ್ಮ ಸ್ವಾರ್ಥ ಬದಿಗಿಟ್ಟು, ನಾವೆಲ್ಲರೂ ಒಂದೇ ಎಂಬ ಭಾವನೆ ಇಟ್ಟುಕೊಂಡು ಸಂಘಟಿಸಿದರೆ ಮಾತ್ರ ವೀರಶೈವ ಲಿಂಗಾಯತ ಸಮಾಜದ ಸಂಘಟನೆ ಆಗಲಿದೆ. ಈ ಮೀಸಲಾತಿಯೇ ವೀರಶೈವರ ಸಂಖ್ಯೆಯನ್ನು ಕಡಿಮೆ ಮಾಡುತ್ತಿದೆ‌. ನಮ್ಮದು ಮಿತ ಸಂಖ್ಯೆ ಆಗಲು ಸಾಧ್ಯವಿಲ್ಲ. ಸರ್ಕಾರಿ ಸೌಲಭ್ಯ ಪಡೆಯಲು ಸಮುದಾಯದಲ್ಲಿ ಉಪ ಪಂಗಡಗಳನ್ನು ಹೇಳುತ್ತ ಹೋಗುತ್ತಿರುವುದೇ ವೀರಶೈವ ಸಮಾಜದ ಸಂಖ್ಯೆ ಕಡಿಮೆ ಆಗಲು ಪ್ರಮುಖ ಕಾರಣ‌. ಬಸವಣ್ಣನವರ ನುಡಿಗಳನ್ನು ಈ ಅಧಿವೇಶನದಲ್ಲಿ ಹೇಳುವುದಷ್ಟೇ ಹೊರತು, ಅದು ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದರು.

ಇದೇ ವೇಳೆ ಮಾತನಾಡಿದ ಶ್ರೀಶೈಲ ಪೀಠದ ಡಾ. ಚೆನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು, ವೀರಶೈವ ಬೇರೆ, ಲಿಂಗಾಯತ ಬೇರೆ ಎಂಬುದಕ್ಕೆ ಪರೋಕ್ಷವಾಗಿ ಬೆಂಬಲ ಕೊಟ್ಟು ಕೈ ಸುಟ್ಟಿಕೊಂಡಿದ್ದಾಗಿದೆ. ಸರ್ಕಾರ ಈ ಸಮಾಜವನ್ನು ಕಡೆಗಣಿಸಬಾರದು. ಅಷ್ಟೇ ಅಲ್ಲ, ಈ ಸಮುದಾಯದ ಒಗ್ಗಟ್ಟಿನ ಜೊತೆ ಸರ್ಕಾರ ಚೆಲ್ಲಾಟ ಆಡಬಾರದು ಎಂದು ಎಚ್ಚರಿಕೆ ರವಾನಿಸಿದರು.

ರಾಜಕೀಯ ಹಿತಾಸಕ್ತಿಯಿಂದ ವೀರಶೈವ ಲಿಂಗಾಯತ ಸಮಾಜವನ್ನು ಇಬ್ಭಾಗ ಮಾಡಿ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಪ್ರಯತ್ನ ನಡೆದಾಗ ಶಾಮನೂರು ಶಿವಶಂಕರಪ್ಪ ಅವರು ಕಲ್ಲು ಬಂಡೆಯಾಗಿ ನಿಂತಿದ್ದರು. ಒಂದು ವರದಿಯ ಮೂಲಕ ವಿಶಾಲವಾದ ನಮ್ಮ ಸಮಾಜವನ್ನು ಸಂಕುಚಿತಗೊಳಿಸಿ, ತಾವು ಮೇಲೇರಬೇಕೆಂಬ ಹುನ್ನಾರ ನಡೆದಾಗ ಅದನ್ನು ತಿರಸ್ಕಾರ ಮಾಡಬೇಕೆಂದು ಮಹಾಸಭಾವು ಮಾಡಿದ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ ಎಂದರು.

ಕೇಂದ್ರದ ಒಬಿಸಿ ಪಟ್ಟಿಯಲ್ಲಿ ವೀರಶೈವ ಲಿಂಗಾಯತ ಸಮುದಾಯದ ಎಲ್ಲಾ ಒಳಪಂಗಡಗಳನ್ನು ಸೇರಿಸುವ ನಿಟ್ಟಿನಲ್ಲಿ, ರಾಜ್ಯ ಸರ್ಕಾರ ಶಿಫಾರಸು ಮಾಡಬೇಕು. ಕೇಂದ್ರ ಸರ್ಕಾರ ಅದನ್ನು ಪರಿಗಣಿಸಬೇಕು. ಆಗ ಮಾತ್ರ ಈ ಸಮಾಜಕ್ಕೆ ಆಗಿರುವಂತಹ ಸರ್ಕಾರದ ಮೀಸಲಾತಿಯ ಅನ್ಯಾಯವು ದೂರವಾಗುತ್ತದೆ. ನಮ್ಮ ಸಮಾಜವು ಒಳಪಂಗಡಗಳ ಮಧ್ಯದಲ್ಲಿ ಇಬ್ಭಾಗಗೊಳ್ಳುತ್ತಿದೆ. ಯಾವುದೋ ಕಾಲದಲ್ಲಿ ವೃತ್ತಿ ಆಧಾರಿಸಿ ಒಳಪಂಗಡಗಳನ್ನು ಮಾಡಿಕೊಂಡಿದ್ದಾರೆ. ಅದರೆ, ನಾವು ಎಲ್ಲರೂ ವೀರಶೈವರು ಎಂಬುದನ್ನು ಮರೆಯಬಾರದು ಎಂದು ಶ್ರೀಶೈಲ ಜಗದ್ಗುರುಗಳು ತಿಳಿಸಿದರು.

ಇದನ್ನೂ ಓದಿ : ದಾವಣಗೆರೆ: ನಾಳೆಯಿಂದ 2 ದಿನ ವೀರಶೈವ ಲಿಂಗಾಯತ ಮಹಾ ಅಧಿವೇಶನ, ಬೃಹತ್​ ವೇದಿಕೆ ಸಿದ್ಧ

Last Updated : Dec 24, 2023, 11:04 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.