ETV Bharat / state

ದಾವಣಗೆರೆ : ಶಬರಿಮಲೈ ಭಕ್ತರಲ್ಲಿ ಸೋಂಕು ಪತ್ತೆ.. ಆತಂಕದಲ್ಲಿ ಜನ - ದಾವಣಗೆರೆಯಲ್ಲಿ ಕೊರೊನಾ ಸೋಂಕಿತರು ಹೆಚ್ಚಳ

ನೆಗೆಟಿವ್ ರಿಪೋರ್ಟ್​​ನೊಂದಿಗೆ ಒಟ್ಟು 65 ಜನ ಅಯ್ಯಪ್ಪ ಭಕ್ತರ ತಂಡ ಶಬರಿಮಲೆಗೆ ತೆರಳಿತ್ತು.‌ ಅಲ್ಲಿಂದ 65 ಜನ ವಾಪಸ್‌ ಆದ ತಕ್ಷಣ ಆರೋಗ್ಯ ಇಲಾಖೆ ಸಿಬ್ಬಂದಿ ಸ್ವಾಬ್ ಟೆಸ್ಟ್ ಮಾಡಿ ಕ್ವಾರಂಟೈನ್​ಗೆ ಒಳಪಡಿಸಿದ್ದಾರೆ..

Davanagere
ದಾವಣಗೆರೆ
author img

By

Published : Jan 21, 2022, 8:22 PM IST

ದಾವಣಗೆರೆ : ಬೆಣ್ಣೆನಗರಿ ದಾವಣಗೆರೆಯಲ್ಲಿ ಕೊರೊನಾ ತಾಂಡವವಾಡುತ್ತಿದೆ. ಇದು ಒಂದೆಡೆ ಓಂ ಶಕ್ತಿಗೆ ತೆರಳಿದ ಭಕ್ತರಿಗೆ ಭಯವಾದ್ರೆ, ಮತ್ತೊಂದೆಡೆ ಶಬರಿಮಲೈ ಅಯ್ಯಪ್ಪ ಭಕ್ತರಲ್ಲಿ ಸೋಂಕು ಹೆಚ್ಚಳವಾಗಿರುವುದು ಜಿಲ್ಲಾಡಳಿತಕ್ಕೆ ದೊಡ್ಡ ತಲೆನೋವಾಗಿದೆ.

ತಾಲೂಕಿನ ಕುಕ್ಕವಾಡ ಬಳಿ ಇರುವ ಆಂಜನೇಯ ನಗರದಿಂದ ಶಬರಿಮಲೆಗೆ ಹೋಗಿದ್ದ 65 ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆಗ 31 ಜನರಿಗೆ ಕೊರೊನಾ ಪರೀಕ್ಷಾ ವರದಿ ಪಾಸಿಟಿವ್ ಬಂದಿದೆ. ಇದೀಗ ಅವರಿಗೆ ಸ್ವಾಬ್ ಟೆಸ್ಟ್ ಮಾಡಿ ಕ್ವಾರಂಟೈನ್​​ಗೆ ಒಳಪಡಿಸಲಾಗಿದೆ.

ಕೊರೊನಾ ಕುರಿತಂತೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿರುವುದು..

ಇತ್ತೀಚೆಗೆ ತಮಿಳುನಾಡಿನಲ್ಲಿರುವ ಓಂಶಕ್ತಿ ಧ್ಯಾನ ಕೇಂದ್ರಕ್ಕೆ ತೆರಳಿದ್ದ ಭಕ್ತರಿಗೂ ವೈರಸ್​ ತಗುಲಿತ್ತು. ದೈವ ಯಾತ್ರೆಗೆ ತೆರಳಿದವರು ವಿವಿಧ ರಾಜ್ಯಗಳಲ್ಲಿ ಸುತ್ತಾಡಿ ಜಿಲ್ಲೆಗೆ ಬಂದಿದ್ದೆ ಕೊರೊನಾ ಹೆಚ್ಚಾಗಲು ಕಾರಣ‌ ಎಂಬುದು ಆರೋಗ್ಯ ಇಲಾಖೆಯ ವಾದವಾಗಿದೆ.

ಜಿಲ್ಲೆಯಲ್ಲಿ 1218 ಸಕ್ರಿಯ ಕೊರೊನಾ ಪ್ರಕರಣಗಳಿವೆ. ಜನ ಆತಂಕದಲ್ಲೇ ಕಾಲ ಕಳೆಯುತ್ತಿದ್ದಾರೆ. ಸೋಂಕಿತರ ಪತ್ತೆಗೆ ಎಸ್​ಪಿ ಸಿ ಬಿ ರಿಷ್ಯಂತ್ ಹಾಗೂ ಆರ್​​ಟಿಒ ಅಧಿಕಾರಿಗಳು ಬಳಕೆ ಮಾಡಿರುವ ವಾಹನಗಳ ನಂಬರ್ ಕಲೆ ಹಾಕಿ ಅಯ್ಯಪ್ಪ ಸ್ವಾಮಿ ಭಕ್ತರನ್ನು ಪತ್ತೆ ಹಚ್ಚಿ, ಕ್ವಾರಂಟೈನ್ ಮಾಡಿಲಾಗುತ್ತಿದೆ.

ಓದಿ: ದತ್ತು ಮಗಳ ಮೇಲೆ ಅತ್ಯಾಚಾರದ ಆರೋಪ.. ಪದ್ಮ ಪ್ರಶಸ್ತಿ ಪುರಸ್ಕೃತ ಉದ್ಧಬ್​​ ಜೈಲು ಪಾಲು

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.