ETV Bharat / state

ಬಿಜೆಪಿಯವರ ಪಾಪದ ಪುರಾಣ ಜನರ ಮುಂದೆ ತರುವುದೇ ನಮ್ಮ ಉದ್ದೇಶ: ಸಿದ್ದರಾಮಯ್ಯ - Bed and blanket scam

ಭಾರತೀಯ ಜನತಾ ಪಕ್ಷದಂತಹ ಕೆಟ್ಟ, ಭ್ರಷ್ಟ,‌ ಜನ ವಿರೋಧಿ ಸರ್ಕಾರವನ್ನು ನಾವು ನೋಡಿರಲಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದರು.

siddaramaiah
ಸಿದ್ದರಾಮಯ್ಯ
author img

By

Published : Jan 20, 2023, 8:29 AM IST

ಪ್ರಜಾ ಧ್ವನಿ ಸಮಾವೇಶದಲ್ಲಿ ಮಾತನಾಡಿದ ಸಿದ್ದರಾಮಯ್ಯ, ಹೆಚ್.ಆಂಜನೇಯ

ದಾವಣಗೆರೆ: ಬಿಜೆಪಿಯವರ ಪಾಪದ ಕೊಡ‌ ತುಂಬಿದೆ. ಇವರ ಪಾಪದ ಪುರಾಣವನ್ನು ಜನರ ಮುಂದೆ ತರುವುದೇ ನಮ್ಮ ಉದ್ದೇಶ. ಈ ಸರ್ಕಾರ ಜನರಿಗೆ ಹಾಗೂ ಎಸ್​ಸಿ, ಎಸ್​ಟಿ ಸಮುದಾಯದವರಿಗೆ ಮೋಸ ಮಾಡಿದೆ ಎಂದು ಪ್ರತಿಪಕ್ಷ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಪ್ರಜಾ ಧ್ವನಿ ಬಸ್ ಯಾತ್ರೆ ಮೂಲಕ ಜಿಲ್ಲೆಗೆ ಆಗಮಿಸಿ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರತಿ ದಿನ ಸರ್ಕಾರದ ಕರ್ಮಕಾಂಡ ಬಯಲಿಗೆ ಬರುತ್ತಿದೆ. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯವರು ಮನೆಗೆ ಹೋಗಲೇಬೇಕು. ಅವರು ಕೇವಲ ಮೂರು ತಿಂಗಳು ಮಾತ್ರ ಅಧಿಕಾರದಲ್ಲಿರುತ್ತಾರೆ.‌ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಭವಿಷ್ಯ ನುಡಿದರು.

ಬಿಜೆಪಿ ಸರ್ಕಾರ ಎಸ್​ಸಿ, ಎಸ್​ಟಿ ಸಮುದಾಯದವರಿಗೆ ಮಕ್ಮಲ್ ಟೋಪಿ ಹಾಕಿದೆ. 2013 ರಲ್ಲಿ ಆಂಜನೇಯ ಅವರ ನೇತೃತ್ವದಲ್ಲಿ ಎಸ್​ಸಿ, ಎಸ್​ಟಿ ಸಮುದಾಯದ ಅಭಿವೃದ್ಧಿಗೆ ಹಣ ಬಳಕೆ ಮಾಡಿದ ಏಕೈಕ ಸರ್ಕಾರ ಕಾಂಗ್ರೆಸ್​. ಅದ್ರೆ, ಬಿಜೆಪಿ ಎಸ್ಇಟಿಪಿ ಫಂಡ್‌ ಅನ್ನು ಕಡಿಮೆ ಮಾಡಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಸಮುದಾಯಗಳಿಗೆ ದ್ರೋಹ ಮಾಡಿದೆ ಎಂದು ಆರೋಪಿಸಿದರು.

ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ: ಮೋದಿ ಅವರು ನಾ ಖಾವುಂಗಾ, ನಾ ಖಾನೆದುಂಗಾ ಅಂದ್ರು. ಉಜ್ವಲ ಯೋಜನೆಯಡಿ ಫ್ರೀ ಗ್ಯಾಸ್ ಕೊಡುತ್ತೇವೆ ಎಂದು ಹೇಳುತ್ತಾ ಸಿಲಿಂಡರ್​ ಬೆಲೆ ಏರಿಕೆ ಮಾಡಿದರು. ಈಗ ಗ್ಯಾಸ್ ಬೆಲೆ 1,186 ರೂಪಾಯಿ ಆಗಿದೆ. ಇದೇ ಏನ್ರೀ ಅಚ್ಛೇ ದಿನ್ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮನೆಯ ಯಜಮಾನಿಗೆ ವರ್ಷಕ್ಕೆ 24,000 ಕೊಡುತ್ತೇವೆ. ಎಲ್ಲರಿಗೂ ಫ್ರೀ ವಿದ್ಯುತ್ ಎಂದು ಭರವಸೆ ಕೊಟ್ಟರು.

ಹಾಸಿಗೆ ದಿಂಬು ಪ್ರಕರಣ ಸಿಬಿಐಗೆ ಕೊಡಿ: ಧಮ್ಮು, ತಾಕತ್ತು ಇದ್ರೆ ಹಾಸಿಗೆ ದಿಂಬು ಹಗರಣ ಪ್ರಕರಣವನ್ನು ಸಿಬಿಐಗೆ ಕೊಡಿ. ನಾನು ಭಾಗಿಯಾಗಿದ್ರೆ ಜೈಲಿಗೆ ಹೋಗಲು ಸಿದ್ಧ. ನಾನು ಭ್ರಷ್ಟಾಚಾರ ಮಾಡಿದ್ದೇನೆ ಎಂದು ಸಾಬೀತುಪಡಿಸಿ ಅಂತ ಮಾಜಿ ಸಚಿವ ಹೆಚ್.ಆಂಜನೇಯ ಪ್ರಜಾ ಧ್ವನಿ ‌ಕಾರ್ಯಕ್ರಮದಲ್ಲಿ ಸರ್ಕಾರಕ್ಕೆ ಸವಾಲೆಸೆದರು.

ಇದನ್ನೂ ಓದಿ: ಪಾಪ ಮಾಡಿದ ಪಕ್ಷವನ್ನು ಸುಮ್ಮನೆ ಮನೆಗೆ ಹೋಗಲು ಬಿಡುವುದಿಲ್ಲ: ಸಿದ್ದರಾಮಯ್ಯ-ಡಿಕೆಶಿ ವಾಗ್ದಾನ

ಜನರಲ್ಲಿ ಜಾಗೃತಿ ಮೂಡಿಸುವುದೇ ಪ್ರಜಾ ಧ್ವನಿಯ ಉದ್ದೇಶ. ಬಿಜೆಪಿ ಅಧಿಕಾರದಲ್ಲಿರುವುದು ಎಲ್ಲರಿಗೂ ಕಂಟಕ. ಈ ಸರ್ಕಾರ ದಲಿತರು, ವಿದ್ಯಾರ್ಥಿಗಳು, ರೈತರಿಗೆ ಮಾರಕ.‌ ಇದು 40% ಕಮಿಷನ್‌ ಸರ್ಕಾರ. ಹರಿ ಜನರ ಅಭಿವೃದ್ಧಿಗಿಟ್ಟಿದ್ದ 8 ಸಾವಿರ ಕೋಟಿ ಹಣದಲ್ಲೂ ಬಿಜೆಪಿಯವರು 40% ಕಮಿಷನ್ ಹೊಡೆದಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಜನಾಶೀರ್ವಾದ ಪಡೆದು ಬಿಜೆಪಿ‌ಯನ್ನು ನಾಶಪಡಿಸಲು‌ ರಾಜ್ಯದಲ್ಲಿ ಪ್ರಜಾ ಧ್ವನಿ ಮೊಳಗುತ್ತಿದೆ. ಬಿಜೆಪಿ ವಾಮಮಾರ್ಗದಲ್ಲಿ ಅಧಿಕಾರಕ್ಕೆ ಬಂದಿದೆ. ಪ್ರಜಾಪ್ರಭುತ್ವಕ್ಕೆ ಮಸಿ ಬಳಿಯುವ ಕೆಲಸ 17 ಜನರಿಂದ ಆಗಿದೆ. ಜನಪ್ರತಿನಿಧಿಗಳಾದವರು ಪಕ್ಷ ನಿಷ್ಠೆಯಿಂದ ಇರಬೇಕು ಎಂದರು.

ಇದನ್ನೂ ಓದಿ: ಬಸವರಾಜ ಬೊಮ್ಮಾಯಿಗೆ 40 ಪರ್ಸೆಂಟ್‌ ಕಳಂಕ ಅಂಟಿಕೊಂಡಿದೆ:ಸಿದ್ದರಾಮಯ್ಯ ಟೀಕಾ ಪ್ರಹಾರ

ಜೆಡಿಎಸ್ ಸಿದ್ದರಾಮಯ್ಯನವರನ್ನು ಹೊರ ಹಾಕಿತ್ತು: ಸಿದ್ದರಾಮಯ್ಯ ಕೂಡ ಜೆಡಿಎಸ್​ನಿಂದ ಬಂದವರು ಅಂತಾರೆ. ಆದರೆ ಅವರ ಅಹಿಂದ ಸಂಘಟನೆ ಸಹಿಸದ ಜೆಡಿಎಸ್ ​ಸಿದ್ದರಾಮಯ್ಯನನ್ನು ಹೊರ ಹಾಕಿತ್ತು. ಆಗ ಸಿದ್ದರಾಮಯ್ಯನವರು ಬೇಡಿಕೆ ಇರುವ, ಜನಪರ ಧ್ವನಿ, ಇದು ಒಳ್ಳೆಯ ಮೆಟೀರಿಯಲ್ ಎಂದು ತಿಳಿದು ಕಾಂಗ್ರೆಸ್ ಪಕ್ಷಕ್ಕೆ ಬಂದರು ಎಂದು ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.