ದಾವಣಗೆರೆ: ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಮನೂರು ಶಿವಶಂಕರಪ್ಪ ಅವರು, ಶಾಸಕರಿಗೆ ಎಷ್ಟು ಹಣ ಕೊಟ್ಟು ಖರೀದಿ ಮಾಡಿದ್ದಾರೆ ಎಂದು ನಮ್ಮ ಅಧ್ಯಕ್ಷರು, ವಿವರವಾಗಿ ಹೇಳಿದ್ದಾರೆ. ಯಡಿಯೂರಪ್ಪ ಆಪರೇಶನ್ ಕಮಲ ಮಾಡಿಲ್ಲ ಅಂದ್ರೆ ಇನ್ಯಾರು ಮಾಡಿದ್ದಾರೆ. ಹಣ ಪಡೆದು ಶಾಸಕರು ರಾಜೀನಾಮೆ ನೀಡಿದ್ದಾರೆ ಎಂದು ಹೇಳಿದರು.
ಸೋಮವಾರ ವಿಶ್ವಾಸ ಮತ ಫೈನಲ್ ಆಗಲಿದೆ, ಅತೃಪ್ತರನ್ನು ಬಿಜೆಪಿಯವರು ಒಳಗೆ ಕೂಡಿ ಹಾಕಿದ್ದಾರೆ. ಅತೃಪ್ತರು ವಾಪಸ್ ಬಂದ್ರೆ ನಮ್ಮ ಸರ್ಕಾರ ಸೇಫ್, ಇಲ್ಲದಿದ್ದಲ್ಲಿ ಪತನವಾಗುತ್ತದೆ. ಬಿಜೆಪಿ ಸರ್ಕಾರ ಬಂದ್ರೆ16 ಜನರಿಗೆ ಮಂತ್ರಿ ಗಿರಿ ಕೊಡಲು ಆಗಲ್ಲ. ಅವರಲ್ಲೂ ಕಚ್ಚಾಟ ಆಗುತ್ತದೆ. ಅಲ್ಲಿ ಹಣ ಬರಲಿಲ್ಲ ಎಂದ್ರೆ ಈ ಅತೃಪ್ತ ಶಾಸಕರು ಅವರಿಗೂ ಮೋಸ ಮಾಡಲಿದ್ದಾರೆ. ಇದು ಹೀಗೆ ಮುಂದುವರೆಯುತ್ತದೆ. ಬಿಜೆಪಿ ಸರ್ಕಾರ ಬಂದಲ್ಲಿ ಆ ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ಸಿಎಂ ಆಗಬಹುದು, ಆದ್ರೆ ಒಂದೇ ತಿಂಗಳಲ್ಲೇ ಭಿನ್ನಮತ ಶುರುವಾಗುತ್ತೆ ಎಂದು ಭವಿಷ್ಯ ನುಡಿದರು.