ದಾವಣಗೆರೆ: ಮಾಜಿ ಸಿಎಂ ಸಿದ್ದರಾಮಯ್ಯ ಎರಡು ಮದುವೆಯಲ್ಲಿ ಪಾಲ್ಗೊಂಡರೂ ಕೂಡ ಸಮಾರಂಭದಲ್ಲಿ ಊಟ ಮಾಡದೆ ಬಾಪೂಜಿ ಗೆಸ್ಟ್ ಹೌಸ್ ನಲ್ಲಿ ಮಾಂಸಾಹಾರ ಸವಿದಿದ್ದಾರೆ.
![ಗೆಸ್ಟ್ಹೌಸ್ನಲ್ಲಿ ಚಿಕನ್ ಸವಿದ ಸಿದ್ದು](https://etvbharatimages.akamaized.net/etvbharat/prod-images/kn-dvg-12-15-siddu-chiken-script-7203307_15062020202132_1506f_1592232692_31.jpg)
ಹರಪನಹಳ್ಳಿ ತಾಲೂಕಿನ ಲಕ್ಷ್ಮೀಪುರದಲ್ಲಿ ಮಾಜಿ ಸಚಿವ ಪಿ. ಟಿ. ಪರಮೇಶ್ವರ್ ನಾಯಕ್ ಪುತ್ರನ ವಿವಾಹ ಹಾಗೂ ನಗರದ ವಿನೋಬ ನಗರದಲ್ಲಿರುವ ಸಹಕಾರ ಸಮುದಾಯ ಭವನದಲ್ಲಿ ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ. ಬಸವರಾಜ ಅವರ ಪುತ್ರಿಯ ಮದುವೆಯಲ್ಲಿ ಪಾಲ್ಗೊಂಡರು.ಆದರೆ, ಎರಡೂ ಮದುವೆಯಲ್ಲೂ ಊಟ ಮಾಡಲಿಲ್ಲ.
ಬಸವರಾಜ್ ಪುತ್ರಿಯ ವಿವಾಹದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ಶಾಸಕ ಶಾಮನೂರು ಶಿವಶಂಕರಪ್ಪ, ಮಾಜಿ ಸಂಸದ ವಿ.ಎಸ್. ಉಗ್ರಪ್ಪ, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ವಿಧಾನ ಪರಿಷತ್ ಮುಖ್ಯ ಸುಚೇತಕ ನಾರಾಯಣಸ್ವಾಮಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹೆಚ್.ಬಿ. ಮಂಜಪ್ಪ ಆಗಮಿಸಿ ನವ ಜೋಡಿಗಳಿಗೆ ಶುಭ ಹಾರೈಸಿದರು.
![ಮದುವೆ ಸಮಾರಂಭದಲ್ಲಿ ಸಿದ್ದರಾಮಯ್ಯ ಭಾಗಿ](https://etvbharatimages.akamaized.net/etvbharat/prod-images/kn-dvg-12-15-siddu-chiken-script-7203307_15062020202132_1506f_1592232692_863.jpg)
ಕಳೆದ ಕೆಲ ದಿನಗಳಿಂದ ರಾಜಕೀಯದಿಂದ ಸ್ವಲ್ಪ ದೂರವೇ ಉಳಿದಿದ್ದ ಮಾಜಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಲಕ್ಷ್ಮೀಪುರ ಹಾಗೂ ನಗರದಲ್ಲಿ ನಡೆದ ಮದುವೆಯಲ್ಲಿ ಸಿದ್ದರಾಮಯ್ಯರ ಜೊತೆ ಕಾಣಿಸಿಕೊಂಡರು.