ETV Bharat / state

ಹೋರಾಟ ಮಾಡುವವರು ಮಾಡಲಿ, ವೀರಶೈವ ಲಿಂಗಾಯತ ಒಂದೇ: ಎಂಬಿ ಪಾಟೀಲ್​ಗೆ ಶಾಮನೂರು ತಿರುಗೇಟು

ವೀರಶೈವ ಲಿಂಗಾಯತ ಒಂದೇ ಅನ್ನೋದು ವೀರಶೈವ ಮಹಾಸಭಾದ ನಿಲುವು. ಲಿಂಗಾಯತರಲ್ಲಿ ಉಪಜಾತಿ ಯಾವುದು ಇಲ್ಲ ಎಂದು ಶಾಮನೂರು ಶಿವಶಂಕರಪ್ಪ ಸ್ಪಷ್ಟನೆ ನೀಡಿದರು.

http://10.10.50.85:6060//finalout4/karnataka-nle/thumbnail/04-September-2021/12963435_706_12963435_1630698859858.png

author img

By

Published : Sep 4, 2021, 1:31 AM IST

Updated : Sep 4, 2021, 1:50 AM IST

ದಾವಣಗೆರೆ: ಪ್ರತ್ಯೇಕ ಲಿಂಗಾಯತ ಧರ್ಮದ ಬಗ್ಗೆ ಮತ್ತೊಮ್ಮೆ ಧ್ವನಿ ಎತ್ತಿದ ಎಂ.ಬಿ ಪಾಟೀಲ್​​ಗೆ ಅಖಿಲ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ತಿರುಗೇಟು ನೀಡಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಅವರು, ವೀರಶೈವ ಲಿಂಗಾಯತ ಒಂದೇ ಅನ್ನೋದು ವೀರಶೈವ ಮಹಾಸಭಾದ ನಿಲುವು. ಲಿಂಗಾಯತರಲ್ಲಿ ಉಪಜಾತಿ ಯಾವುದು ಇಲ್ಲ. ಎಲ್ಲವು ಒಂದೇ. ಸಾಧರ ಲಿಂಗಾಯತ, ಬಣಜಿಗರು, ಪಂಚಾಚಾರ್ಯರು, ಎಲ್ಲರನ್ನ ವೀರಶೈವರು ಎಂದು ಪರಿಗಣನೆ ಮಾಡ್ತಿವಿ ಎಂದರು. ಹೋರಾಟ ಮಾಡುವವರು ಮಾಡಲಿ. ಅವರೇ ತಣ್ಣಗಾಗುತ್ತಾರೆಂದು ಎಂ.ಬಿ. ಪಾಟೀಲ್​ ಹೇಳಿಕೆಗೆ ತಿರುಗೇಟು ನೀಡಿದರು.

ಎಂಬಿ ಪಾಟೀಲ್​ಗೆ ಶಾಮನೂರು ತಿರುಗೇಟು

ಪಂಚಪೀಠದವರು ಎಲ್ಲರೂ ಸೇರಿ ಬಸವ ಧರ್ಮ ಆಗಬೇಕು. ಪ್ರತ್ಯೇಕ ಲಿಂಗಾಯತ ಧರ್ಮ ಆದ್ರೆ ನಮಗೆ ಸೌಲಭ್ಯ ಸಿಗುತ್ತದೆ. ಲಿಂಗಾಯತ ಪ್ರತ್ಯೇಕ ಧರ್ಮವಾದ್ರೆ ಎಲ್ಲರಿಗೂ ಮೀಸಲಾತಿ ಸಿಗುತ್ತದೆ. ಅದಕ್ಕಾಗಿ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋರಾಟ ಮಾಡುತ್ತೇನೆಂದು ಮಾಜಿ ಗೃಹ ಸಚಿವರಾದ ಎಂ.ಬಿ. ಪಾಟೀಲ್​​ ಹೇಳಿಕೆ ನೀಡಿದ್ದರು. ಈ ವಿಚಾರಕ್ಕೆ ಗರಂ ಆದ ಶಾಮನೂರು ಶಿವಶಂಕರಪ್ಪ, ಅವನೇನು ಒಟ್ಟಿಗೆ ಕರೆದುಕೊಂಡು ಹೋಗ್ತಾನೆ? ಅವನ ಹಣೆ ಬರಹ. ಅವನು ಏನೇ ಹೇಳಿಕೆ ನೀಡಲಿ, ನಮ್ಮ ನಿಲುವು ಒಂದೇ ಎಂದರು.

ಇದನ್ನೂ ಓದಿರಿ: ಲಿಂಗಾಯತ ಪ್ರತ್ಯೇಕ ಧರ್ಮವಾದರೆ, ಎಲ್ಲರಿಗೂ ಮೀಸಲಾತಿ ಸಿಗುತ್ತೆ: ಎಂ.ಬಿ.ಪಾಟೀಲ್

ವೀರಶೈವ ಲಿಂಗಾಯತ ಒಂದೇ ಎಂಬ ನಿರಾಣಿ ಹೇಳಿಕೆ ಸರಿಯಾಗಿದೆ. ಎಂಬಿ ಪಾಟೀಲ್ ಲಿಂಗಾಯತ ನಾಯಕ ಆಗೋಕೆ ಹೊರಟಿದ್ದಾನೆ. ಅವರ ಊರಲ್ಲಿ ಮೊದಲು ಗೆಲುವು ಸಾಧಿಸಲಿ. ಲಿಂಗಾಯತ ನಾಯಕ ಆಗಬೇಕೆಂದು ಬಹಳ ಜನ ಹೋಗುತ್ತಿದ್ದಾರೆ. ಆದರೆ ಜನರು ಅವರನ್ನ ನಾಯಕರನ್ನಾಗಿ ಮಾಡಬೇಕು. ತಾವಾಗೆ ನಾಯಕನಾಗ್ತೀನಿ ಅಂತ ಹೋದ್ರೆ ಆಗುತ್ತಾ? ಎಂದು ಸ್ವ-ಪಕ್ಷದ ನಾಯಕನ ವಿರುದ್ಧವೇ ಶಾಮನೂರು ಗುಡುಗಿದರು.

Last Updated : Sep 4, 2021, 1:50 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.