ದಾವಣಗೆರೆ: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ದಿನದ ಪ್ರಯುಕ್ತ ಬಿಜೆಪಿ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಜಿಲ್ಲೆಯಲ್ಲಿ ಸದ್ಭಾವನಾ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು.
ನಗರದ ಎಪಿಎಂಸಿ ಬಂಬೂ ಬಜಾರ್ ರಸ್ತೆಯಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ್ ಪಾದಯಾತ್ರೆಗೆ ಚಾಲನೆ ನೀಡಿದರು. ಎಪಿಎಂಸಿ ರಸ್ತೆಯಿಂದ ಗಣೇಶ ಹೋಟೆಲ್ ರಸ್ತೆ ಮೂಲಕ ಹೊಂಡದ ವೃತ್ತಕ್ಕೆ ಪಾದಾಯತ್ರೆ ಮುಕ್ತಾಯಗೊಳಿಸಲಾಯಿತು. ನಂತರ ಸಾರ್ವಜನಿಕ ಬಹಿರಂಗ ಸಭೆ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಜಿ.ಎಂ.ಸಿದ್ದೇಶ್ವರ್, ಕಾಂಗ್ರೆಸ್ನವರು ಗಾಂಧೀಜಿ ಹೆಸರಲ್ಲೇ ಅಧಿಕಾರಕ್ಕೆ ಬಂದರು. ಆದರೆ ಬಳಿಕ ಗಾಂಧೀಜಿಯವರನ್ನು ಸ್ಮರಿಸುವುದನ್ನು ಮರೆತರು. ಸಂವಿಧಾನ ತಂದುಕೊಟ್ಟ ಅಂಬೇಡ್ಕರ್ರನ್ನು ಸಹ ಮರೆಯುವಂತಹ ಕೆಲಸ ಆಗುತ್ತಿದೆ ಎಂದು ಹೇಳಿದರು.