ETV Bharat / state

ರಾಷ್ಟ್ರಮಟ್ಟದ ಸೀನಿಯರ್‌ ಕುಸ್ತಿ ಚಾಂಪಿಯನ್‌ಶಿಪ್​ಗೆ ಆಯ್ಕೆ ಪ್ರಕ್ರಿಯೆ - ETV Bharath Kannada

ಗರಡಿ ಮನೆ, ಕ್ರೀಡಾ ಹಾಸ್ಟೆಲ್​, ರೈಲ್ವೆ ಹಾಗೂ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕುಸ್ತಿಪಟುಗಳ ನಡುವೆ ಕುಸ್ತಿ ಚಾಂಪಿಯನ್‌ಶಿಪ್ ನಡೆದಿದ್ದು, ಇಲ್ಲಿ ಆಯ್ಕೆಯಾದವರಿಗೆ ಆಂಧ್ರದಲ್ಲಿ ನಡೆಯುವ ಸೀನಿಯರ್​ನಲ್ಲಿ ಆಡುವ ಅವಕಾಶವಿದೆ.

Fight for the senior national level wrestling championship
ಸಿನೀಯರ್ ರಾಷ್ಟ್ರ ಮಟ್ಟದ ಕುಸ್ತಿ ಚಾಂಪಿಯನ್​ ಶಿಪ್​ಗೆ ಸೆಣಸಾಟ
author img

By

Published : Dec 11, 2022, 10:10 AM IST

ರಾಷ್ಟ್ರಮಟ್ಟದ ಕುಸ್ತಿ ಚಾಂಪಿಯನ್ಶಿಪ್‌ಗಾಗಿ ಸೆಣಸಾಟ

ದಾವಣಗೆರೆ: ರಾಷ್ಟ್ರಮಟ್ಟದ ಸೀನಿಯರ್ ಕುಸ್ತಿ ಚಾಂಪಿಯನ್‌ಶಿಪ್​ನಲ್ಲಿ ಭಾಗಿಯಾಗಲು ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬೆಳ್ಳೂಡಿ ಗ್ರಾಮದಲ್ಲಿರುವ ಕನಕಗುರು ಪೀಠದ ಶಾಖಾ ಮಠದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಗರಡಿ ಮನೆ, ಕ್ರೀಡಾ ಹಾಸ್ಟೆಲ್​, ರೈಲ್ವೆ ಹಾಗೂ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಕುಸ್ತಿಪಟುಗಳು ಭಾಗವಹಿಸಿದ್ದರು. ಇಲ್ಲಿಂದ ಆಯ್ಕೆಯಾದವರು ಆಂಧ್ರಪ್ರದೇಶದ ವಿಶಾಖಪಟ್ಟಣಂದಲ್ಲಿ ರಾಷ್ಟ್ರಮಟ್ಟದ ಸೀನಿಯರ್ ಕುಸ್ತಿ ಚಾಂಪಿಯನ್‌ಶಿಪ್​ನಲ್ಲಿ ಭಾಗವಹಿಸುತ್ತಾರೆ.

ಆಯ್ಕೆ ಪ್ರಕ್ರಿಯೆಗೆ ಸುಮಾರು 200ಕ್ಕೂ ಹೆಚ್ಚು ಅಭ್ಯರ್ಥಿಗಳು ಬಂದಿದ್ದರು. ಸೀನಿಯರ್ ಕುಸ್ತಿಯಲ್ಲಿ ಗೆದ್ದವರಿಗೆ ಭಾರತ ಸರ್ಕಾರದಿಂದ ಹಲವು ಸೌಲಭ್ಯಗಳು ದೊರೆಯಲಿದ್ದು, ಅಂತಾರಾಷ್ಟ್ರೀಯ ಕ್ರೀಡೆಗಳಿಗೆ ತರಬೇತಿ​ಯೂ ದೊರೆಯಲಿದೆ. ಸೀನಿಯರ್​ನಲ್ಲಿ ಗೆದ್ದವರಿಗೆ ಒಲಿಂಪಿಕ್ಸ್​, ಏಷ್ಯನ್​ ಗೇಮ್ಸ್​ ಮತ್ತು ಕಾಮನ್​ವೆಲ್ತ್​ನಲ್ಲೂ ಆಡುವ ಅವಕಾಶವನ್ನು ಕೇಂದ್ರ ಸರ್ಕಾರ ಮಾಡಿಕೊಡಲಿದೆ.

ತರಬೇತಿ, ಉದ್ಯೋಗದಲ್ಲಿರುವ ರೈಲ್ವೆ ಹಾಗೆಯೇ ಸೇನಾ ಕುಸ್ತಿಪಟುಗಳೊಂದಿಗೆ ಸ್ಥಳೀಯವಾಗಿ ಗರಡಿ ಮನೆಯಲ್ಲಿ ಕಲಿತ ಮತ್ತು ಕ್ರೀಡಾ ಹಾಸ್ಟೆಲ್​ ವಿದ್ಯಾರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಕುಸ್ತಿಯ ವಿವಿಧ ವಿಭಾಗಗಳಲ್ಲಿ ಇಲ್ಲಿಂದ ಆಯ್ಕೆ ಮಾಡಿ ಸೀನಿಯರ್ಸ್​ಗೆ ಕಳುಹಿಸುತ್ತೇವೆ ಎಂದು ರಾಜ್ಯ ಕುಸ್ತಿ ಸಂಘದ ಉಪಾಧ್ಯಕ್ಷ ವೀರೇಶ್ ತಿಳಿಸಿದರು.

ಗ್ರಾಮೀಣ ಸ್ಥಳೀಯ ಯುವ ಕ್ರೀಡಾಪಟುಗಳು ಪ್ರಕ್ರಿಯೆಯಲ್ಲಿ ಆಯ್ಕೆಯಾಗಿ ಸೀನಿಯರ್ ನ್ಯಾಷನಲ್​ನಲ್ಲಿ ಮೆಡಲ್ ಹಾಗು ಸರ್ಟಿಫಿಕೇಟ್ ಪಡೆದರೆ ಅಂತಹ ಪ್ರತಿಭೆಗಳು ಸರ್ಕಾರಿ ಕೆಲಸಕ್ಕೆ ಅರ್ಹರು ಎಂದು ಅಂತಾರಾಷ್ಟ್ರೀಯ ಕುಸ್ತಿಪಟು ಕಾರ್ತೀಕ್ ಕಾಟೆ ಹೇಳಿದರು.

ಇದನ್ನೂ ಓದಿ: ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಶಿಪ್‌.. ಚಿನ್ನದ ಪದಕ ಗೆದ್ದ ಅಭಿನವ್ ಶಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.