ETV Bharat / state

ದಾವಣಗೆರೆಗೆ ಸಚಿವ ಸ್ಥಾನ ಸಿಗದ ಬಗ್ಗೆ ಸಿದ್ದೇಶ್ವರ್ ಅವರನ್ನೇ ಕೇಳಿ: ಶಾಮನೂರು ಶಿವಶಂಕರಪ್ಪ - ದಾವಣಗೆರೆ ಲೇಟೆಸ್ಟ್​ ನ್ಯೂಸ್

ಇದು ರಾಜಕೀಯ ಹೈಡ್ರಾಮ. ಮುಂದಿನ ದಿನಗಳಲ್ಲಿ ಎಲ್ಲ ಸರಿ ಹೋಗುತ್ತದೆ. ದಾವಣಗೆರೆ ಜಿಲ್ಲೆಗೆ ಸಚಿವ ಸ್ಥಾನ ದಕ್ಕದ ಬಗ್ಗೆ ಸಂಸದ ಜಿ ಎಂ ಸಿದ್ದೇಶ್ವರ್ ಅವರನ್ನೇ ಕೇಳಿ ಎಂದು ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.

shamanur-shivashankarappa-statement-about-present-politics
ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ
author img

By

Published : Jan 14, 2021, 9:20 PM IST

ದಾವಣಗೆರೆ: ನಾವು ವಿರೋಧ ಪಕ್ಷದವರು, ನಮ್ಮನ್ನು ತೆಗೆದುಕೊಂಡು ಏನು ಮಾಡುತ್ತೀರಾ. ದಾವಣಗೆರೆ ಜಿಲ್ಲೆಗೆ ಸಚಿವ ಸ್ಥಾನ ಸಿಗದ ಬಗ್ಗೆ ಸಂಸದ ಜಿ ಎಂ ಸಿದ್ದೇಶ್ವರ್ ಕೇಳಿ ಎಂದು ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಪ್ರತಿಕ್ರಿಯಿಸಿದ್ದಾರೆ.

ಜಿಲ್ಲೆಗೆ ಸಚಿವ ಸ್ಥಾನ ದಕ್ಕದ ಬಗ್ಗೆ ಸಿದ್ದೇಶ್ವರ್ ಅವರನ್ನೇ ಕೇಳಿ: ಶಾಮನೂರು ಶಿವಶಂಕರಪ್ಪ

ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಗ್ರಾಮದ ಬಳಿಯಿರುವ ಪಂಚಮಸಾಲಿ ಪೀಠದ ಹರ ಜಾತ್ರೆಯಲ್ಲಿ ಭಾಗಿಯಾಗಿದ್ದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಮಠಕ್ಕೆ‌ ಭೇಟಿ ನೀಡಿದ್ದೇನೆ. ಇಲ್ಲಿ ರಾಜಕೀಯ ಮಾತನಾಡಬಾರದು. ಇದು ರಾಜಕೀಯ ಹೈಡ್ರಾಮ. ಮುಂದಿನ ದಿನಗಳಲ್ಲಿ ಎಲ್ಲ ಸರಿ ಹೋಗುತ್ತದೆ ಎಂದು ಅಭಿಪ್ರಾಯಪಟ್ಟರು.

ಮೀಸಲಾತಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಎಲ್ಲರಿಗೂ ಮೀಸಲಾತಿ ನೀಡಿದರೆ ಉಳಿದವರು ಎಲ್ಲಿ ಹೋಗ್ಬೇಕು. ಎಲ್ಲಾ ಸಮಾಜದಲ್ಲೂ ಬಡವರಿದ್ದಾರೆ. ಅವರಿಗೆ ಈ ಮೀಸಲಾತಿ ನೀಡ್ಬೇಕು. ಕುರುಬರು, ನಾಯಕರು, ವೀರಶೈವರು ಮೀಸಲಾತಿ ಕೇಳುತ್ತಿದ್ದಾರೆ. ಎಲ್ಲರಿಗೂ ಮೀಸಲಾತಿ ಬೇಕೆಂದರೆ ಸರ್ಕಾರ ಏನ್​ ಮಾಡಬೇಕು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.