ದಾವಣಗೆರೆ: ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ಸುಮ್ಮನೆ ರಾಜೀನಾಮೆ ಕೊಟ್ಟಿದ್ದಾರೆ ಎಂದು ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ. ಸೋನಿಯಾ ಗಾಂಧಿಯವರೇ ರಾಜೀನಾಮೆ ತಿರಸ್ಕರಿಸಿ, ಸ್ಥಾನಮಾನವನ್ನು ಕರೆದು ಕೊಡಲಿ ಎಂದು ಈ ರೀತಿ ಮಾಡಿದ್ದಾರೆ. ಮತ್ತೆ ಅವರು ರಾಜೀನಾಮೆಯನ್ನು ವಾಪಸ್ ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ.
ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ. ಆದ್ದರಿಂದ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ಸಾಮಾನ್ಯ. ಅಲ್ಲದೆ ಸರ್ಕಾರಕ್ಕೆ ಅವರದೇ ಆದ ಸೋರ್ಸ್ ಇರುತ್ತೆ. ಅಧಿಕಾರಿಗಳು, ಕಾನೂನು ಅವರದ್ದೆ ಆಗಿರುತ್ತೆ. ಹೀಗಾಗಿ ಗೆಲುವು ಸಾಧಿಸೋದು ಸುಲಭವಾಗುತ್ತದೆ ಎಂದು ಬಿಜೆಪಿ ಗೆಲುವಿನ ಬಗ್ಗೆ ಮಾತನಾಡಿದರು.